ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಳಿಭಳಿರೆ ಶನಿರಾಜ ನೀನೆ ಬಲ್ಲಿದನೊ ಇಳೆ ಮೂರರಲಿ ನಿನಗಿಂ ಬಲ್ಲಿದರ ಕಾಣೆ ಪ ಧರೆಗೆಲ್ಲ ಒರ್ವನೆ ದೊರೆಯಾದ ನಳನನ್ನು ಪರರಾಯನಾಳೆನಿಸಿ ತಿರುವಿಸಿದಿ ಅಶ್ವ ವರ ಸತ್ಯ ಹರಿಶ್ಚಂದ್ರನ್ಹೊಲೆಯನಾಳೆನಿಸವನಿಂ ನಿರುತದಿಂ ಕಾಯ್ಸಿದೆಯೊ ಸುಡುಗಾಡವ 1 ಭೂಪತಿ ವಿಕ್ರಮಗೆ ಕಳ್ಳನೆಂದೆನಿಸವನ ತಾಪಬಡಿಸೆದೆಯೊ ಕೈಕಾಲುಗಳ ಕಡಿಸಿ ರೂಪಗೆಡಿಸಿದಿಂದ್ರಿನ ಮೈಯಲ್ಲಿ ತೂತ್ಹಾಕಿ ಶಾಪಕೊಡಿಸಿಂದುವಿನ ಕಳೆಯುಗುಂದಿಸಿದಿ 2 ಕುರುರಾಯನೊಂಶವಂ ನಿರ್ಮೂಲ ಮಾಡಿದೆಯೊ ತಿರಿದುಣಿಸಿದಿ ಆ ಮಹ ಪಾಂಡುನಂದನರ ಪರಮ ಸುಖಿಗಳ ಸುಖಕೆ ಕಿಡಿಯಿಟ್ಟು ನೋಡಿದಿ ವರ ತಪಸ್ವಿಗಳ ತಪಸ್ಸು ಭಂಗಪಡಿಸಿದೆಯೊ 3 ಒದಗಿ ಯಮದೇವನನ್ವಧೆ ಮಾಡಿಸಿದೆಯೊ ನೀ ಪದುಮಪೀಠನದೊಂದು ಮಸ್ತಕವ ಕಳೆದಿ ಮುದ ಕೃಷ್ಣ ಗಿಡದಡಿಯಸುವ ಬಿಟ್ಟನೆನಿಸಿದಿ 4 ಇಂತಿಂಥ ಮಹಿಮರನು ಈ ಪಾಡ ಪಡಿಸಿದಿ ನ ಮ್ಮಂಥ ನರಜನರ ಪಾಡೇನು ನಿನಗೆ ಕಂತುಪಿತ ಶ್ರೀರಾಮನನುಮತಿಯ ಪಡೆದು ಬಲ ವಂತನಿನಿಸಿದೆಯೋ ನೀ ಮೂಲೋಕದೊಳಗೆ 5
--------------
ರಾಮದಾಸರು
ಮೇಲನೆಸಗಲಿ ನಿಮಗೆ ಮಾಲಕುಮಿ ಮನ್ನಿಸುಗೆ ಪ. ಬಾಲಕರು ಬಯಸುವೆವು ಬಾಲೆಯರು ಹರಸುವೆವು ಅ.ಪ. ಮಾಧವನ ದಯೆಯಿರಲಿ ಯೊಧರಿಗೆ ಜಯವಿರಲಿ ಸಾಧನವು ಕೈಸೇರೆ ಶ್ರೀಧರನು ಮೈದೋರೆ 1 ಸಿದ್ಧಿಸಿದಾವ್ರತವೆಂದು ಶುದ್ಧಭಾವದಿ ಬಂದು ಬದ್ಧಕಂಕಣರಾಗಿ ಶ್ರದ್ಧೆಯಿಂ ಶಿರಬಾಗಿ 2 ವಾಸುದೇವನ ಸ್ಮರಿಸಿ ಮೀಸಲಂ ತೆಗೆದಿರಿಸಿ ವಾಸಪಂಥದಿ ಬೇಗ ದಾಸ್ಯಮಂ ಬಿಡಿಸೀಗ 3 ವಿಜಯದಶಮಿಯು ನಾಳೆ ವಿಜಯಯಾತ್ರೆಗೆ ತೆರಳೆ ವಿಜಯಸಾರಥಿಯೊಲಿದು ವಿಜಯವೀಯುವನಹುದು 4 ಘನತೆಗೇರುವ ನಮ್ಮ ವನಿತೆಯರೆ ನಿಮ್ಮ ಮನೆತನವ ಬೆಳಗಿಸಿರೆ ಇನಿಯರನು ಹುರಿಡಿಸಿರೆ 5 ಪೌರುಷವು ಪುಟ್ಟುವೋಲ್ ವೀರರಹುದೆನ್ನುವೋಲ್ ವೀರಮಾತೆಯರೆ ನೀಂ ವೀರಪುತ್ರರ ಪಡೆಯಿರೆ 6 ಮಕ್ಕಳಂ ತಕ್ಕೈಸಿ ತಕ್ಕಂತೆ ನುಡಿಗಲಿಸಿ ಕಕ್ಕುಲಿತೆಯಿಂ ನೋಡಿ ಅಕ್ಷರಸ್ಥರ ಮಾಡಿ 7 ಮಹಿಳೆಯರೆ ಮಾದರಿಯ ಗೃಹಿಣಿರಹೆ ಶಾರದೆಯ ಮಹಿಮೆಯದು ಕರಮೆಸೆಗೆ ವಿಹಿತಮದು ನಿಮ್ಮೊಳಗೆ 8 ದೇಶದೇಳಿಗೆಯಲ್ಲಿ ಆಸೆ ನಿಮಗಿರುವಲ್ಲಿ ದೇಶೀಯವ್ರತಧರಿಸಿ ಐಶ್ವರ್ಯಮಂ ಬೆಳಸಿ 9 ಪತಿ ಸುತ ಸಹೋದರರ ಹಿತವೆಳಸಿ ಬಾಂಧವರ ಮತವರಿತು ನಡೆಯಿಸಿರೆ ವ್ರತಸಾಂಗವೆನ್ನಿಸಿರಿ 10 ಇನ್ನೇಳಿ ಕೈನೀಡಿ ಸನ್ಮಾನೈಯರೆ ನೋಡಿ ಧನ್ಯವಾದವ ಮಾಡಿ ಮನ್ನಿಸಿರೆ ದಯೆಗೂಡಿ 11 ಬಾಲಕರು ಬೇಡುವರು ಮೇಲೆನಿಪ ಮಮತೆಯನು ಶಾಲುಸಕಲಾಸೆಯನು ಬಾಲಕರು ತಾ ಬಯಸರು 12 ತಾಯಿಯರೆ ನೀವಿತ್ತ ತಾಯ್ನಲವನಿತ್ತ ತಾಯೆಂದುಕೊಳ್ಳುವರು ಈಯಣುಗರ್ ಕೇಳಿದನು 13 ಕನ್ಯೆಯರು ಹಾಡುವರು ಕನ್ನಡವ ಪಾಡುವರು ಕನ್ನಡಕೆ ಜಯವಾಗಲೆನ್ನುವರು ನಲವೀಗೆ 14 ಹರಕೆಯನು ಸಲ್ಲಿಸಿರೆ ತರಳರಂ ಮನ್ನಿಸಿರಿ ಮರಳಿ ಬಾರೆಂದೆನಿರೆ ಹರುಷದಿಂ ಬೀಳ್ಕೊಡಿರಿ15 ವರಶೇಷಗಿರಿವಾಸ ಕರುಣದಿಂದಲೆ ಲೇಸ ಧರೆಗೆಲ್ಲ ಸಂತೋಷ ದಯೆಗೆಯೈ ಸರ್ವೇಶ16
--------------
ನಂಜನಗೂಡು ತಿರುಮಲಾಂಬಾ
ಶ್ರೀಮಾನಿನೀವರ ನಂದಕುಮಾರ ಪ. ರಾಜರಾಜೇಶ್ವರ ರಾಜ್ಯಾಭಿಷೇಕವ ಮೂಜಗವರಿಯೇ ಸುರರಾಜನಿಂ ಕೈಗೊಂಡ 1 ಅಂದೆ ತಿಳಿದೆನು ಸಿಂಧುಶಯನ ನೀನು ಇಂದಿರೆಯೇ ಭೀಷ್ಮಕನಂದನೆಯೆ ತಾನು 2 ದೇವಾದಿದೇವ ವಸುದೇವನಂದನ ವಾಸುದೇವ ದೇವಕೀಸುತ ಭಾವಜತಾತ 3 ನರಲೀಲಾ ವೈಭವ ಧರೆಗೆಲ್ಲಾ ತೋರುವ ಮಾಧವ 4
--------------
ನಂಜನಗೂಡು ತಿರುಮಲಾಂಬಾ