ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಣೆಗಾಣೆನೀರ್ವರ್ಗೆ ವನಜನಯನ ಪ ಧರೆಯನಾಳುವ ಸಿರಿಯರಸ ನೀನು ಈ ಧರೆಯೊಳು ನಿರ್ಭಾಗ್ಯರೆರೆಯನಾನು 1 ಪರಮೇಷ್ಠಿಯನು ಪಡೆದ ಪರಮ ನೀನು ಬಲು ದುರಿತಂಗಳಪ್ಪಿದ ದುರುಳನು ನಾನು 2 ಪುಣ್ಯವಂತರ ಹೃದಯ ಗಣ್ಯನೀಯ ಕೃತ- ಪುಣ್ಯಹೀನಗರಿಗ್ರಗಣ್ಯ ನಾನು 3 ಪತಿತಪಾವನ ನೀನು ಪತಿತ ನಾನು [ನುತ]ದಾತ ನೀನು ನಿರ್ಗತಿಕ ನಾನು 4 ವರ ವ್ಯಾಘ್ರಗಿರಿಯ ವರದ ವಿಠಲ ನೀನು ನಿಜ- ಶರಣರ ಚರಣ ಧೂಳಿಪಟಲ ನಾನು 5
--------------
ವೆಂಕಟವರದಾರ್ಯರು
ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು ಮಕ್ಕಳಿಗಾಗಿ ಮರುಗುತ ಸೊರಗಿರಲು ಈ ಪರಿಯ ನೋಡುತ ಹರನು ಬ್ಯಾಗ ತಾ ತಿಳಿದವರ ಮನ ತಿರುಕನಂದದಿ ಬರಲು ಧಾನ್ಯವ ಕರೆದು ನೀಡಿದರೊಲ್ಲದಾಗಲೆ ತಿರುಗಿ ಪೋದನೆ ಉರಗಭೂಷಣ ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 1 ನಂದಿವಾಹನನ ಪೂಜಿಸಿ ಫಲಗಳ ಬೇಡೆ ಕಂದನಿಗಾಯುಷ್ಯವು ಐದರಾ ಮ್ಯಾಲ್ ಹ- ನ್ನೊಂದು ವರುಷವೆನಲು ವರ ನೀಡುತಿರಲು ಮಂಜುಳೆಯು ಗರ್ಭವನೆ ಧರಿಸಲು ಬಂಧುಗಳು ಹೂ ಮುಡಿಸಿ ಪರಮಸಂಭ್ರಮದಿ ಸೀ- ಮಂತ ಮಾಡಲು ತುಂಬಿತಾ ನವಮಾಸವಾಗಲೆ 2 ಜಾತವಾಗಲು ನಾಮಕರಣ ಮಾಡುತ ಚಂದ್ರಶೇಖರ- ನೆಂದ್ಹೆಸರಿಡುತ ಜಾವಳ ಜುಟ್ಟು ಪ್ರೀತಿಂದುಪನಯನ ಮಾಡುತ ವಿದ್ಯೆಗಳ ಕಲಿಸುತ ಆತಘದಿನಾರ್ವರುಷ ಬರುತಿರೆ ಪ್ರೀತಿಯಿಂದ್ಹಣಕೊಟ್ಟು ಕಾಶಿಯಾತ್ರೆಗೆನುತಲಿ ಕಳುಹೆ ಬ್ಯಾಗನೆ3 ಒಂದಾಗಿ ಅಳಿಯ ಮಾವಂದಿರು ಬರುತಿರೆ ಕಂಡಿಳಿದರು ತೋಟವ ಗೆಳತಿಯರು ಬಂದು ಹೂವಿಗೆ ಆಟವಾಡುತಲಿ ಕೋಪಿಸೆ ಒಂದಕ್ಕೊಂದು ಮಾತಾಡೆ ರಾಜ ನಂದನೆಯು ತಾ ನೊಂದುಕೊಳ್ಳದೆ ನಂದಿವಾಹನನರಸಿ ದಯವಿರಲೆಂದು ನಡೆದಳು ಮಂದಿರಕೆ 4 ಬಂದ ರಾಜನ ಮಗಳಿಗೆ ನಿಬ್ಬಣವು ಕರೆ- ತಂದರಸುಕುಮಾರನ ಧಾರೆಯನೆರೆದು ಮಂಗಳ ಸೂತ್ರವನು ಬಂಧನವ ಮಾಡಿದ- ರÀಂದದಿಂದಲಿ ಲಾಜಹೋಮವ ಬಂಧುಗಳ ಸಹಿತುಂಡು ಭೌಮವ ಚೆಂದದಿಂದಲಿ ಸುತ್ತಿಸಾಡ್ಯವ ಅಂದಿನಿರುಳಲಾನಂದವಾಗಿರೆ 5 ಸತಿಪತಿಯರು ಭಾಳ ಹಿತದಿಂದ ಮಲಗಿರೆ ಅತಿ ಹಸಿವೆನಗೆನಲು ಲಡ್ಡಿಗೆ ತಂದು ಘೃತ ಬಟ್ಟಲೊಳು ಕೊಡಲು ತಿಂದಿಡಲು ಮುದ್ರಿಕಾ ಸತಿ ಸಹಿತ ಸುಖನಿದ್ರೆಲಿರೆ ಪಾ- ರ್ವತಿಯು ಬಂದಾ ಖದ್ರುದೇವಿಸುತ ಬರುವನೆಂದ್ಹೇಳೆ ಕಳಸವ ಅತಿಬ್ಯಾಗದಿ ತುಂಬಿಟ್ಟಳುರಗವ 6 ಅತ್ತೆ ಕಾಶಿಗೆ ಪೋಗಿ ಅಳಿಯ ಮಾವಂದಿರು ಕ್ವಾಷ್ಟನ ಕರೆದು ತಂದು ಕುಳಿತಿರಲಾಗ್ವಿಚಿತ್ರ- ಭೂಷಿತಳು ಬಂದು ನೋಡುತಲಿ ನಿಂದು ಥಟ್ಟನೆದ್ದು ತಾ ತಿರುಗಿ ಪೋಗೆನ್ನ ಪಟ್ಟದರಸಿವನಲ್ಲವೆನುತಲಿ ಹೆತ್ತಜನಕ ನೀ ಅನ್ನಕ್ಷೇತ್ರವ ಇಟ್ಟು ನಡೆಸೀಗ್ವೀಳ್ಯಗಳ ಕೊಡುವುದು 7 ತಂದು ಭೋಜನಮಾಡುತ ಕುಳಿತಿರಲಾಗ ತಂದು ವೀಳ್ಯವ ಕೊಡುತ ಮುಖ ನೋಡಿ ನಗುತ ಸಂದೇಹಿಲ್ಲದೆ ಎನ್ನಪತಿ ಹೌದೆಂದು ನುಡಿದಳು ಬಂದು ಜನರು ನಿಂದು ಗುರುತೇನೆಂದು ಕೇಳಲು ತಂದು ತೋರಿದುಂ(ದಳುಂ?) ಗುರವ ಜನರಿಗೆ 8 ನಿನ್ನ ಗುರುತು ಏನ್ಹೇಳೆನ್ನಲು ಸಭೆಯೊಳು ಪನ್ನಂಗದ ಕಳಸವನು ತೆಗೆಯಲು ಬಾಯಿ ರನ್ನ ಮುತ್ತಿನ ಸರವು ಆಗಿರಲು ಉರಗವು ಕನ್ನೆಯರು ಹರಸ್ಹಾಕೆ ಕೊರಳಿಗೆ ಮನ್ನಿಸುತ ಮಹಾರಾಜ ಮಗಳನು ಚಿನ್ನದಾಭರಣಗಳು ಉಡುಗೊರೆ ತನ್ನಳಿಯಗುಪಚಾರ ಮಾಡುತ 9 ಸತಿಪತಿಯರು ತಮ್ಮ ಪಿತರ ಅಪ್ಪಣೆಗೊಂಡು ರತುನದಂದಣವೇರಲು ಮಾರ್ಗದಿ ಗೌರೀ- ವ್ರತ ಮಾಡಿ ನಡೆತರಲು ಪಿತಗ್ಹೇಳಿ ಕಳುಹಲು ಸುತನು ಬಂದರಮನೆಗೆ ಭಾಗೀ- ರಥಿಯು ಮಾತುಳ ಮಡದಿ ಸಹಿತ ಹಿತದಿ ಬಂದೆರಗಿದರೆ ಸೊಸೆಮಗ ಅತಿಹರುಷದಿಂದಪ್ಪಿ ಕೇಳುತ 10 ದಾವ ಪುಣ್ಯದ ಫಲದಿಂದ ನಿನ್ನರಸನ ಪ್ರಾಣ ಪಡೆದಿಯೆನಲು ಮಂಗಳಗೌರಿ ದೇವಿ- ದಯವಿರಲೆಂದು ಹೇಳಲು ಶ್ರೀಗೌರಿಕಥೆಯನು ಕಾಮಿತವನದೊಳಗೆ ದ್ರೌಪದಿಗ್ಹೇಳಿದನು ಭೀಮೇಶಕೃಷ್ಣನು ಮಾಡಿದರೆ ಮುತ್ತೈದೆತನಗಳ ಬೇಡಿದಿಷ್ಟಾರ್ಥಗಳ ಕೊಡುವೋಳು ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 11
--------------
ಹರಪನಹಳ್ಳಿಭೀಮವ್ವ
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಯನಗೆ ನಾನೇ ಸರಿ-ನಿನಗೆನೀನೆ ಹರಿ ಎಣಿಗಾಣೆ ನೀರ್ವರ್ಗೆ ವನಜನಯನ ಪ ಧರೆಯನಾಳುವ ಸಿರಿಯರಸ ನೀನು ಈ ಧರೆಯೊಳು ನಿರ್ಭಾಗ್ಯರೆರೆಯ ನಾನು 1 ಪರಮೇಷ್ಠಿಯನ್ನು ಪಡೆದ ಪರಮ ನೀನು ಬಲು ದುರಿತಂಗಳಪ್ಪಿದ ದುರುಳನು ನಾನು 2 ಪುಣ್ಯವಂತರ ಹೃದಯ ಗಣ್ಯ ನೀನು ಕೃತಪುಣ್ಯ ಹೀನರಿಗಗ್ರಗಣ್ಯ ನಾನು 3 ಪತಿತಪಾವನ ನೀನು ಪತಿತ ನಾನು ಸದ್ಗತಿದಾತ ನೀನು ನಿರ್ಗತಿಕನಾನು 4 ವರವ್ಯಾಘ್ರಗಿರಿಯ ವರದ ವಿಠಲನು ನೀನು ನಿಜ ಶರಣರ ಚರಣ ಧೂಳೀಪಟಲನಾನು 5
--------------
ಸರಗೂರು ವೆಂಕಟವರದಾರ್ಯರು