ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೆ ಶ್ರೀ ಕೃಷ್ಣನ ಪ. ಪುಂಡರಿಕಾಕ್ಷ ಪುರುಷೋತ್ತಮನ ಅಂಡಜವಾಹನ ಅಸುರಾಂತಕನ ಅ.ಪ. ಅರುಣ ಕಿರಣ ಸೋಲಿಪ ಚರಣ ವರ ಗೆಜ್ಜೆಯ ಧರಿಶಿಹನ ಕಿರುನಗೆಯಿಂದಲಿ ಬೆರಳಲಿ ಮುರಳಿಯ ಸ್ವರÀ ಊದಿದ ಮುರಹರನ 1 ಸೂರ್ಯ ಕಿರೀಟ ಧರಿಸಿ ಹಾಟಕಾಂಬರಧರ ನಮ್ಮ ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ ನೋಟದಿ ಮನ ಸೆಳೆಯುವನ2 ಅಂಗಿಯ ತೊಡಿಸಿ ಉಂಗುರವಿಟ್ಟು ಅಂಗಳದೊಳು ಬಿಟ್ಟೆನಮ್ಮ ರಂಗ ಶ್ರೀ ಶ್ರೀನಿವಾಸನ ಕಾಣೆ ನಿ ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ 3
--------------
ಸರಸ್ವತಿ ಬಾಯಿ
ನಂದಿಯನೇರಿ ಬರುತಿಹ ಸುಂದರನ್ಯಾರೆ ಪೇಳಮ್ಮಯ್ಯ ಪ. ಚಂದ್ರಚೂಡ ಗಂಗಾಧರ ಶಂಕರ ಸುಂದರ ಗೌರೀರಮಣ ಕಣಮ್ಮಾ ಅ.ಪ. ಕರದಿ ತ್ರಿಶೂಲ ಧರಿಸಿದನಾರೆ ಪೇಳಮ್ಮಯ್ಯ ವರ ಡಮರುಕಪಾಲ ಪಿಡಿದಿಹನಾರೆ ಪೇಳಮ್ಮಯ್ಯಾ ಕರುಣವ ತೋರುತ ಸಕಲರ ಮನ ಮಂದಿರದಲಿ ಪೊಳೆಯುವ ಗಿರಿಜಾ ರಮಣ ಕಣಮ್ಮ 1 ಗಜ ಚರ್ಮಾಂಬರ ಧರಿಸಿಹನಾರೆ ಪೇಳಮ್ಮಯ್ಯ ತ್ರಿಜUನ್ಮೂರುತಿ ನೊಸಲಿಗೆ ಭಸ್ಮವ ಧರಿಸಿಹನಾರೆ ಪೇಳಮ್ಮಯ್ಯ ಋಜುಗುಣದೊಡೆಯಗೆ ರಜತಾದ್ರಿನಿಲಯ ನಿಜ ಪಾರ್ವತೀರಮಣ ಕಣಮ್ಮಾ 2 ಶೇಷನಾಭರಣವ ಧರಿಶಿಹನಾರೆ ಪೇಳಮ್ಮಯ್ಯ ಸೋಸೀಲಿ ಮೂಗಣ್ಣವನಾರೆ ಪೇಳಮ್ಮಯ್ಯ ವಾಸುಕಿಶಯನ ಶ್ರೀ ಶ್ರೀನಿವಾಸನ ವಾಸ ಶಂಭೋ ಶಂಕರನು ಕಣಮ್ಮಾ 3
--------------
ಸರಸ್ವತಿ ಬಾಯಿ