ಒಟ್ಟು 8 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಯವದನಾ ಪಾಲಿಸೋ | ಹಯ ದೈತ್ಯ ನಿಧನಾ ಪ ಭಯಕೃತು ಭಯಹರ | ದಯದೃಶ ತೋರಯ್ಯ ಅ.ಪ. ಅಜ ಜನಕನೆ ಹರಿ | ದ್ವಿಜವರ ವಂದ್ಯನೆನಿಜಪದ ಹೃದಯಾಂ | ಬುಜದಲಿ ತೋರುತ1 ಕರ ಆದರದಲಿ ಪಿಡಿ | ದಾದರಿಸಿದನೇ 2 ಅರಿದರ ವರ ಗ್ರಂಥ ಜಪಸರ ಧರವರ ಉರಗಾತಪ | ಧರಿಸಿಹೆ ಶಿರಿಯನು 3 ಕೌಸ್ತುಭ ಕರ ಪಾದ | ಶತ ಪತ್ರ ನೇತ್ರಾ 4 ಭಾವಕೆ ಒಲಿವನೆ | ಭಾವದೊಳಗೆ ನಿಲ್ಲುಗೋವಿದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ. ಗಜ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ 1 ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ 2 ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ 3
--------------
ಗುರುಗೋವಿಂದವಿಠಲರು
ಕಾವಿಯ ಕಲ್ಲಿನ ತಿಲುಕವಿಡಕ್ಕ ಕಾವಿಯ ಕಲ್ಲಿನ ತಿಲುಕ ಪ. ಕಾವಿಯ ಕಲ್ಲಿನ ತಿಲುಕವನಿಟ್ಟರೆ ಕಾಯುವ ಶ್ರೀಹರಿ ಸತತ ಕಾಣಕ್ಕ ಅ.ಪ. ಕಾವಿಯ ತಿಲುಕವು ಕಲುಷವ ಕಳೆವುದು ಕಾವಿಯ ತಿಲುಕವು ಕಲಿಬಾಧೆ ಕಳೆವುದು ಕಾವಿಯ ತಿಲುಕವು ಕೋಪತಾಪಗಳನ್ನು ಜೀವನ ಬಳಿಯಲ್ಲಿ ಬರಲೀಸದಕ್ಕ 1 ಕಾವಿಯ ತಿಲುಕವು ಕವಿತೆಯ ಮಾಳ್ಪರಿಗೆ ಭಾವಶುದ್ಧಿಯನಿತ್ತು ಭಕ್ತಿ ಹೆಚ್ಚಿಸುವುದು ಕಾವಿಯ ಮಹಿಮೆಯ ಪಾವನ ಗುರು ಮಧ್ವರಾಯರೆ ಬಲ್ಲರಕ್ಕ 2 ಕಾವಿಯ ತಿಲುಕವು ಗುರುಭಕ್ತಿ ಕೊಡುವುದು ಕಾವಿಯ ತಿಲುಕವು ವೈವಿಧ್ಯ ಕಳೆವುದು ಕಾವಿಯ ತಿಲುಕವು ಕಳೆಯ ಹೆಚ್ಚಿಸುವುದು ಶ್ರೀ ವರನನು ಮನದಿ ತೊರುವುದಕ್ಕ 3 ಕಾವಿಯ ತತ್ವ ದಾಸರೆ ಬಲ್ಲರು ಕಾವಿಯೆ ಭೂಷಣ ದಾಸ ಶಿರಸಿಗೆ ಕಾವಿ ಇಲ್ಲದ ವ್ಯಾಸ ದಾಸಕೂಟವು ಇಲ್ಲ ಕಾವಿಯೆ ಸಂಸಾರ ನಾವೆಯಕ್ಕ 4 ಕಾವಿಯ ಮಹಿಮೆ ತಂದೆ ಮುದ್ದುಮೋಹನ ಗುರು ಭಾವಿಸಿ ಪೇಳಲು ಅರಿತು ಧರಿಸಿಹೆನು ಪಾವನ ಗೋಪಾಲಕೃಷ್ಣವಿಠ್ಠಲ ವ್ಯಾಸ ಕಾವಿಯ ಧರಿಸಿ ಮುನಿಯಾದ ಬದರಿಯಲಿ 5
--------------
ಅಂಬಾಬಾಯಿ
ನಾಮ ಧರಿಸಿಹೆಯಾ ಮೂರು ನಾಮ ಧರಿಸಿಹೆಯಾ ಶ್ರೀನಿವಾಸ ಪ. ನೀನೆ ಕರ್ತನೆಂದಾ ಮನುಜರಿಗೆಲ್ಲಾ ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ. ಅಂಬೆಯ ವಕ್ಷದಿ ಇಂಬಿನೊಳಿಟ್ಟು ಸಂಭ್ರಮದೊಳು ಕುಡಿ ನೋಟದಿಂದಾ ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ ಬೆಂಬಿಡದೆ ಕಾವೆನೆಂಬ ಬಿರುದ 1 ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ ಹೊರವೊಳಗಿದ್ದು ಜನವ ನಂಬಿಸಿ ಥರಥರದಾಭರಣ ಸುಲಿಗೆಯಗೊಂಬ ತಿರುಪತಿ ತಿರುಮಲರಾಯ ದೊರೆ 2 ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ ನಿನ್ನ ಪಾದಧ್ಯಾನವನ್ನೆ ಬಯಸುತ್ತ ನಿನ್ನನೆ ಭಕ್ತಪಾಶದಿ ಕಟ್ಟಿ 3 ಚಾರು ಮುಖನೆ ವಂದ್ಯ ನಿನ್ನ ಹಾರೈಸುವ ಭಕ್ತರ ವೃಂದ ಹಾರ ಹಾಕಿ ಮನ ಸೂರೆ ಕೊಟ್ಟ 4 ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ 5
--------------
ಸರಸ್ವತಿ ಬಾಯಿ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು
ಶೃತಿ ಪ್ರತಿಪಾದ್ಯನೆ | ಕೃತಿದೇವಿ ರಮಣನೆವಿತತ ವಿಶ್ವದಪಾಲ | ಮೃತ ಶಿಶು ಪರಿಪಾಲ ಪ ಮತ್ರ್ಯರ ಬೀಷ್ಟವ | ಸಾರ್ಥಕಗೊಳಿಸುವಪಾರ್ಥ ಸಾರಥಿಯೆ | ಕೀರ್ತಿಸಲರಿಯೆಮೂರ್ತಿಯ ಕಾಣುವ | ವಾರ್ತೆ ಇರಲಿ ದೇವಸೂಕ್ತ ಮೇಯ ಅ | ಸಕ್ತಿ ಪ್ರದಾತಾ ಅ.ಪ. ಪರಿ ಗುಣ ಜಾಲ | ದರಿವನೆ ಕೊಡು ಕೋಲಧರಿಸಿಹೆ ವನಮಾಲಾ | ಶರಣರ ಪಾಲ1 ಪರಿ ಭಕ್ತರನ | ಪೊರೆದ ಮೋಹನ್ನ 2 ಪಟು ಭಟಗಾನಂದ | ಘಟಿಸಲು ಮುಕುಂದಕುಟಿಲ ರಹಿತ ಛಂದ | ಪಟುತರ ವ್ಯಾಪ್ತಿಂದಛಟ ಛಟ ಕಂಬದಿಂದ | ಪುಟ ನೆಗೆಯುತ ಬಂದದಿಟ ಗುರು ಗೋವಿಂದ | ವಿಠಲ ಆನಂದ 3
--------------
ಗುರುಗೋವಿಂದವಿಠಲರು
ಶ್ರೀರಮಣನೆ ಎನ್ನುದ್ಧಾರ ಮಾಡುವ ಪೂರ್ಣ ಭಾರವೇ ನಿನಗಿಹದೊ ಹೇರನೊಪ್ಪಿಸಿದಂಥ ಹಳಬ ವರ್ತಕಗೆ ಸ- ರ್ಕಾರ ಸುಂಕಗಳುಂಟೆ ವಾರಿಜ ನಯನ ಪ. ಆವ ಕಾಲಕು ಲಕ್ಷ್ಮೀಭೂವರ ತವ ಪಾದ ಸೇವಕನಾಗಿಹೆನು ನಿನ್ನಲಿ ಮನೋ- ಭಾವವಿರಿಸಿಹೆನು ನನಗುಸುರಲೇನು ಜೀವನಕೆ ನೀನಿತ್ತ ಕರ್ತು- ತ್ವಾವಲಿಗಳಿಂದೇನ ಮಾಳ್ಪದ ನೀ ವಳಗೆ ನಿಂತಿದ್ದು ನಿನ್ನ ಕ- ಲಾವಿಶೇಷದಿ ನಡಸಿ ನಟಿಸುವಿ1 ದೇಹವ ಧರಿಸಿಹೆನು ಇದರ ಸ- ನ್ನಾಹವಾಗಿರುವುದನು ಸುಖದು:ಖಗಳನು ಚೋಹಗೊಳದನುಭವಿಸಿ ಸುಖ ಸಂ- ದೋಹಗೊಳಲ್ಯಾಡುತ್ತಿರೆ ಮುಂ- ದಾಹ ಬಾಧೆಯ ಬಿಡಿಸಹಮ್ಮಮ ಮೋಹ ಬಲೆಯನು ಕಡಿದು ಸಲಹುವ 2 ಜನನಿ ಜನಕ ಗೃಹ ವನಿತೆ ಒಡವೆ ಭೂಮಿ ಧನವಸ್ತ್ರ ಧಾನ್ಯಗಳು ನಾನಾ ವಿಧ ವಿನಯದಿ ಸಂಪದವು ಸ್ವರ್ಗಾದಿ ಸುಖವು ತನುಮನಗಳೊಡಗೂಡಿ ಮನ್ಮಥ ಜನಕ ನಿನಗೊಪ್ಪಿಸಿ ನಿರಂತರ ನೆನವೆ ನಿನ್ನ ಪದಾಬ್ಜಯುಗ್ಮವ ವನರುಹಾಂಬಕ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ