ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿಯಲ್ಲಿ ಕೇಳು ಶ್ರವಣದಲ್ಲಿ ಪೇಳು ಹರಿಯೇ ದೈವವೆಂದು ಪ ನಿಲ್ಲಿಸು ಹರಿಯ ವೊಲಿಸುವಳಿಗೆ ಗಳಿಸು ಜ್ಞಾನ ವಳಿಸು ಪಾಪಕಲಿಯಾ ಬೆಳಿಸು ಘಳಿಸು ತಾಮಸ ಸುಳಿಸು ಮಾರ್ಗ ಬೆಳಿಸು ಚೆನ್ನಾಗಿ ಗೆಲಿಸು ವ್ರತವ ಚಲಿಸು ಯಾತ್ರೆಯ ಇಳಿಸು ಮಮತೆ ಕಲಿಸು ಮಿಥ್ಯವ ಥಳಿಸುವಂತೆ ಕೇಳು ಮನವೆ 1 ಕೀರ್ತನೆ ಕಾಡು ರಂಗನ ಬೇಡು ದೈನದಿ ನೀಡು ಹಸ್ತವ ಬಾಡು ನಿನ್ನೊಳಗಾಡು ತಾಡುತಾ ಕೇಡು ಒದೆದು ಬಿಡು ನೆಚ್ಚ ದೀಡ್ಯಾಡ್ಯೋ ಕಾಯವ ಗೂಢದ ಮಾತಾಡು ಕಲಾಪ ಬೇಡರಟ್ಟಲು ಮೋಡು ನಿಲ್ಲದೆ ಪಾಡು ಪಂಥವಾ 2 ನೆರಿಯೊ ವೊಡನೆ ಸುರಿಯೊ ನಾಮವ ಅರಿಯೊ ಮಹಿಮೆ ಮರಿಯೊ ವ್ಯಾಕುಲ ಮೆರಿಯೊ ಗುಪ್ತದಿ ಜರಿಯೊ ಹೀನರಾ ಸರಿಯೊ ಮಿರಲು ಗುರಿಯೊ ತಮಕ್ಕೆ ಸರಿಯೆ ಲಾಲಿಸು ಧರಿಯೊಳಗೆ ನೀ ವಿಜಯವಿಠ್ಠಲನೆಂದು 3
--------------
ವಿಜಯದಾಸ
ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ಪ ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ 1 ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ 2 ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ 3 ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ ಅರ್ಥಿಯಿಂದಲಿ ಪೂಜಿಪ4 ತ್ರಿಜಗದೊಳಗಿನವರಿಗೆ ಎಣೆಗಾಣೆ ಕುಜನ ಮತ ಸೋಲಿಸುವಲ್ಲಿ ವಿಜಯವಿಠ್ಠಲನೆ ದೈವವೆಂದು ಧ್ವಜವೆತ್ತಿ ತಿರುಗಿದ ಮುನಿಪ 5
--------------
ವಿಜಯದಾಸ
ಜಯರಾಯರ ನೋಡಿರೋ ಸಜ್ಜನರೆಲ್ಲ ಜಯರಾಯರ ನೋಡಿರೋ ಪ ಜಯರಾಯರ ನೋಡಿ ಜಪಿಸಿ ಮನದಿ ಪಾಡಿ ಜಯವಾಗುವುದು ನಿಮಗೆ ಭಯನಾಶ ಸಂತತ ಅ.ಪ ದುರುಳಮತವೆಂಬೊ ಕರಿಗೆ ಅಂಕುಶವಿತ್ತು ಸುರಸಾದ ಗ್ರಂಥ ಆನಂದಮುನಿ ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ ಸ್ತರ ಮಾಡಿದಾ ಕರದ ಕನ್ನಡಿಯಂತೆ 1 ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ ಭೇದಾರ್ಥಜ್ಞಾನ ಸತ್ಯವೆನಿಸಿ ಈ ಧರಿಯೊಳಗೆ ಹರಿಪರ ದೈವವೆಂದು ಸಾಧಿಸಿ ಉದ್ದಂಡವಾದ ಗುರುತಿಲಕ 2 ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ ಸಿರಿ ವಿಜಯವಿಠ್ಠಲನನ್ನ ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ ಶ್ರೀ ಮಧ್ವೇಶಾರ್ಪಿತವು3
--------------
ವಿಜಯದಾಸ
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1 ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ || ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3
--------------
ಗುರುಪ್ರಾಣೇಶವಿಠಲರು
ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ಪ ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ 1 ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ 2 ಇಪ್ಪತ್ತು ಒಂದು ದುರ್ಮತದ ವರ ಕುವಾಕು | ಸರ್ಪನನ್ ಗರುಡ ಶೀಳಿದಂತೆ ಕೇಳಿ | ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ | ತಪ್ಪದಲೆಗರದು ಸಂತರನೆಲ್ಲ ಪೊರೆದು 3 ಮಿಥ್ಯ | ಪಂಚವಿರಹಿತ ಹರಿ ಪರನೆಂದು ಸಾರೀ | ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ | ಕಾಯ ಸುಖ ತೀರ್ಥರಾಯಾ4 ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ | ಅರಸಿದರೆ ಕಾಣೆ ಹರಿ ಪದಗಳಾ ಆಣೆ | ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ | ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ 5
--------------
ವಿಜಯದಾಸ
ಲೋಕನೀತಿಯ ಪದಗಳು ಚರಣಕಮಲ ಭಜಿಸೋ ಗೋಪಾಲಕೃಷ್ಣನ ಪ ತರುಣಿಯರ ಮನವನು ಮರುಳುಗೊಳಿಸಿದ ಪರಮ ಸುಂದರನ ಧರಿಯೊಳಗೆ ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ಅ.ಪ ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ ವೇಣುಗೋಪಾಲನ 1 ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ ಸಿಂದೂರವರದನ 2 ಕೃಷ್ಣಾ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ ಸೃಷ್ಟೀಶನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಠಗರಿಯುವನಾ ಪರಮೇಷ್ಠಿ ಜನಕನ 3 ಗರಿಯೆ ಗೋಗಳನಾ ಗಿರಿಯ ಧರಿಸಿದನಾ ಇದ ಕೃಷ್ಣನ್ನ ಪೂಜಿಸಲು ಒಲಿದನ 4 ಶರಣಾಗತ ಜನರ ಪೊರೆಯಲು ಬಂದುನಿಂತಿಹನಾ ಕಾ ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು ತುರುಪಾಲ ಕೃಷ್ಣನ 5
--------------
ಕಾರ್ಪರ ನರಹರಿದಾಸರು