ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ವೇಳೆಯಲಿ ಆರಾರ ಕಾಯ್ದೆಯೊ ದೇವಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು ಪ ಕರೆಯೆ ಕಂಬದಿ ಬಂದು ಹಿರಣ್ಯಕಶಿಪುವ ಕೊಂದೆಶರಣನನು ಪಾಲಿಸುತೆ ಕಾಯ್ದೆಯಂತೆಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದುಕರುಣದಿಂದಲಿ ಕಾಯ್ದೆಯಂತೆ ಹರಿಯೆ 1 ಧರೆಗಧಿಕನಾಥನಾ ತೊಡೆಯನೇರಲು ಕಂಡುಜರೆಯಲಾ ಧ್ರುವನ ನೀ ಕಾಯ್ದೆಯಂತೆದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ 2 ಮಾಧವ ಗೋ-ವಿಂದ ರಕ್ಷಿಸು ಬಾಡದಾದಿಕೇಶವರಾಯ 3
--------------
ಕನಕದಾಸ
ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ | ಹಿರಣ್ಯ ಕಾಸುರನಿಲ್ಲ | ಸುರರಿಗುಪಟಳವೇನು ಇಲ್ಲ ಸ್ತಂಭ | ಬಿರಿದು ದೋರುವ ಅಹೋಬಲದ ಸ್ಥಳವಲ್ಲ 1 ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ | ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ | ಸಿರಸಾಗ್ರ ಮಧ್ಯುದರ ವೆರಸೀ ಪರ್ಣ| ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ2 ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ | ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ | ಹರಗರುಡ ಗಣಪರೋಡಗೂಡಿ ನಲಿವ | ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿ-ಪ ದಂದಿಂದ ಈ ಅಂಬೆಗಾಲು ಬಿಡದಮ್ಮ ಅ.ಪ ಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ ಗ್ರಹ ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ 1 ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ 2 ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ 3
--------------
ವ್ಯಾಸರಾಯರು
ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು
ಭಕ್ತವತ್ಸಲನೆಂಬ ಬಿರುದು ನಿನಗಿರಲು ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ ನಿತ್ಯ ಬಿಡದ್ಹೊಗಳುವ ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ 1 ದೋಷನಾಶನೆ ನಿನ್ನ ಸಾಸಿರನಾಮಗಳಿಂ ಘೋಷಿಪರು ಮನುಮುನಿ ಬೇಸರಿಲ್ಲದಲೆ ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ ಗೀಸು ಬಿರುದುಗಳಿರ್ದು ಲೇಶವೇನಯ್ಯಾ 2 ಪರಮ ಕರುಣಾಕರ ಶರಣಜನಮಂದಾರ ಚರಣಸ್ಮರಿಪರ ಘೋರದುರಿತಪರಿಹಾರ ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ 3
--------------
ರಾಮದಾಸರು
ಭಜಿಸುವರ ಭಾಗ್ಯವೆ ಭಾಗ್ಯ ಭುವನದಲಿತ್ರಿಜಗದೊಡೆಯನು ರಾಮಕೃಷ್ಣ ರೂಪಿನಲಿರಲು ಪಶ್ರುತಿ 'ಧಿತ ನಿಯಮಗಳ ಮಾಡಿ ತದನಂತರದಿಶತಸಹಸ್ರರಿಗೊರೆದು ಕಾವ್ಯ ಪಾಠವನುಶ್ರುತಿಗಗೋಚರ ಕೃಷ್ಣ ಪಾದಪೂಜೆಯ ನಿತ್ಯಜಿತಮನಸ್ಕದಿ ರಚಿಸಿ ನಲಿವ ಮೂರ್ತಿಯನು 1ವೇದಾಂತ ಶಾಸ್ತ್ರವನು ವೇದ'ತ್ತುಗಳಿಂಗೆವಾದಗುಟ್ಟದ ತೆರದಲುಪದೇಶಗೈದುವೇದಶಾಸ್ತ್ರಾರ್ಥವನು ಸಾದರದಿ ಸಕಲರಿಗೆಬೋಧಿಸುವ ಸಂಸಾರಸಾಗರೋತ್ತಾರರನು2ರಾಮಾವತಾರದಲಿ ರಾಮನೆಂದೇ ನಾಮವಾಮೇಲೆ ದ್ವಾಪರದಿ ರಾಮ ಕೃಷ್ಣರೆಂದುನಾಮವೆರಡವರಿಂಗೆ ತನುವೆರಡು ಬಳಿಕೀಗರಾಮಕೃಷ್ಣನಾಮದಲಿ ಕಲಿಯುÀಗದಿ ಜನಿಸಿರಲು 3ಅವತಾರವೆಂಬುದುಪಚಾರವಲ್ಲಿದು ಕೇಳಿಭವನ ಪ್ರತಿಬಿಂಬ ಶ್ರೀ ಶಂಕರಾಚಾರ್ಯಭವದೂರ ಗುರುಮೂರ್ತಿ ಕೃತ ಗ್ರಂಥ ವ್ಯಾಖ್ಯಾನಕಿವರೆಂದು ಆನಂದ ಘನ ಸ್ವಪ್ನವಾಗಿರಲು 4ಅಜನ ಭಜನೆಯಲಜನು ತ್ರಿಜಗರಕ್ಷಾರ್ಥದಲಿಅಜನ ಪೌತ್ರತ್ವದಲಿ ನಿಜಸತಿಯ ನೆವದಿತ್ರಿಜಗ ಕಂಟಕ ರಾವಣನ ಮುರಿದು ಭಜಕರಿಗೆಅಜ ಪದ' ಮೊದಲಾಗಿ ಕೊಟ್ಟ ರಾಮನನು 5ಭೂ'ು ಭಾರವನಿಳುಹಲೆಂದು ನೇಮವ ಧರಿಸಿರಾಮನನುಜನು ತಾನು ಕೃಷ್ಣನೆಂದೆನಿಸಿಭೀಮ ಘಲುಗುಣ ಧರ್ಮ ಮುಖದಿ ಕೌರವ ಪಡೆಯಭೂ'ುಯಲಿ ನೆಲೆಗೊಳಿಸಿದಮಲ ಮೂರ್ತಿಯನು 6ಧರೆಗಧಿಕವೆಂದೆಂಬ ದೃಷದಪುರದಲಿ ನಿಂದುಶರಣಾಗತರ ಸಲ' ಮ'ಮೆಗಳ ಮೆರೆದುತಿರುಪತಿಯ ವೆಂಕಟನ ಪ್ರತಿಬಿಂಬ ಗುರುವರ್ಯಪರವಾಸುದೇವ ಶ್ರೀ ರಾಮಕೃಷ್ಣಾರ್ಯರನು 7ಓಂ ಪುಣ್ಯಾಯ ನಮಃ
--------------
ತಿಮ್ಮಪ್ಪದಾಸರು
ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾ ವಡಗಾಡಿ ವಸಡುಗ ಪಾವುಗೆ ಸುವರ್ಣದರ್ಪಣವಾ ಪ ಪಿಡಿದ ನಾರಿಯರು ಯಡಬಲದ ಕೈದೀವಿಗೆಯ ಕೊಡುತ ಕೈಲಾಗಿನವರಡಿಗಳೆಚ್ಚರಿಕೇ ಅ.ಪ ವೀಣೆ ದಂಡಿಗೆ ತಾಳ ಮೇಳ ಸನಕಾದಿ ಸುರ ನಾರಿಯರು ಗೀತ ಪ್ರಬಂಧ ನರ್ತನದ ಪು ರಾಣ ಕೋವಿದರು ಪಾಠಕನಿಕರ ಸಹಿತ ಗೀ ರ್ವಾಣರೈದಿರಲು ಅವಧಾನವೆಚ್ಚರಿಕೇ 1 ಗಂಧ ಪರಿಮಳ ಪುಷ್ಪ ತಾಂಬೂಲ ಫಲಗಳನು ತಂದು ಉಡುಗೊರೆಯ ಕಾಣೆಕೆಯಿಟ್ಟು ಜಯವೆನುತ ನಂದ ಮುಕುಂದ ಗೋವಿಂದ ಕೇಶವಯೆನುತ ವಂದನೆಗಳನೆ ಮಾಡಿ ನಿಂದರೆಚ್ಚರಿಕೇ 2 ಭಾಗವತ ಜನರು ಬಿರುದಾವಳಿಯ ಪೊಗಳೆ ಮುನಿ ಯೋಗಿಗಳು ತತ್ವ ಪ್ರಬಂಧದಧ್ಯಾಪಕರು ಮೇಘವಾಹನ ಪೂಮಳೆಗರೆಯೆ ಸಕಲ ವಿನಿ ಯೋಗದವರನು ಕಳುಹುವಾಗಲೆಚ್ಚರಿಕೇ3 ಸರಸಿಜೋದ್ಭವನು ದಿಕ್ಪಾಲನಾರದ ಧ್ರುವನು ಗರುಡ ಗಂಧರ್ವ ವಿದ್ಯಾಧರರು ಅನಿಲಜನು ಪರಮ ಭಕ್ತಿಯಲಿ ಊಳಿಗಕೆ ಬಂದೈದಾರೆ ಧರೆಗಧಿಕ ವೈಕುಂಠ ಚನ್ನ ಕೇಶವ ಚಿತ್ತೈಸೋ 4
--------------
ಬೇಲೂರು ವೈಕುಂಠದಾಸರು
ಸತ್ಯವೇ ಸ್ನಾನ ಜಪ ನೇಮ - ಹೋಮ - ಅ - |ಸತ್ಯದಲಿ ನಡೆದುಮಾಳ್ಪದುವ್ಯರ್ಥಕರ್ಮಪ.ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು |ಒಪ್ಪದಲಿ ಉಪವಾಸ ವ್ರತವ ಮಾಡಿ ||ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ |ಸರ್ಪಗಳು ಮಾಡದಪರಾಧವೇನಯ್ಯ ? 1ಬಿಡದೆ ಮದ - ಮತ್ಸರಾಹಂಕಾರದೊಳು ಮುಳುಗಿ |ಒಡನೆ ಬೆರಳುಗಳೆಣಿಸಿ ಮೌನದಿಂದ ||ತಡೆಯದಲೆ ಪರಲೋಕ ಸುಖವನೈದುವೆನೆಂಬ |ಬಡ ಬಕವು ಮಾಡಿದಪರಾಧವೇನಯ್ಯ 2ಪರಸತಿಯು ಪರಧನವು ಪರನಿಂದೆ ಪರಹಿಂಸೆ |ಪರಮ ಪಾತಕದ ಕಾರಣವ ತೊರೆದು ||ಧರೆಗಧಿಕಪುರಂದರ ವಿಠಲನ ನೆರೆಭಜಿಸಿ |ವರವನು ಪಡೆಯೆ ಸಾಲೋಕ್ಯವನ್ನೀವ 3
--------------
ಪುರಂದರದಾಸರು