ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆತಾರೆಲೆ ರಂಗನ ಪ ಕರೆದು ತಾರೆಲೆ ಕರುಣನಿಧಿಯನು ಕರೆದು ತಾ ಕಾಲಲ್ಲಿ ಗಂಗೆಯ ಸುರಿದ ಬಾಲ ಬ್ರಹ್ಮಚಾರಿಯ ಅ.ಪ ಮತ್ಸ್ಯಾವತಾರನನು ಮುದದಿ ಮಂದರಗಿರಿಯನೆತ್ತಿದ ಸುರರಿಗಮೃತವನಿತ್ತ ಕೂರ್ಮನ ಧರೆಯನುದ್ಧರಿಸಿದ ವರಾಹನ ತರುಣಿ ನೀನೀಗ ತಂದು ತೋರೆಲೆ 1 ಭಕ್ತ ನಿಧಿಯಾದ ನರಸಿಂಹನ ಧರೆಯ ನೀರಡಿ ಅಳೆದ ವಾಮನ ದೊರೆಯ ನಾನಿನ್ನೆಂದು ಕಾಂಬೆನೆ ಭರದಿ ಭಾರ್ಗವನಾದ ರಾಮನ ತರುಣಿ ತ್ವರಿತದಿ ತಂದು ತೋರೆಲೆ2 ದಧಿಘೃತ ಮೆದ್ದವನ ದುರುಳ ತ್ರಿಪುರರ ಗೆಲಿದ ಬೌದ್ಧನ ಸುದತಿ ನೀನೀಗ ತಂದು ತೋರೆಲೆ 3
--------------
ವ್ಯಾಸರಾಯರು
ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ಪ. ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು ಬಾಧಿಪ ಖಳನುದರ ಸೀಳ್ದಗೆ ಸರಿದೋರು ಪಾದನಖದಿ ಬೊಮ್ಮಾಂಡವನೊಡೆದನ ಸಾರು ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1 ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು ಖ್ಯಾತ ದಿಗಂಬರದೇವನ ಕುಶಲವ ನೋಡು ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2 ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ ಕನಸಿನೊಳಾದರು ಪೋಗದಿರಧಮರ ಬಳಿಗೆ ಗು- ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3
--------------
ವಾದಿರಾಜ
ಶ್ರೀವರಾಹನರಹರಿ ಧನ್ವಂತರಿ15ಶರಣು ಶರಣು ಶರಣು ಭೂವರಾಹ ಮೂರುತಿಶರಣು ಶರಣು ಧನ್ವಂತರಿಶರಣು ಭಾರತೀರಮಣವಂದ್ಯನೆ ಶರಣು ನೃಹರೆ ಕೃಪಾನಿಧೆ ಪವಾರಿಧಿಯಿಂದ ಕ್ರೂರ ಅಸುರನಮುರಿದು ಧರೆಯನುದ್ಧರಿಸಿದೆಘೋರವ್ಯಾಧಿಸಮುದ್ರದಿಂದು-ದ್ಧರಿಸೊ ಎನ್ನ ಕೃಪಾನಿಧೆ 1ಸುರರ ಪೊರೆಯಲು ಅಮೃತ ತಂದೆಪರಮಪೂರುಷಭೇಷಜಶಿರ ಉರಾದಿ ಸರ್ವ ಅಂಗದಿಸುರಿದು ಅಮೃತವಪೊರೆಎನ್ನ2ಮೃತ್ಯು ಮೃತ್ಯುವೆ ದಯದಿ ಎನ್ನಪ -ಮೃತ್ಯು ತರಿದು ಪಾಲಿಸೊನಿತ್ಯಸುಖಮಯ ವಿಧಿಯತಾತಪ್ರಸನ್ನ ಶ್ರೀನಿವಾಸನೆ 3
--------------
ಪ್ರಸನ್ನ ಶ್ರೀನಿವಾಸದಾಸರು