ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು