ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ. ಬಂದಿದ್ದನೆ ನಮ್ಮ ಮಂದಿರದೊಳು ಬೆಳ ದಿಂಗಳ ತೆರದೊಳು ಬಂದಿದ್ದನೆ ಅ.ಪ. ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು ಕರ ಕ್ಷಿತಿ ತಳ ವಂದಿತ ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ 1 ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು ವರದ ಮಾಧವನು2 ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ ಸತಿ ತುಳಸಿಯ ಮಾಲಧರನೆ ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು ವಿತತ ವೈಭವದಿಂದ 3 ವರಪ್ರದ ವೆಂಕಟ ವರಗಳ ನೀಡುತ ತನ್ನ ಚರಣ ತೋರುತ ಭಕ್ತರಿಗೆ ಕೇಸರಿ ತೀರ್ಥವ ಕರುಣದಿ ತೋರುತ ಕರಿವರದ ಕೃಷ್ಣ 4 ಪಂಚಾಮೃತದಭಿಷೇಕವ ಕಂಡೆನೆ ಎನ್ನ ಸಂಚಿತಾರ್ಥದ ಪುಣ್ಯದ ಫಲದಿ ಮಿಂಚಿದ ಪಾಪವ ಕಳೆದರತಿಹರುಷದಿ ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ 5 ಕಂಕಣ ಕೈಯೊಳು ಧರಿಸಿಹನೆ ದಿವ್ಯ ಹೇಮ ಶೋಭಿತನೆ ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ ಶಂಕರಾದಿ ಸ್ತುತ ವೆಂಕಟರಮಣನು 6 ಸುರವರÀ ವಂದ್ಯಗೆ ಆರತಿ ಎತ್ತಲು ಕೇಸರಿ ತೀರ್ಥವ ನೀಡಿದನೆ ವರ ಪ್ರಸಾದದ ಮಹಿಮೆಯ ತೋರುತ ಶರಧಿ ಗಂಭೀರನು 7 ಉರುಟಣಿಯ ಮಾಡಿದ ವರಸತಿ ಜತೆಯಲಿ ವರ ಶೇಷಾಚಲನು ತಾನೆ ಹರುಷವ ಬೀರುತ ವರ ಶೇಷನ ಮೇಲೆ ಮೆರೆವ ಶಯನಗೊಂಡು ಹರುಷದಿ 8 ಗಂಧ ಪುಷ್ಪ ತಾಂಬೂಲವಗೊಂಡನೆ ತಂಡ ತಂಡ ಭಕ್ತರ ವಡೆಯ ಉದ್ದಂಡ ಭಕ್ತರಿಗೆ ಉದ್ದಂಡ ವೆಂಕಟ 9 ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ ನೋಟಕರಿಗೆ ಆನಂದ ತೋರಿದನೆ ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ 10 ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ ಕರೆದಾದರಿಸು ಹರಿಗೆ ನಿರುತ ಎಮ್ಮನು ಹಯನೇರಿದನೆ ಭಯಕೃದ್ಭಯ ಹಾರಿ 11
--------------
ಸರಸ್ವತಿ ಬಾಯಿ
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ