ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

-------ಅರಿಯೆ ----ನಡತಿ ಮಾರ್ಗವನೂ ಹೀನಮಾನವ ನಾನು ಯಂ ---- ಹರೇ ಪ ನಾನಾಯೋನಿಗಳಲ್ಲಿ ನಟಿಸಿನಟಿಸಿ ಇಲ್ಲದೆ ಇರೊ ವಿಧಾನ ಒಂದಲ್ಲದೆ 1 ದರಿ----ರ್- ಸರತಿ ತಿಳಿದಿನ್ನು ಧೀನ ರಕ್ಷಕ ನಿನ್ನ ದಿನಚರ್ಯ ವರ್ಣಿಸುವರ ಕಾಣುತಲೆ ವಂದಿಸಿ ಕಾಲುಹಿಡಿವದು ಅರಿಯೆ 2 ವೇದಾದಿ ಸಕಲವು ವಿದ್ಯಶಾಸ್ತ್ರವನರಿಯೆ ಮೇದಿನಿಯೊಳು ನಡೆವ ಸುಮಾರ್ಗ ನಾನರಿಯೆ ಗಾಧಿ ಬೋಧಿಗಳೀಗೆ ಒಳಗಾಗಿ ಈ ಪರಿಯೆಗಾಧೆಯೊಳಗೆ ಬಿದ್ದನ ಕೈ ಪಿಡಿಯೊಧೊರಿಯೆ 3 ಆಗ ಅಂತರಂಗದಾ ಭಾವನರಿಯೆ ನಾಗಶಯನ ನಿಮ್ಮ ನಾಮವೆಂಬುದು ಅರಿಯೆ ಕೃಪೆತೋರಿ ರಕ್ಷಿಸಯ್ಯಾ ಹರಿಯೆ 4 ಸಕಲಾವು ನೀನೆಂದು ಸಾರುವ ಧರೆಯಾ ಭಕ್ತವತ್ಸಲನೆಂಬ ಬಿರುದು ನಿಂದರಿಯಾ ಅಕಳಂಕ ಮಹಿಮ `ಹೊನ್ನವಿಠ್ಠಲನೆ’ ಪ್ರೀಯಾ ಮುಕುತಿದಾಯಕ ಆಲಸ್ಯನಾದವನ ಪೊರೆಯಾ 5
--------------
ಹೆನ್ನೆರಂಗದಾಸರು
ಉದಕ ಕಡೆದರೆ ಬೆಣ್ಣಿಲ್ಲಿಹ್ಯದೋ ಪ ಜೀವನ ಬಳಿಗ್ಹೋಗಿ ದೈನ್ಯಬಡುತ ಬಲು ಮಣಿದು ಬೇಡಲಲ್ಲೇನಿಹ್ಯದೋ ಅ.ಪ ಕಾಣದೆ ಬೊಗಳಿದರೇನಾದೋ ಒಣ ಗಾಣಾತರುವವಲಲ್ಲೇನಾದೋ ಕೋಣನ ಬಳಿಗ್ಹೋಗಿ ಸಾನುರಾಗದಿ ಒಳ್ಳೆ ವೀಣೆ ನುಡಿಸಲಲ್ಲೇನಾದೋ 1 ದೀನನ ಕಾಡಲು ಏನಾದೋ ಮಹ ಹೀನನ ಸೇರಿದರೇನಾದೋ ಜ್ಞಾನಬೋಧಾಮೃತ ಜಾಣತನದಿ ಅ ಜ್ಞಾನಿಗೆ ತೋರಿದರೇನಾದೋ 2 ಭಂಡರ ದಂಡಿಸಲೇನಾದೋ ಮಿಂಡೆ ಷಂಡನ ಕೂಡಿದರೇನಾದೋ ಮಂಡೆಬೋಳಿ ಮುಂದೆ ಗೊಂಡೆಮುತ್ತಿನ ಮಹ ದಂಡೆಯ ತಂದಿಡಲೇನಾದೋ 3 ಪಥ ಕೇಳೆಲೇನಾದೋ ಬಲು ದುರುಳ ಧರೆಯಾಳಿದರೇನಾದೋ ಕರುಣವಿಲ್ಲದ ಪರಮ ಪಾಪಿಗಳಿ ಗೆರಗಿ ಬೇಡಲಲ್ಲೇನಾದೋ 4 ಮಾನವ ಇಹ್ಯಮೆಚ್ಚಲಲ್ಲೇನಾದೋ ಮತಿ ಹೀನರ ಜಾಣತ್ವದೇನಾದೋ ಪ್ರಾಣೇಶ ರಾಮನ ಖೂನ ತಿಳಿಯದ ಮಾನವನಾದಲ್ಲೇನಾದೋ 5
--------------
ರಾಮದಾಸರು
ಜಡಮತಿ ಮನುಜ ಡಂಭವ ತ್ಯಜಿಸೊ ದೃಢದಿಂದ್ಹರಿಪಾದ ಸತತದಿ ಭಜಿಸೋ ಪ ಒಡಲೊಳ್ವಂಚಕನಾಗಿ ಹೊರಗೆ ಬಹುಮಾನವ ಪಡೆದರೆ ಹರಿ ನಿನ್ನ ಮೆಚ್ಚುವ ನೇನೋ ಅ.ಪ ನಿರುತ ಮಾನಸದೊಳ್ ಮನೆಮಾಡಿಹ್ಯ ಪ್ರಭು ಮರೆವೆ ಪರದೆ ತೆಗೆದಿರವಿಟ್ಟು ನೋಡೋ ಅರಿಯದ ನರರು ನಿನ್ಹಿರಿಯನೆನಲು ಕರಿವರದ ಕಮಲನಾಭನರಿಯನೆ ಮರುಳೆ 1 ಮರುಳನೆ ದುರಿತವ ಸ್ಮರಿಸವನಿತರಲಿ ಅರಿಯುವ ಹರಿ ನಿನ್ನಂತರದಲಿ ನಿಂದು ಮರುಳುಮತಿಯ ನೀಗಿ ಹೊರಒಳಗೊಂದಾಗಿ ಅರೆಲವನಿಲ್ಲದೆ ಪರಮನಂ ಧ್ಯಾನಿಸೋ 2 ಧರೆಮೆಚ್ಚಿ ನಡೆದರೆ ಬರುವುದೇನೆಲೊ ನಿನ ಗ್ಹರಿಮೆಚ್ಚಿ ನಡೆವುದೆ ಪರಮಸೌಭಾಗ್ಯ ಧರೆಯಾಣ್ಮ ಶ್ರೀರಾಮ ಮರೆಯಾಗುವನೆಲೋ 3
--------------
ರಾಮದಾಸರು
ಪನ್ನಗ ವೇಣಿ | ನಿನ್ನ ನಗಲಿದಾ | ಮೊದಲಿನ್ನುಕೋಮಲಾಂಗನಾ | ಮುನ್ನಿನೊಲುವನಾಕಾಣೆ | ಮಂದಗಮನೆ ಪ ಕಂಗಳೆವಿಯಾ ಸಿಕ್ಕದೆ | ನಿನ್ನನೆನೆದು | ಅಂಗ ಕಳೆಗಳ ತೋರದೇ | ರಂಗ ನೆಡಬಲ ನೋಡಾ | ಇಂಗಿತ ಮಾನಿನಿಯರಾ | ಮುಂಗೋಪಿಯಾದಾ ಕೇಳಮ್ಮಾ ಹೇಳಲೇನಮ್ಮ1 ವಿರಹ ತಾಪವ ಬರೆದು ವಿರಕ್ತಿಯಿಂದಾ | ತಿರುಕರ ವೇಷ ತಳೆದು ಧರೆಯಾಧಾರೆಯೆರೆದು | ಅರಸುತನವ ಬಿಟ್ಟು | ಮರಳ ಗೋಲರಾ ಸೇರಿದಾ | ಮಾತು ಮೀರಿದಾ 2 ವರದ ತಂದೆ ಮಹಿಪತಿ | ನಂದನ ಪ್ರಾಣಾ | ಸಾರಥಿ | ಕರುಣಾಳು ಎಂಬುದಕೆ | ತುರುಗಾವನಾಗಿ ಬಂದ | ಹರಿಣಾಕ್ಷಿ ಏಳಾಲಿಂಗಿಸೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೇದವ್ಯಾಸ ದೇವರ ಸ್ತೋತ್ರ ಏನೋ ಈ ವೇಷ ವೇದವ್ಯಾಸ ಏನೋ ಈ ವೇಷ ಪ ಭಾನುಕೋಟಿ ಪ್ರಕಾಶ ಬದರೀ ನಿವಾಸ ಅ.ಪ. ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆಕೌಪೀನ ಧರಿಸಿದ ಕೌತುಕವೇನಯ್ಯ 1 ಮುತ್ತು ಮಾಣಿಕ್ಯ ನವರತ್ನ ಮಕುಟವಿರೆನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು 2 ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲಧರೆಯಾಳು ಬೋರೆಯ ಮರದಡಿಯಲಿರುವುದು 3
--------------
ಮೋಹನದಾಸರು
ಅಂದುಂಟಿಂದಿಲ್ಲೇಮಾಧವನಿನ್ನ |ಹೊಂದಿದವರ ಭಯ ಕಳೆದು ಪೊರೆವ ದಯೆ ಪಶಂತನು ಭೂಪನರಸಿ ಬಳಲಿ |ಕಂತುಜನಕನೀ ಗತಿಯೆನಲೀ ||ಅಂತರಿಸದೆ ವಿಧವೆರಲಾಕ್ಷಣಸಂತತಿ ನೆಲಸಿದೆ ಮನ್ನಿಸುತಾ ದಯ 1ಕಲಿಯಾಳಿಕೆ ಬಹಳಾಗಿರಲು |ಮಲಿನಯುಕ್ತ ಧರೆಯಾಗಿರಲು ||ತಿಳಿದ ಹದಿನೆಂಟು ಪುರಾಣವ ವಿರಚಿಸಿ |ಸಲಹಿದೆಯುತ್ತಮ ಜೀವರನಾ ದಯೆ 2ತಿಳಿಯದೆ ನಿನ್ನೊಲುಮೆಯವಗೆಂದು |ನಳಿನಾನುಜ ನೀ ಬೇಕೆಂದು ||ಕೊಳಲರಿದರ ಕರದಿತ್ತಾರಣದೊಳು |ಗೆಲಿಸಿದೆ ತೋಂಡನ ಮುದದಿಂದಾ ದಯೆ 3ಪಾದಜಲರಸರ ಬದುಕಿಸಿತು |ಪಾದಪೆಸರೇ ಪತಿತನ ಕಾಯ್ತು ||ಪಾದದಮುಂದು ಕುಬೇರಜರೀರ್ವರ |ಪಾದವೇ ಸದ್ಗತಿಗೈದಿಸಿತಾ ದಯ 4ಆ ಸೈಂಧವನಳಿದರ್ಜುನನ |ಪೋಷಿಸಿದಂತೆ ಮೃತಾತ್ಮಜನಾ ||ಭೂಸರಗಿತ್ತಂತೀ ವಿಪ್ರರ ಪ್ರಾ |ಣೇಶ ವಿಠ್ಠಲ ರಕ್ಷಿಸಬೇಕಾ ದಯೆ 5
--------------
ಪ್ರಾಣೇಶದಾಸರು