ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಕಿದೇ ನಡಿ ಕುರುಹು | ಶ್ರೀ ರಮಾನಾಥಾಂಘ್ರಿಯ ಕಾಣುವದರಿತು ಪ ಕೋಪ ತಾಪವ ಬಿಡಬೇಕು ಪಶ್ಚಾ | ತ್ತಾಪದಿ ವೈರಾಗ್ಯ ಘನ ಬಲಿಬೇಕು | ಪಾಪವಿರಹಿತಾಗಬೇಕು | ಗತಿ | ಸೋಪಾನವಾದಾ ಶಾಂತಿಯ ಜಡಿಬೇಕು 1 ಕರುಣ ಮೂರುತಿ ಆಗಬೇಕು ಸರ್ವ | ಧರೆಯು ಜನಕ ಪ್ರಿಯವಾಗಿರಬೇಕು | ನೆರೆ ಲೋಭವನು ಜರಿಬೇಕು ತನ್ನ | ತೆರನರಿ ತನ್ನವ ನೀಡಲಿಬೇಕು 2 ದುರಿತ ಭಯವ ಬಿಡಬೇಕು | ದುಃಖ | ದುರ್ವಾಣಿಯಲಿ ತಾ ಬಳಲದಿರಬೇಕು | ಹರಿಭಕ್ತಿ ದೃಢಗೊಳ್ಳಬೇಕು ಗುರು | ಬೋಧ ನಿಜವೆನಬೇಕು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತತ್ವಚಿಂತನೆ ಅರಿಯಲಳವೇ ಜ್ಞಾನಿಯ ಹೊರಗಿನ ಬಡರೂಪದಿ ಪ ಧರೆಯು ಉದರದಿ ನೆಲಸಿಹ ಪರಿಪರಿ ವಿಧ ಸಿರಿಯನು ಅರಿವುದು ಬಲುಸುಲಭವೆ ಅ.ಪ ಹುಚ್ಚರಂದಿ ಕಾಂಬೋರು ಜನ ಮೆಚ್ಚಿಗೆಯನು ಬಯಸರು ಅಚ್ಚರಿಯಲಿ ನಡೆವರು ಎಚ್ಚರಿಕೆಯ ಪೊಂದದಂತೆ 1 ಒಡವೆ ವಸನಗಳೆಲ್ಲವ ಸಡಗರವನು ಅರಿಯರು ಕಡು ಬಡತನ ಕ್ಲೇಶಕೆ ನಡುಗಲರಿಯರು ಸುಲಭದಿ 2 ಮೇದಿನಿಯಲಿ ದಿನಗಳ ಮೋದದಿಂದಲಿ ಕಳೆವರು ಮಾಧವನಲಿ ಭಕುತರು ಬೂದಿ ಮುಚ್ಚಿದ ಕೆಂಡದಂತೆ 3 ಮರುಳು ಮೋಸವನರಿಯರು ಸರಳಮನದಲಿ ಇರುವರು ಕೆರಳಿದ ಸುಮದಂದದಿ ತಿರುಳುಗಳನು ಸುಲಭದಿ 4 ಭಕ್ತ ಪ್ರಸನ್ನನೊಳು ಆಸಕ್ತ ಸನ್ಮನ ಯುಕ್ತರು ಯುಕ್ತಿ ಚತುರತೆಯರಿಯರು ಹುತ್ತದೊಳಿಹ ಸರ್ಪದಂತೆ 5
--------------
ವಿದ್ಯಾಪ್ರಸನ್ನತೀರ್ಥರು
ಶ್ರೀರಂಗಪುರದೊಳ್ ಮೆರೆವ ಗಂಗಾಪಿತಗೆ ಮಂಗಳಂ ಶ್ರೀರಂಗನಾಯಕಿ ಮನೊಹರಂಗೆ ಮಂಗಳಂ ಪ. ವರದೆಕಾವೇರಿ ಸುತ್ತುವರಿಸಿ ಮೆರೆಯಲು ಉರಗತಲ್ಪದಿ ಶಿರಕೆ ಬಲದಕರವೆÀ ದಿಂಬಿರಲ್1 ಚರಣತಲದಿ ಮೆರೆಯೆ ಸಿರಿಯು ಧರೆಯು ಕುಳ್ಳಿರೆ ಪರಮಭಾಗವತರು ಮುಂದೆ ನೆರೆದು ನಿಂದಿರೆ 2 ಇಕ್ಕೆಲದಿ ಮೆರೆವ ಗಂಗಾ ಗೌರಿ ಅಕ್ಕತಂಗಿಯರ್ ನಕ್ಕುನಲಿವನೊಂದೆಡೆ ಮುಕ್ಕಣ್ಣ ಸನಿಯದಿ 3 ಆರ್ತಜನರ ಪೊರೆವನೆಂಬ ಕೀರ್ತಿಗೊಂಡಿಹ ಕರ್ತೃನೃಹರಿ ತನ್ನರಸಿಯೊಡನೆ ಇತ್ತ ಮೆರೆಯುವ 4 ಉಭಯಕಾವೇರಿ ಮಧ್ಯದಿ ಪ್ರಭುವು ತಾನೆನೆ ವಿಭವದಿಂದ ಮೆರೆವನೀಪರಿ ಪ್ರಭೆಯ ಬೀರುತ 5 ಶರಣಜನರಿಗೆರೆಯ ಶೇಷಗಿರಿಯ ವರದನ ಕರುಣ ಶರಧಿರಂಗಪುರದ ವರದನೆಂಬೆನೆ 6
--------------
ನಂಜನಗೂಡು ತಿರುಮಲಾಂಬಾ
ನಳಿನಜಾಂಡತಲೆಯದೂಗೆ |ಇಳೆಯು ನಲಿದು ಮೋಹಿಸುತಿರಲು ||ಕೊಳಲ ಪಿಡಿದು ಬಾರಿಸಿದನು |ಚೆಲುವ ಕೃಷ್ಣರಾಯನು ಪಪೊಳೆವ ಪೊಂಬಟ್ಟೆಯ ದಟ್ಟಿ |ಅಳವಡಿಸಿ ನೆಗಹಿನಿಂದ ||ಹಲವು ರನ್ನದುಂಗುರವಿಟ್ಟ |ಚೆಲುವ ಬೆರಳ ನಟಿಸುತ |||ಲಲಿತವಾಮಭಾಗತೋಳ-|ಲೊಲಿದು ಓರೆನೋಟದಿಂದ ||ಬಲದಪಾದಎಡಕೆ ಚಾಚೆ |ನಳಿನಪದಗಳೊಪ್ಪುತಿರಲು 1ಸೆಳನಡುವಿನೊಳಗೆ ಕತ್ತರಿ |ಕಳೆಯ ಸಂಚಿ, ಗಜುಗು ಚೀಲ ||ಬಿಳಿಯ ಮಣಿಯು ಗುಳ್ಳೆಗಳಿರಲು |ಮಲಯಜಾನು ಲೇಪನ ||ಜಲಜನೇತ್ರ ಕೌಸ್ತುಬಾಧಿ-|ಗಳದಿ ಸ್ವರಗಳೊಪ್ಪುತಿರಲು ||ಲಲಿತವೇಣುಕಲ್ಪನೆಯಲಿ ಗೋ-|ವಳರೆಲ್ಲರು ಕುಣಿಯಲು 2ಮಾರವಿ ದೇಸಿ ಗುರ್ಜರಿ ಭೈರವಿ |ಗೌರಿನಾಟಿಸಾವೇರಿ ಆಹೇರಿ ||ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|ಶಕರಾಭರಣ ರಾಗದಿ ||ಪೂರವಿ ಕಲ್ಯಾಣಿ ವಸಂತ ತೋಡಿ |ವರಾಳಿ ಗುಂಡಕ್ರಿ ಸಾರಂಗ ಸಾಳಗ ||---------------------ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3ಹರುಷದಿ ಬಾರಿಸುವ ರವಕೆ |ಪುರದ ಸ್ತ್ರೀ ಜನರು ಎಲ್ಲ ||ಮರೆದು ಮಕ್ಕಳ ಮನೆಯ ಕೆಲಸ |ಮರೆದು ಹರಿಯ ಬಳಸಲು ||ಕರಿಯು ಮೃಗವುಕೇಸರಿಶರಭ|ಹರಿಣ ನವಿಲುಉರಗಮೋಹಿಸಿ ||ನೆರೆದು ಮರೆದು ಜಾತಿವೈರವ |ಸ್ವರವ ಕೇಳುತಿರಲು 4ಕರಗೆ ಗಿರಿಯ ಕಲ್ಲು ತರುಗ-|ಳೆರಗಿ ಪಕ್ಷಿ ತತಿಗಳಿರಲು ||ಸುರರುಸುಮನ ಸುರಿಯುತಿರಲು |ಧರೆಯು ಮುದದಿ ಕುಣಿಯುತಿರಲು ||ಶರಧಿಉಕ್ಕಿಸರಿತುಸೊಕ್ಕಿ |ಪುರರಿಪುವಿಧಿಪೊಗಳುತಿರಲು ||ವಿರಚಿಸಿದ ಪುರಂದರವಿಠಲ |ಮುರಲಿಗಾನ ಮಾಡಿದ 5
--------------
ಪುರಂದರದಾಸರು