ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯತಿಗಳೊಳಗೆ ಸದ್ಗತಿ ನೀನೇ ಗುರುವರಾ ಯತಿವರ ರಾಘವೇಂದ್ರ ಪ ವತಿಯಿಂದ ನಿನ್ನ ನಾಮವೇ ಗತಿಯೆನಿಪಗೆ ಮತಿಯಿತ್ತು ವಿರಸ ಸಂಸ್ಕøತಿಯಿದುದ್ಧರಿಪೆನೀ ಅ.ಪ. ಮಧ್ವಮುನಿಯ ಕರುಣಾಬ್ಧಿಯ ಚಂದ್ರನೆ ದಯಾರಸ ಸಾಂದ್ರನೆ ಶುದ್ಧ ಪಶುವೆನಿಸಿದೆ ತಿಳಿಯದೆ 1 ನಿನ್ನ ನಾಮವ ಪಠಿಪರಿಗೆ ಸರ್ವರೋಗಗಳಿಗೆ ಹಾವಳಿಗಳಿಗೆ 2 ಸರಸ ತೀರ್ಥ ಪ್ರಸಾದವೆ ಸದ್ಗತಿ ಮೃತ್ತಿಕೆಯೇ ಮುಕುತಿ ಪ್ರೀತಿ ನಿನ್ನಲಿ ಭಕ್ತಿ 3
--------------
ನರಸಿಂಹವಿಠಲರು
ರಾಮತಾರಕ ಮಂತ್ರ ಜಪಿಸಿ | ಸರ್ವಕಾಮಗಳ ಪಡೆದವನೆ ನಮಿಸಿ | ಬೇಡ್ವೆಕಾಮದುಷ್ಟಗಳ ಪರಿಹರಿಸಿ | ಹೃದ್‍ಧಾಮೆ ಹರಿ ತೋರೊ ಕರುಣಿಸೀ ಪ ಗಜ ಅಜಿನ ಧರಿಸಿ | ಮತ್ತೆಕರ್ಪರವ ಕೈಯಲ್ಲಿ ಇರಿಸಿ | ನೀನುಅಪವಿತ್ರ ಅಶಿವ ನೆಂದೆನಿಸೀ | ವರಮಸಫಲ ಶಿವ ಅಮಂಗಳವ ಹರಿಸೀ 1 ಪರಮ ಸದ್ಭಾಗವತ ಮೂರ್ತೇ | ಲಕ್ಷ್ಮೀನರಹರಿಯ ಆಣತಿಯ ಪೊತ್ತೇ | ವಿಷಯನಿರತರನು ಹರಿವಿಮುಖ ಶಕ್ತೆ | ಕಾಯೊಹರ ಸದಾಶಿವ ಭಾವ ಮೂರ್ತೇ 2 ತಪದಿಂದ ಹರಿಯೊಲಿಸೆ ನೀನು | ಹತ್ತುಕಲ್ಪ ಲವಣಾಂಭುದಿಯಲಿನ್ನು | ಗೈದೆತಪ ಉಗ್ರದಲಿ ಪೇಳ್ವುದೇನು | ನೀನು`ತಪ` ನೆಂದು ಕರೆಸಿದೆಯೊ ಇನ್ನು 3 ಶುಕಿಯಾಗಿ ಬಂದ ಅಪ್ಸರೆಯ | ಕೂಡ್ಡಅಕಳಂಕ ವ್ಯಾಸಾತ್ಮ ಧೊರೆಯ | ಮಗನುಶುಕನಾದೆ ಶಿವನೆ ಇದು ಖರೆಯ | ನುತಿಪೆಪ್ರಕಟ ಭಾಗವತಕ್ಕೆ ಧೊರೆಯ 4 ಮಾರುತನು ನಿನ್ನೊಳಗೆ ನೆಲಿಸಿ | ಗೋಪ್ಯದೂರೆಂಬ ನಾಮವನೆ ಧರಿಸಿ | ಇರಲುದೂರ್ವಾಸನೆಂಬ ಕರೆಸಿ | ಮೆರೆವಭೂ ಭೃತರ ಮಾನವನೆ ಕೆಡಿಸಿ 5 ಪತಿ ಸಂಗ ರಹಿತೆ | ಎನಿಸೆಭಾರತಿಯ ದೇಹದಲಿ ಜಾತೆ | ಇರಲುಪ್ರಾರಬ್ಧ ಭೋಗಿಸುವ ಮಾತೆ | ಎನಿಸಿವೀರ ಅಶ್ವತ್ಥಾಮ ಕೃಪೆ ಜಾತೆ 6 ಧಾಮ ಈಶಾನ್ಯದಲಿ ಇದ್ದು | ನಿನ್ನವಾಮದಲಿ ವಾಸುದೇವಿದ್ದು | ನೀನುವಾಮದೇವನ ಪೆಸರು ಪೊದ್ದು | ಧರಿಪೆಸ್ವಾಮಿ ಪೂಜಕನೆಂಬ ಮದ್ದು 7 ಕಾಲಾತ್ಮ ನಿನ್ನೊಳಗೆ ನೆಲಸಿ | ಪ್ರಳಯಕಾಲದಲಿ ಜಗವ ಸಂಹರಿಸಿ | ನಿನ್ನಕಾಲಾಖ್ಯ ನೆಂತೆಂದು ಕರೆಸಿ | ಮೆರೆವಲೀಲಾತ್ಮ ನರಹರಿಯು ಎನಿಸಿ 8 ಶಫರ ಹರಿದ್ವೇಷಿಗಳು ಎನಿಪ | ದೈತ್ಯತ್ರಿಪುರಸ್ಧರನು ಸಂಹರಿಪಾ | ಶಿವನೆವಪು ಧರಿಸಿ ಅಘೋರ ನೆನಿಪಾ | ಗೈದಅಪವರ್ಗದನ ಸೇ5ರೂಪ 9 ಹೃದ್ಯ ಹರಿಸೇವೆಂi5Àು ಗೈವಾ | ಮನದಿಬದ್ಧ ದ್ವೇಷಿಗಳೆಂದು ಕರೆವಾ | ದೈತ್ಯಕ್ರುದ್ಧರ ತಪಕೆ ಸದ್ಯ ವರವಾ | ಇತ್ತುಸಧ್ಯೋಜಾತನೆನಿಸಿ ಮೆರೆವ 10 ಹರಿಯಂಗ ಸೌಂದರ್ಯ ನೋಡಿ | ನೋಡಿಪರಮಾನಂದವನೆ ಗೂಡೀ | ಇಂಥಹರಿಪದ ದೊರಕೆ ಚಿಂತೆ ಗೂಡಿ | ಅತ್ತೆಹರುಷದಿ ಊರು ಸುತ ಪಾಡಿ 11 ಊರು ನಾಮಕ ರುದ್ರನಿಂದ | ಜಾತಕಾರಣ ಔರ್ವಭಿಧದಿಂದ | ಕರೆಸಿಉರ್ವರಿತ ರೋದನದಲಿಂದ | ಮೆರೆದೆಮಾರಾರಿ ಔರ್ವಭಿಧದಿಂದ 12 ವಿಷಯದಲಿ ಆಸಕ್ತರಾದ | ಮುಕ್ತಿವಿಷಯಕೆ ಬಹುಯೋಗ್ಯರಾದ | ಜನರವಿಷಯಾನುಕಂಪಿತನು ಆವ | ರುದ್ರಹಸನಾಗಿ ರೋದಿಸಿದಗಾಢ 13 ಕಮಲಾಕ್ಷಿ ದಕ್ಷಸುತೆ ತನ್ನ | ದೇಹವಿಮಲಯೋಗಾಗ್ನಿಯಲಿ ಭಗ್ನ | ಮಾಡಿಹಿಮದಾದ್ರಿ ಯೊಳಗೆ ಉತ್ಪನ್ನ | ವಾಗೆವಿಮಲ ಶಿವಗೊಂಡ ವ್ರತ ಕಠಿಣ 14 ಆದ್ಯಕಾಲದಲಿಂದ ಊಧ್ರ್ವ | ರೇತಬುದ್ಧಿಮಾಡುತ ತಪವು ಶುದ್ಧ | ಗೈದುಸಿದ್ಧನಾಗಿರುತಿರಲು ರುದ್ರ | ಕೇಳಿಊಧ್ರ್ವ ನೆಂಬಭಿಧಾನ ಪೊದ್ದ 15 ಕಾಮಹರ ತಪದಿಂದಲೆದ್ದು | ಬಹಳಪ್ರೇಮದಲಿ ಅದ್ರಿಸುತೆ ಮುದ್ದು | ಮಾಡಿಕಾಮಲಂಪಟನೆಂಬ ಸದ್ದು | ಗಳಿಸಿನಾಮ ಲಂಪಟ ನೆಂದು ಪೊದ್ದು 16 ಹರಪೊತ್ತ ಹನ್ನೆರಡು ನಾಮ | ದಿಂದಹರಿಮುಖ್ಯನಿಹನೆಂಬ ನೇಮ | ತಿಳಿದುಹರನ ಪೂಜಿಸೆ ಈವ ಕಾಮ | ನೆಂದುಗುರು ಗೋವಿಂದ ವಿಠ್ಠಲನ ನೇಮ17
--------------
ಗುರುಗೋವಿಂದವಿಠಲರು
ರುದ್ರದೇವರು ಗಂಗಾಧರ ಮಹಾದೇವ ಶಂಭೊಶಂಕರ ಪ. ಗಂಗಾಧರಾ ನಿನ್ನ ನಂಬಿದ ಭಕ್ತರಘ ದ್ಹಂಬ ಕಡಿದು ಹರಿ ಇಂಬ ತೋರೆ ಜಗ ಕಂಬಾರಮಣ ನಿನ್ನ ಸಂಭ್ರಮದಿ ಸ್ತುತಿಪೆ ಅ.ಪ. ಚಾರು ಚರ್ಮಾಂಬರ ಧೀರ ಧರಿಶಿ ಮೆರೆವ ಚಾರು ಭೂತಗಣ ಸಂಚಾರ ಭಸ್ಮಧರಾ ಹಾರ ಕೇಯೂರ ಮಧ್ಯ ಥೋರ ಸರ್ಪ ಭೂಷ ನಿನ್ನ ಚಾರು ರೂಪ ವರ್ಣಿಸಲಳವೆ ಸಾರಸಾಕ್ಷ ಪಾರ್ವತಿಪ್ರಿಯ ಕರುಣಾಕರಸ ದೊರಕದೆ ಶ್ರೀರಮಣನು ಸಿಗ ಕೋರೆ ಹರಿಯ ನಿನ್ನ ಪಾದಪಂಕಜ ಹಾರೈಸುವೆ ಸಂಸಾರ ಶರಧಿಂ 1 ಪರಮಪುರುಷ ಶ್ರೀ ರಾಮನ ತಾರಕ ವರಮಂತ್ರ ಜಪಿಸುವ ವರ ಪಾರ್ವತಿಗರುಹಿ ಧರೆಯೊಳು ಮನುಜರ ವರಮನ ಪರಿಪರಿ ಬೇಡುವೆ ಹರಿಸ್ಮರಣೇಯ ಎನಗೀಯೋ ಕರುಣದಿ ಮಾರ್ಕಂಡೇಯಗೆ ವರವಿತ್ತು ಚಿರಂಜೀವತ್ವವ ಪರಿಪಾಲಿಸಿದಂತೆ ಪರಿಪರಿ ಭಕ್ತರ ಪೊರೆದಂತೆ ಪೊರೆಯೆನ್ನ ಪರಿ ಇತ್ತು 2 ಪಾಶಾಂಕುರಧರ ಪರಮಪವಿತ್ರನೆ ಈಶ ಭಕ್ತರ ಭವಪಾಶದಿಂದುದ್ಧರಿಪೆ ಶ್ರೀಶ ಶ್ರೀ ಶ್ರೀನಿವಾಸನಾಸಕ್ತಿಯಲಿ ಭಜಿಪ ದೋಷರಹಿತ ಮನ ಭಾಸಿ ಪಂಥದಿ ಈವೆ ಕಾಶೀಶ್ವರ ನಿನ್ನ ಲೇಸು ಭಕ್ತಿಲಿ ಸ್ತುತಿಪಾ ದಾಸ ಸಂಗದೊಳಿರಲು ಲೇಸು ಮನವ ಕೊಡು ವಾಸುಕಿಶಯನ ಸುತನ ಸುತನೆ ನಿನ್ನ ಏಸು ದಿನದಿ ಸ್ತುತಿಸುತ ಹಾರೈಸುವೆ 3
--------------
ಸರಸ್ವತಿ ಬಾಯಿ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಪ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ. ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ನಿಕರ ಸ್ತೋತ್ರಿ - ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ 1 ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ ಪೂರ್ವದೇವತೆ ಹರಿಜಾತೆ ಉರ್ವಿಯೊಳಗೆ ಮದಗರ್ವದ ಮತಿನಾ- ನೋರ್ವನಲ್ಲದೆ ಮತ್ತೋರ್ವನ ಕಾಣೆನು ಪೂರ್ವಜನ್ಮದ ಪಾಪ ಪರ್ವತದಂತಿದೆ ನಿರ್ವಾಹವನುಮಾಡೆ ದೂರ್ವಾಂಕುರದಿ 2 ನಿಗಮಾಭಿಮಾನಿ ಸುಜ್ಞಾನಿ ಅಗಣಿತ ಫಲದಾಯಿನಿ ಝಗಝಗಿಸುವ ಕರಯುಗಳ ಭೂಷಣ ಪ - ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ 3
--------------
ವಿಜಯದಾಸ
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ ಧೃತ - ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ. ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ - ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ 1 ಮೋದ ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ 2 ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ - ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ 3
--------------
ಗುರುಗೋವಿಂದವಿಠಲರು
ಶ್ರೀತುಳಸಿ162ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರಭಾಗ್ಯವೆಂತೊ ಪ .ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ 1ಈ ಮನುಜ ದೇಹದಲಿದಾವಪ್ರಾಣಿಯು ಪಿತೃಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣತಾಮರಸಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವಸೋಂಕಿಬಂದಾ ಮರುತದಿಂದ ದೇಶ ಗ್ರಾಮಗಳು ಪಾವನವುಧೀಮಂತ ಮಾನ್ಯಳಾದ 2ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃಗಳಿಗನ್ನವಿತ್ತರಕ್ಷಯಫಲವು ಊಧ್ರ್ವಪುಂಡ್ರತಳದ ಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದಫಲ ಸಿದ್ಧವುನಿಲಯದಲಿ ಪತ್ರಮೃತ್ತಿಕೆಕಾಷ್ಠವಿರಲಲ್ಲಿಕಲಿಮುಟ್ಟಲಂಜಿ ತೊಲಗುವನು ಮಣಿಸರಗಳನುಗಳದೊಳಾಂತರಾಕಲುಷಸಂಹರವು ಸಹ ಸಲೆವಿಷ್ಣುಪದವಿಯನೀವ 3ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವುಪ್ರತಿದಿನದಿ ನಾಭಿಕಕರ್ಣದಲಿ ಶಿರದಲ್ಲಿ ಶ್ರೀಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು ಪತಿತಪಾವನಿಎನಿಸುವಾ 4ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯುನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನುಮಾಡಲುಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾಸಿರಕಾಲತಿರುಗಿ ಬಂದರೆ ಸತತ ಮಾಂಗಲ್ಯಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿವರದಂತೆ ಪದವ 5ಒಂದೊಂದುದಳಕೋಟಿ ಸ್ವರ್ಣಭಾರಕೆ ಮಿಗಿಲುಎಂದು ವಿಶ್ವಾಸದಲಿ ತಂದು ಸಾಸಿರನಾಮದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದಂದುಗವು ಮಾನಿಸರ್ಗೆಸುಂದರ ತುಲಸಿ ಮೂಲವನ್ನು ತೊಡಕಿರ್ದಕಳೆಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾನಂದವಿತ್ತರಾ ನೂರೊಂದು ಕುಲ ನರಕವನು ಹೊಂದಲೀಸರುಪುಣ್ಯದಾ 6ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳುಬಾವನ್ನಗಂಧಿಯಳ ಮಧ್ಯದಲಿ ಸುರನಿಕರಪಾವನಿಯಳಾ ಹರಿಯ ಕೊನೆಯಲಿಶ್ರುತಿಸಮೂಹಲಾವಣ್ಯ ಗುಣರಾಸಿಯುಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿತ್ತಾವ ಕಾಲಕ್ಕೆಹೊರೆವಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ7
--------------
ಪ್ರಸನ್ನವೆಂಕಟದಾಸರು