ಹರಿಭಜನವೇ ಬಹುಮಿಗಿಲು ನರನಿಗೆ
ಧರೆಯಸುಖವೆಲ್ಲ ಸುಳ್ಳೊ ಸುಳ್ಳೋ ಪ
ತಂದೆತಾಯಿಗಳು ಮಂದಿ ಮಕ್ಕಳು
ಬಂಧುಬಳಗ ಒಂದು ಸಂಬಂಧವಿಲ್ಲ 1
ಕೋಟಿಕೊತ್ತಲ ಕೋಟಿಧನಬಲ
ನೀಟಾದ ಮಹಲು ನಿಜವಿಲ್ಲ ಇಲ್ಲ 2
ರಾಜ್ಯಭಂಡಾರ ಪ್ಯಾಟೆ ತೇಜಿ ಆನೆ ಒಂಟಿ
ರಾಜಿಪುದೆಲ್ಲ ಸುಳ್ಳ ಮುಷ್ಟಿಮುಷ್ಟಿ 3
ಸಿರಿ ಅಂದಣ ಭಾರಿ
ನಂದಿಪೋಗುವುದೆಲ್ಲ ಹಾರಿ ಹಾರಿ 4
ವರದ ಶ್ರೀರಾಮನ ಚರಣಸ್ಮರಣಿಲ್ಲದ
ನರರ ಜನುಮವೆಲ್ಲ ಹಾಳು ಹಾಳು 5