ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ತಾತ್ವಿಕ ಕೃತಿಗಳು ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ ರಾಮಾನುಜ ಬೆಳೆದ ಧರೆಯೊಳಗೆ ಅ.ಪ ನಾರದ ಬಿತ್ತಿದ ನಾರಾಯಣ ಬೀಜಕೆ ಧೀರಾಂಬರೀಷನು ಗೊಬ್ಬರವಾದ ಕು- ಮಾರ ಪ್ರಹ್ಲಾದನು ನೀರಾಗೆರೆದ ಆ ರುಕುಮಾಂಗದ ಗಾಳಿಯಾದ1 ನಾರಾಯಣನೆಂಬ ಬೀಜಮಂತ್ರವು ಕು- ವರ ಧ್ರುವನ ಕಾವಲಿನಲ್ಲಿ ಸರಸರ ಬೆಳೆಯಿತು ಆಳುವಾರರು ಭೂ ಸುರ ಭಾಗವತರುಗಳಲಿ 2 ರಮಾನುಜನಿದರ ಒಕ್ಕಣೆಮಾಡಿ ಸಮಾನತೆಯಿಂದ ಹಂಚಿದನು ಶ್ರಿಮಣಿಯಲ್ಲಿ ತುಂಬಿದನು ಸಮಾನ ವೇದವೆನಿಸಿದನು 3 ಹಬ್ಬಿತು ಹರಡಿತು ಧರೆಯೆಲ್ಲ ಉಬ್ಬಿತು ಉಲಿಯಿತು ಗಿರಿಯೆಲ್ಲ ಅಬ್ಬಬ್ಬ ಜಾಜಿಪುರೀಶ ಕೇಶವನಾಮವು ಹಬ್ಬವಾಯಿತು ನಮಗೆಲ್ಲ 4
--------------
ನಾರಾಯಣಶರ್ಮರು
3. ನೀತಿಬೋಧೆ ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ. ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ 1 ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ 2 ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ3 ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ 4 ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ 5
--------------
ಶ್ರೀಪಾದರಾಜರು
ಕೆಳದಿ ಕೇಳುವ ಬಾರೆ ನಳಿನಾಕ್ಷ ವನದಲ್ಲಿ ಕೊಳಲನೂದುವ ಬಗೆಯ ನಳಿನಜಾಂಡವು ತಾನೆ ತಲೆದೂಗುತಲಿದೆ ಕುಳಿತಿರೆ ವಶವಲ್ಲವೆ ಪ ಸರಸಿಜ ನಯನಾಳೆ ಧರೆಯ ಭಾಗ್ಯವ ನೋಡೆ ತರುಗುಲ್ಮಾಲತೆ ನೆವದಿ ಭರದಿ ಪುಲಕಿತಳಾಗೆ ಪರಿಪರಿ ಸುಮದಿಂದ ನೆರೆ ನಸುನಗುತಿಪ್ಪ ಮರುಳೆ ಕಣ್ಣಿಲಿ ನೋಡೆ ವರ ವಿಮಾನಗಳು ಸಂ- ಚರಿಸಿ ಮೆರೆವ ವೈಭವ ಧರೆಯೆಲ್ಲಾ ತಿಳಿಯದು ಲೋಲ್ಯಾಡದೆ ಬಿಡರು 1 ವಾಮಾಲೋಚನೆ ಸುರರ ಧಾಮಾವೆಂಬಿಯಾ ಇದು ಕಾಮತನಯ ಕಾಮದೇವ ಸೋಮಶೇಖರ ತಾನು ತಾಮರಸಾಸನ ಪ್ರೇಮಾದಿ ನಲಿಯುವ ಆ ಮಹರಾದಿ ಲೋಕವೆ ಸಾಮಜಗಮನೆ ಕೇಳೆ ನೀ ಮರುಳಾಗ ಬ್ಯಾಡಾ ಆ ಮುಕುತಿ ಸ್ಥಾನವೆ ಸೇವೆ ಮಾಡುವರು 2 ದೂರ ಜನರಿಗೆ ಸಾಲೋಕ್ಯ ಊರಲಿಪ್ಪರಿಗೆ ಸಾಮೀಪ್ಯ ಗೋರಕ್ಷಕರಿಗೆ ಸಾರೂಪ್ಯ ಸೇರಿದ ಯುವತಿಗೆ ಭರದಿ ಸಾಯುಜ್ಯವೆ ಮೀರಿದೆ ಮುಕುತಿಗಿದು ಭಾರಿ ಭಾರಿಗೆ ಸಾಮಾ ಪೂರೈಸಿ ಮುಕುತರು ತೋರುವರಿಲ್ಲಿ ಆನಂದ ಈ ರಭಸದಿ ವೇಣು ಪೂರೈಸಿ ಸುಖವೀವ ಧೀರ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ 1 ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2 ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3 ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4 ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5 ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6 ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7 ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ 8
--------------
ಚಿದಾನಂದ ಅವಧೂತರು
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ
ಎಂಥ ಸುಖ ಎಂಥ ಸುಖ ಎಂಥ ಸುಖವಲಕ್ಷ್ಮಿಕಾಂತನ ಪೂಜಿಸಿ ಸಂತೋಷ ಪಡುವರುಕುಂತಿ ಮಕ್ಕಳುಕೆಲದಿಪ.ಜಾಳಿಗೆ ಮುತ್ತಿನ ಕವಚಭಾಳ ರತ್ನಗಳ ವಸ್ತಏಳು ಲೋಕಗಳ ಬೆಳಗುವಏಳು ಲೋಕಗಳ ಬೆಳಗುವ ಪೀತಾಂಬರವ್ಯಾಳಾಶಯನಗೆ ದೊರೆಕೊಟ್ಟ 1ಸರಮುತ್ತು ಹೆಣಿಸಿದ ಬರಿಯ ಮಾಣಿಕದ ವಸ್ತಧರೆಯೆಲ್ಲ ಬೆಳಗುವಪಟ್ಟಾವಳಿಧರೆಯೆಲ್ಲ ಬೆಳಗುವಪಟ್ಟಾವಳಿಕುಪ್ಪುಸನಾರಿ ರುಕ್ಮಿಣಿಗೆ ದೊರೆ ಕೊಟ್ಟ 2ಮುತ್ತು ಮಾಣಿಕ ರತ್ನ ತೆತ್ತಿಸಿದ ಆಭರಣಹತ್ತು ದಿಕ್ಕುಗಳ ಬೆಳಗುವಹತ್ತು ದಿಕ್ಕುಗಳ ಬೆಳಗುವ ಛsÀತ್ರ ಚಾಮರಸತ್ಯಭಾಮೆಗೆ ದೊರೆಕೊಟ್ಟ 3ಆನೆ ಕುದುರೆಯ ಸಾಲು ಎಷ್ಟೋ ರಥಗಳುಮಾನದ ಕಾಲಾಳು ಮೊದಲಾಗಿಮಾನದ ಕಾಲಾಳು ಮೊದಲಾಗಿ ಹರುಷದಿಶ್ರೀನಿವಾಸಗೆ ದೊರೆಕೊಟ್ಟ 4ಕುದುರೆ ಪಲ್ಲಕ್ಕಿ ರಥಸಾಲು ಬಿರುದಿನ ನೌಬತ್ತುಛsÀತ್ರ ಚಾಮರವು ಮೊದಲಾದಛsÀತ್ರ ಚಾಮರ ಮೊದಲಾದ ಉಚಿತವಮುದದಿ ರುಕ್ಮಿಣಿಗೆ ದೊರೆ ಕೊಟ್ಟ 5ಸಾವಿರ ಅಬುಜ ಕುದರಿ ಸಾಲಾದ ರಥಗಳುಮ್ಯಾಲೆ ಪಲ್ಲಕ್ಕಿ ಮೊದಲಾಗಿಮ್ಯಾಲೆ ಪಲ್ಲಕ್ಕಿ ಮೊದಲಾಗಿ ಛsÀತ್ರವಸತ್ಯಭಾಮೆಗೆ ದೊರೆಕೊಟ್ಟ 6ದೊರೆಯು ಧರ್ಮನು ಹರಿಗೆ ಬಿರುದು ಬಿನ್ನಾಣಗಳ ಕೊಟ್ಟಕರಗಳ ಮುಗಿದು ಶಿರಬಾಗಿಕರಗಳ ಮುಗಿದು ಶಿರಬಾಗಿ ರಾಮೇಶನಪರಮಪ್ರೀತಿ ಇರಲೆಂದು7
--------------
ಗಲಗಲಿಅವ್ವನವರು