ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವರ್ಯರನು ಭಜಿಸೋ ರಾಘವೇಂದ್ರ ಗುರುವರ್ಯರನು ಭಜಿಸೋ ಪ ಧರೆತಲದಲಿ ಅವತರಿಸಿ ಸುಜನರನು ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ ಖಳರ ದುರ್ಮತಗಳನಳಿಸಿ ದಶಪ್ರಮತಿ ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ ಇಳೆಯೊಳು ಸುಜನಕೆ ತಿಳಿಯುವ ತೆರದಲಿ ಬೆಳಗುತಿರುವ ಪರಿಮಳ ಮುಖವರ ಗ್ರಂಥ ಗಳನು ರಚಿಸುತ ಉಳಿಸಿ ಸುಮತಿಯನು ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1 ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ ಕಂಗೊಳಿಸುತ ಚರಣಂಗಳ ಭಜಿಪರ ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ ಮಂಗಳ ತತಿಗಳ ನೀಡಿ ಅವರ ಆಘ ಭಂಗವಗೈಯುತ ಅನುದಿನದಲಿ ದ್ವಿಜ ಪುಂಗವ ನಿಕರದಿ ಪೂಜೆಯಗೊಂಬ ಉ ತ್ತುಂಗ ಚರಿತರಥಾಂಗಧರ ಪ್ರಿಯ 2 ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ ಯೆನ್ನಿಸಿ ಖಲಮತವನ್ನು ಖಂಡಿಸುತಲಿ ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ ಳನ್ನು ಬೋಧಿಸುತ ತನ್ನ ಭಕುತಜನ ರನ್ನು ಹರುಷದಲಿ ಧನ್ಯರೆನಿಸಿದ ಪ್ರ ಸನ್ನ ಶ್ರೀರಾಮರ ಭಕುತ ಶಿರೋಮಣಿ 3
--------------
ವಿದ್ಯಾಪ್ರಸನ್ನತೀರ್ಥರು
ಪರಸಿರಿಗೆ ಕರಗುತಿಹುದು ಸರಿಯೇ ಯೋಚಿಸು ಪ ಹರಿಯು ಕರುಣದಿಂದ ಕೊಟ್ಟ ಸಿರಿಗೆ ತೃಪ್ತನಾಗದÀಂತೆ ಅ.ಪ ಉರಗನ ನೆರಳಲ್ಲಿ ಕಪ್ಪೆಯು ಚಿರಕಾಲ ಜೀವಿಸುವುದೇ ಧರೆತಲದಲಿ ನರರ ಸಿರಿಯು ಸ್ಥಿರವಲ್ಲವೆಂದರಿಯದಂತೆ 1 ಹಲವು ಜನುಮಗಳ ಕರ್ಮದ ಫಲವನರಿತು ಮೋಸವಿಲ್ಲದೆ ನಳಿನನಾಭ ನಾರಾಯಣನೊಲಿದು ಕೊಡುವನೆಂದರಿಯದೆ 2 ಎನ್ನದೆಂದು ನಿನ್ನದೆಂದು ಖಿನ್ನನಾಗುವುದು ಸರಿಯೆ ಸನ್ನುತ ಪ್ರಸನ್ನ ಹರಿಯು ತನ್ನ ಭಾಗ್ಯವನರಿತು ನೀಡಲು 3
--------------
ವಿದ್ಯಾಪ್ರಸನ್ನತೀರ್ಥರು