ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವಿಯ ಕಲ್ಲಿನ ತಿಲುಕವಿಡಕ್ಕ ಕಾವಿಯ ಕಲ್ಲಿನ ತಿಲುಕ ಪ. ಕಾವಿಯ ಕಲ್ಲಿನ ತಿಲುಕವನಿಟ್ಟರೆ ಕಾಯುವ ಶ್ರೀಹರಿ ಸತತ ಕಾಣಕ್ಕ ಅ.ಪ. ಕಾವಿಯ ತಿಲುಕವು ಕಲುಷವ ಕಳೆವುದು ಕಾವಿಯ ತಿಲುಕವು ಕಲಿಬಾಧೆ ಕಳೆವುದು ಕಾವಿಯ ತಿಲುಕವು ಕೋಪತಾಪಗಳನ್ನು ಜೀವನ ಬಳಿಯಲ್ಲಿ ಬರಲೀಸದಕ್ಕ 1 ಕಾವಿಯ ತಿಲುಕವು ಕವಿತೆಯ ಮಾಳ್ಪರಿಗೆ ಭಾವಶುದ್ಧಿಯನಿತ್ತು ಭಕ್ತಿ ಹೆಚ್ಚಿಸುವುದು ಕಾವಿಯ ಮಹಿಮೆಯ ಪಾವನ ಗುರು ಮಧ್ವರಾಯರೆ ಬಲ್ಲರಕ್ಕ 2 ಕಾವಿಯ ತಿಲುಕವು ಗುರುಭಕ್ತಿ ಕೊಡುವುದು ಕಾವಿಯ ತಿಲುಕವು ವೈವಿಧ್ಯ ಕಳೆವುದು ಕಾವಿಯ ತಿಲುಕವು ಕಳೆಯ ಹೆಚ್ಚಿಸುವುದು ಶ್ರೀ ವರನನು ಮನದಿ ತೊರುವುದಕ್ಕ 3 ಕಾವಿಯ ತತ್ವ ದಾಸರೆ ಬಲ್ಲರು ಕಾವಿಯೆ ಭೂಷಣ ದಾಸ ಶಿರಸಿಗೆ ಕಾವಿ ಇಲ್ಲದ ವ್ಯಾಸ ದಾಸಕೂಟವು ಇಲ್ಲ ಕಾವಿಯೆ ಸಂಸಾರ ನಾವೆಯಕ್ಕ 4 ಕಾವಿಯ ಮಹಿಮೆ ತಂದೆ ಮುದ್ದುಮೋಹನ ಗುರು ಭಾವಿಸಿ ಪೇಳಲು ಅರಿತು ಧರಿಸಿಹೆನು ಪಾವನ ಗೋಪಾಲಕೃಷ್ಣವಿಠ್ಠಲ ವ್ಯಾಸ ಕಾವಿಯ ಧರಿಸಿ ಮುನಿಯಾದ ಬದರಿಯಲಿ 5
--------------
ಅಂಬಾಬಾಯಿ
ಶ್ರೀರಮಣನೆ ಎನ್ನುದ್ಧಾರ ಮಾಡುವ ಪೂರ್ಣ ಭಾರವೇ ನಿನಗಿಹದೊ ಹೇರನೊಪ್ಪಿಸಿದಂಥ ಹಳಬ ವರ್ತಕಗೆ ಸ- ರ್ಕಾರ ಸುಂಕಗಳುಂಟೆ ವಾರಿಜ ನಯನ ಪ. ಆವ ಕಾಲಕು ಲಕ್ಷ್ಮೀಭೂವರ ತವ ಪಾದ ಸೇವಕನಾಗಿಹೆನು ನಿನ್ನಲಿ ಮನೋ- ಭಾವವಿರಿಸಿಹೆನು ನನಗುಸುರಲೇನು ಜೀವನಕೆ ನೀನಿತ್ತ ಕರ್ತು- ತ್ವಾವಲಿಗಳಿಂದೇನ ಮಾಳ್ಪದ ನೀ ವಳಗೆ ನಿಂತಿದ್ದು ನಿನ್ನ ಕ- ಲಾವಿಶೇಷದಿ ನಡಸಿ ನಟಿಸುವಿ1 ದೇಹವ ಧರಿಸಿಹೆನು ಇದರ ಸ- ನ್ನಾಹವಾಗಿರುವುದನು ಸುಖದು:ಖಗಳನು ಚೋಹಗೊಳದನುಭವಿಸಿ ಸುಖ ಸಂ- ದೋಹಗೊಳಲ್ಯಾಡುತ್ತಿರೆ ಮುಂ- ದಾಹ ಬಾಧೆಯ ಬಿಡಿಸಹಮ್ಮಮ ಮೋಹ ಬಲೆಯನು ಕಡಿದು ಸಲಹುವ 2 ಜನನಿ ಜನಕ ಗೃಹ ವನಿತೆ ಒಡವೆ ಭೂಮಿ ಧನವಸ್ತ್ರ ಧಾನ್ಯಗಳು ನಾನಾ ವಿಧ ವಿನಯದಿ ಸಂಪದವು ಸ್ವರ್ಗಾದಿ ಸುಖವು ತನುಮನಗಳೊಡಗೂಡಿ ಮನ್ಮಥ ಜನಕ ನಿನಗೊಪ್ಪಿಸಿ ನಿರಂತರ ನೆನವೆ ನಿನ್ನ ಪದಾಬ್ಜಯುಗ್ಮವ ವನರುಹಾಂಬಕ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ