ಒಟ್ಟು 6 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಖೋಡ್ಯಾದಲ್ಲೋ ಸಂಸಾರ ನಾನು ನೋಡಿದ್ದಿಲ್ಲ ಪ ಏನು ಖೋಡಿದು ವಿಚಾರ ತಪ್ಪಿಸಿ ಎನ್ನ ಶ್ವಾನದಂದದಿ ಖೂನವಿಲ್ಲದೆ ಕೂಗಿಸಿತೇನು ಅ.ಪ ತಾನೆ ನಿಜವಿಲ್ಲ ಎನ್ನನು ಏನು ಕೆಡಿಸಿತಲ್ಲ ನಾನಾಪರಿಲಿ ಮಾಯಮೋಹದಿ ಮುಳುಗಿಸಿ ಜ್ಞಾನ ಕೆಡಿಸಿ ಹೀನಬವಣೆಗೆ ತಂದಿತ್ತು 1 ಕನಸಿನಪರಿಯಂತೀಜಗಸುಖ ಕ್ಷಣಹೊತ್ತಿನ ಸಂತಿ ಇನಿಸು ತಿಳಿಗೊಡದೆನ್ನ ಮನಸು ಸೆಳೆದುಕೊಂಡು ಕುಣಿಸಿ ಕುಣಿಸಿ ಮಹ ನರಕಿಯೆನಿಸಿತ್ತು 2 ಸತ್ಯಮಾರ್ಗ ಮರೆಸಿ ಎನ್ನನಸತ್ಯಮಾರ್ಗಕೆಳಸಿ ನಿತ್ಯನಿರ್ಮಲನ ಸತ್ಯ ಚರಿತೆಗಳ ಗುರ್ತು ತಿಳಿಸದೆಮಮೃತ್ಯುತೀಡೆನಿಸಿತ್ತು3 ಮರವೆಯು ಮುಚ್ಚಿತ್ತು ಭವಪಾಶ ಕೊರಳಿಗೆ ಹಾಕಿತ್ತು ಅರಿವಿನ ಕುರುಹನು ತೋರಿಸದೆ ಪರದಿರವು ಮರೆಸಿ ಧರೆಭೋಗ ಅಹುದೆನಿಸಿತ್ತು 4 ನೇಮನಿತ್ಯಕೆಡಿಸಿ ಎನಗೆ ಶ್ರೀರಾಮಪಾದಮರೆಸಿ ಕಾಮಿಸಬಾರದ ಕಾಮಿತಗಳಿಂದ ಪಾಮರನೆನಿಸೆನ್ನ ಕೊಲ್ಲುತಲಿತ್ತು 5
--------------
ರಾಮದಾಸರು
ನಿತ್ಯ ನಿರುಪಮ ನಿತ್ಯ ಎನ್ನ ಚಿತ್ತದಿ ನಿಲಿಸು ಪ ಮರವೆ ಮಾಯದೆ ಕೆಟ್ಟ ಪರದೆಯೋಳ್ಸದಾ ಬೆರೆದು ಶ್ವಾನಸೂಕರನಂತೆ ಚರಿಸಿದೆ ಧರೆಭೋಗ ನೆಚ್ಚಿ ನರಜನ್ಮ ವಿವರಿಸಿ ನೋಡದೆ ಮರುಳತನದಿ ನರಕಿಯಾದೆ 1 ಮೃತ್ಯುಗೀಡಾದೆ ತವಭೃತ್ಯನೆನಿಸದೆ ಸುತ್ತಿ ಸುತ್ತಿ ಇಹ್ಯಕೆ ಪರಕೆ ಕತ್ತೆಯಂತೆ ತಿರುಗಿ ತಿರುಗಿ ಮರ್ತು ನಿನ್ನ ಚರಣ ಮತ್ರ್ಯದಿ ನಿತ್ಯಸುಖವ ಪಡೆಯದ್ಹೋದೆ 2 ಆದದ್ಹಾಗಿಹೋಯಿತಭವ ವೇದಾಗಮ್ಯ ಪದುಮನಾಭ ಪಾದನಂಬಿದೆ ಪಾಲಿಸಿನ್ನು ಮೋದದೆನ್ನನೆತ್ತಿ ಶ್ರೀರಾಮ 3
--------------
ರಾಮದಾಸರು
ಪರಿಪರಿ ಕೊಂಡಾಡೋ ಹರಿಯನ್ನು ಮರೆದು ನೀ ಕೆಡಬೇಡೋ ಮನವೆ ಪ ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ ಹರಣಸಮಾನ ಮಾಡಿ ಕರುಣದಿಂದವರ ಇರವ ಪೂರೈಸುತ ಪೊರೆವ ಪ್ರೇಮದಿಂದ 1 ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ ಅಂತರಂಗದಿರ್ದು ಅಂತರ ತಿಳಿಯಿತು ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ 2 ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ ಆರಭಾರ ಪೊತ್ತು ಸೇರಿ ಅವರ ಬಳಿಯ ಪಾರಸಂಭ್ರಮದಿಂ ಧೀರ ನಲೀತಿಹ್ಯ 3 ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ ಸುಮನಸರಹೃದಯಕಮಲದಿ ವಾಸಿಸಿ ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ4 ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ ಬೇಡಿದ ವರಗಳ ಕಾಡದೆ ನೀಡುತ ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ 5
--------------
ರಾಮದಾಸರು
ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ ಕೂಡು ನಿಸ್ಸಂಗದೊಳು ಆಡು ಸುಸಂಗದೊಳು ಮಾಡು ನಿಜವರ್ತನಗಳು ಬೇಡು ಬಡತನದೊಳು ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು 1 ಹೀರು ಮಹಗರುವವ ತೂರು ಮದ ಮತ್ಸರವ ತೂರು ದುಷ್ಕøತ್ಯವ ಕಾರು ಬಲುವಿಕಾರವ ಮೀರು ಧರೆಭೋಗವ ತೋರು ನಿಜಧ್ಯಾನವ ಏರು ಸನ್ಮಾರ್ಗವ ಸೇರು ಹರಿಪದವ 2 ಕುಂದುಗಳನೊರೆಯದಿರು ನಿಂದೆಗಳನಾಡದಿರು ಬಂಧನಕ್ಕೆ ಬೀಳದಿರು ಮಂದತ್ವದೂರು ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ ಚಂದದಿಂ ಪಡಕೊಂಡಾನಂದದಲಿ ಸೇರು 3
--------------
ರಾಮದಾಸರು
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು