ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಗೆ ಪೋದಪೆ ಮಲ್ಲಿಮರ್ಧನ ಕೃಷ್ಣ ಗೊಲ್ಲಗೋಪಾಲನೀ ಬಲ್ಲೆನಾನಿದನು ಪ. ದೇವಕಿಯುದರದಿ ಜನಿಸಿ ಯಶೋದೆಯ ಕುವರನೆಂದೆನಿಸಿ ಮೆರೆದಂಥ ಸಾಹಸಿ 1 ಮಧುರೆಯೊಳುದಿಸಿ ನಂದವ್ರಜದಿ ಗೋವ್ಗಳ ಕಾಯ್ದು ಮದಿಸಿದಸುರರ ಸದೆವಡೆದ ಧೀರ 2 ಮಾತೆಯ ಮನಕಂದು ಪ್ರೀತಿಪಡಿಸಲೆಂದು ಮಾತುಲನನೆ ಕೊಂದು ತಾತಗೆ ನೆಲವಿತ್ತ 3 ರುಕ್ಮನ ಭಂಗಿಸಿ ರುಕ್ಮಿಣಿಯನುವರಿಸಿ ಚಕ್ರಧರ ಕೃಷ್ಣ 4 ತರುಣಿಯ ಮಾನಕಾಯ್ದು ನರಗೆ ಸಾರಥಿಯಾಗಿ ಧರೆಯಭಾರವೆಲ್ಲ ಪರಿದುಬಂದ ಮಲ್ಲ 5 ವರಶೇಷಗಿರಿದೊರೆ ನಿನಗೆ ನಾ ಹೊರೆಯೆ ಕರಿ ಧ್ರುವರನೆ ಪೊರೆದ ವರದನೆಂಬುದ ಮರೆಯೆ 6
--------------
ನಂಜನಗೂಡು ತಿರುಮಲಾಂಬಾ
ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ ಸಾರಸಾಕ್ಷನು ಸಾಮಜವರದನು ಭೂರಿಫಲಪ್ರದ ಭೂಮಿಜೆಯುತನು ಅ.ಪ ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು ದುರುಳ ದೈತ್ಯರ ಶಿರವನೆ ತರಿದು ಪರಿಪರಿ ವಿಧದಲಿ ಶರಣರಿಗೊಲಿಯುತ ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ 1 ಸೂರ್ಯಸುತನ ಸೈನ್ಯದವರ ಸುಮನಸರ ಧೈರ್ಯದಿಂ ಸಮರಗೈದವರ ವೀರಾಧಿವೀರರ ಕಾರ್ಯವ ಸಾಧಿಸಿದಾ ವಾನÀರರ ಪಾರವಶ್ಯರನು ಪರಮೇಷ್ಠಿಯಿಂದ ಧಾರೆಯನೆರೆದಮೃತದಿ ಬದುಕಿಸಿದ ಶ್ರೀ 2 ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ ಜನನಿಯರಾಶೀರ್ವಚನವ ಪಡೆದು ಸನುಮತದಿಂ ಪುರಜನರೊಲುಮೆಯೊಳು ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ 3
--------------
ಶಾಮಶರ್ಮರು