ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೆ ಶ್ರೀ ಕೃಷ್ಣನ ಪ. ಪುಂಡರಿಕಾಕ್ಷ ಪುರುಷೋತ್ತಮನ ಅಂಡಜವಾಹನ ಅಸುರಾಂತಕನ ಅ.ಪ. ಅರುಣ ಕಿರಣ ಸೋಲಿಪ ಚರಣ ವರ ಗೆಜ್ಜೆಯ ಧರಿಶಿಹನ ಕಿರುನಗೆಯಿಂದಲಿ ಬೆರಳಲಿ ಮುರಳಿಯ ಸ್ವರÀ ಊದಿದ ಮುರಹರನ 1 ಸೂರ್ಯ ಕಿರೀಟ ಧರಿಸಿ ಹಾಟಕಾಂಬರಧರ ನಮ್ಮ ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ ನೋಟದಿ ಮನ ಸೆಳೆಯುವನ2 ಅಂಗಿಯ ತೊಡಿಸಿ ಉಂಗುರವಿಟ್ಟು ಅಂಗಳದೊಳು ಬಿಟ್ಟೆನಮ್ಮ ರಂಗ ಶ್ರೀ ಶ್ರೀನಿವಾಸನ ಕಾಣೆ ನಿ ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ 3
--------------
ಸರಸ್ವತಿ ಬಾಯಿ
ನಂದಿಯನೇರಿ ಬರುತಿಹ ಸುಂದರನ್ಯಾರೆ ಪೇಳಮ್ಮಯ್ಯ ಪ. ಚಂದ್ರಚೂಡ ಗಂಗಾಧರ ಶಂಕರ ಸುಂದರ ಗೌರೀರಮಣ ಕಣಮ್ಮಾ ಅ.ಪ. ಕರದಿ ತ್ರಿಶೂಲ ಧರಿಸಿದನಾರೆ ಪೇಳಮ್ಮಯ್ಯ ವರ ಡಮರುಕಪಾಲ ಪಿಡಿದಿಹನಾರೆ ಪೇಳಮ್ಮಯ್ಯಾ ಕರುಣವ ತೋರುತ ಸಕಲರ ಮನ ಮಂದಿರದಲಿ ಪೊಳೆಯುವ ಗಿರಿಜಾ ರಮಣ ಕಣಮ್ಮ 1 ಗಜ ಚರ್ಮಾಂಬರ ಧರಿಸಿಹನಾರೆ ಪೇಳಮ್ಮಯ್ಯ ತ್ರಿಜUನ್ಮೂರುತಿ ನೊಸಲಿಗೆ ಭಸ್ಮವ ಧರಿಸಿಹನಾರೆ ಪೇಳಮ್ಮಯ್ಯ ಋಜುಗುಣದೊಡೆಯಗೆ ರಜತಾದ್ರಿನಿಲಯ ನಿಜ ಪಾರ್ವತೀರಮಣ ಕಣಮ್ಮಾ 2 ಶೇಷನಾಭರಣವ ಧರಿಶಿಹನಾರೆ ಪೇಳಮ್ಮಯ್ಯ ಸೋಸೀಲಿ ಮೂಗಣ್ಣವನಾರೆ ಪೇಳಮ್ಮಯ್ಯ ವಾಸುಕಿಶಯನ ಶ್ರೀ ಶ್ರೀನಿವಾಸನ ವಾಸ ಶಂಭೋ ಶಂಕರನು ಕಣಮ್ಮಾ 3
--------------
ಸರಸ್ವತಿ ಬಾಯಿ
ಬಂದಳು ಭಾಗ್ಯನಿಧಿ ಶ್ರೀಧರನರಸಿ ಪ. ಪೊಂದಿದ ಭಕ್ತರಾನಂದದ ಸ್ತುತಿಗಾ ನಂದ ಪಡುತ ಒಂದೊಂದ್ಹೆಜ್ಜೆನಿಡುತಾ ಅ.ಪ. ಕಡಗ ಕಂಕಣ ತೋಳ್ಬಂದಿಯ ಧರಿಶಿ ಬಡನಡು ಬಳುಕುತ ದೃಢಭಕ್ತರೆಡೆಗೆ 1 ಹೆರಳು ಬಂಗಾರದ ಶಿರದ ಮಲ್ಲಿಗೆ ಮುಡಿ ಸರಸದಿಲುದರುತ ವರಪ್ರದ ಮಾತೆ 2 ವರದ ಶ್ರೀ ಶ್ರೀನಿವಾಸ ಸ್ವರ ರಮಣಿಯು ತಾ ಥರಥರದ್ವರಗಳ ಕರುಣಿಸಲೆಮಗೆ 3
--------------
ಸರಸ್ವತಿ ಬಾಯಿ
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ
ರುದ್ರದೇವರು ಗಂಗಾಧರ ಮಹಾದೇವ ಶಂಭೊಶಂಕರ ಪ. ಗಂಗಾಧರಾ ನಿನ್ನ ನಂಬಿದ ಭಕ್ತರಘ ದ್ಹಂಬ ಕಡಿದು ಹರಿ ಇಂಬ ತೋರೆ ಜಗ ಕಂಬಾರಮಣ ನಿನ್ನ ಸಂಭ್ರಮದಿ ಸ್ತುತಿಪೆ ಅ.ಪ. ಚಾರು ಚರ್ಮಾಂಬರ ಧೀರ ಧರಿಶಿ ಮೆರೆವ ಚಾರು ಭೂತಗಣ ಸಂಚಾರ ಭಸ್ಮಧರಾ ಹಾರ ಕೇಯೂರ ಮಧ್ಯ ಥೋರ ಸರ್ಪ ಭೂಷ ನಿನ್ನ ಚಾರು ರೂಪ ವರ್ಣಿಸಲಳವೆ ಸಾರಸಾಕ್ಷ ಪಾರ್ವತಿಪ್ರಿಯ ಕರುಣಾಕರಸ ದೊರಕದೆ ಶ್ರೀರಮಣನು ಸಿಗ ಕೋರೆ ಹರಿಯ ನಿನ್ನ ಪಾದಪಂಕಜ ಹಾರೈಸುವೆ ಸಂಸಾರ ಶರಧಿಂ 1 ಪರಮಪುರುಷ ಶ್ರೀ ರಾಮನ ತಾರಕ ವರಮಂತ್ರ ಜಪಿಸುವ ವರ ಪಾರ್ವತಿಗರುಹಿ ಧರೆಯೊಳು ಮನುಜರ ವರಮನ ಪರಿಪರಿ ಬೇಡುವೆ ಹರಿಸ್ಮರಣೇಯ ಎನಗೀಯೋ ಕರುಣದಿ ಮಾರ್ಕಂಡೇಯಗೆ ವರವಿತ್ತು ಚಿರಂಜೀವತ್ವವ ಪರಿಪಾಲಿಸಿದಂತೆ ಪರಿಪರಿ ಭಕ್ತರ ಪೊರೆದಂತೆ ಪೊರೆಯೆನ್ನ ಪರಿ ಇತ್ತು 2 ಪಾಶಾಂಕುರಧರ ಪರಮಪವಿತ್ರನೆ ಈಶ ಭಕ್ತರ ಭವಪಾಶದಿಂದುದ್ಧರಿಪೆ ಶ್ರೀಶ ಶ್ರೀ ಶ್ರೀನಿವಾಸನಾಸಕ್ತಿಯಲಿ ಭಜಿಪ ದೋಷರಹಿತ ಮನ ಭಾಸಿ ಪಂಥದಿ ಈವೆ ಕಾಶೀಶ್ವರ ನಿನ್ನ ಲೇಸು ಭಕ್ತಿಲಿ ಸ್ತುತಿಪಾ ದಾಸ ಸಂಗದೊಳಿರಲು ಲೇಸು ಮನವ ಕೊಡು ವಾಸುಕಿಶಯನ ಸುತನ ಸುತನೆ ನಿನ್ನ ಏಸು ದಿನದಿ ಸ್ತುತಿಸುತ ಹಾರೈಸುವೆ 3
--------------
ಸರಸ್ವತಿ ಬಾಯಿ