ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ
ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ಪ. ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1 ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2 ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
--------------
ವಾದಿರಾಜ
ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ 1 ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ 2 ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ3 ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ4 ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ5
--------------
ಕೆಳದಿ ವೆಂಕಣ್ಣ ಕವಿ
ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ಪ ಕರ ಕಂ- ಜೋತ್ಥರಾದ ಗುರು ಅ.ಪ ಸುತ್ತಲು ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳಲಿ ಚರಿಸಿ ಹಸ್ತಿ ಗಣಕೆ ಪಂಚ ವಕ್ತ್ರರೆಂದು ಕರಿಸಿ ಛಾತ್ರ ವರ್ಗ ಸಂಯುಕ್ತರಾಗಿ ಸುಖತೀರ್ಥರ ಸುಮತಕೆ ಸಂಸ್ಥಾಪಕ ಗುರು 1 ಏನು ಕರುಣವೊ ಜ್ಞಾನಿಗಳನು ಧನದಾನದಿ ದಣಿಸುತಲಿ ಕ್ಷೋಣಿ ವಿಬುಧರಿಗೆ ನ್ಯಾಯ ಸುಧಾರಸ ಪಾನ ಮಾಡಿಸುತಲಿ ದೀನ ಜನಕೆ ಸುರಧೇನು ಎನಿಸಿದ ಮಹಾನುಭಾವರೆಂದು ಸಾನುರಾಗದಲಿ 2 ಶ್ರೀರಾಮನ ಪದಪದುಮ ನೋಳ್ಪಜನರ ಜನುಮ ಧೀಮಜ್ಜನರಿಗೆ ಕಾಮಿತ ಗರಿಯುವ3 ತರಣಿಯೋಳ್ಪಗಲಿರುಳು ಭವಶರಧಿಯ ದಾಟಿಸಲು ವಸನದಲಿ ಪರಿಶೋಭಿತ ತನು 4 ದುರಿತ ತಮಕೆ ದಿನಕರ ಸಮರೆನಿಸುತಲಿ ಸಿರಿ ಕಾರ್ಪರ ನರಹರಿಯ ಚರಣಯುಗ್ಮ ಸ್ಮರಿಸುತ ಹರುಷದಲಿ ಧರೆಯೊಳು ಪಂಢರ ಪುರ ಸುಕ್ಷೇತ್ರದಿವರತನುವಿರಿಸಿದ ಪರಮ ಮಹಿಮ ಗುರು 5
--------------
ಕಾರ್ಪರ ನರಹರಿದಾಸರು
6 (ಅ)ಸಂಪ್ರದಾಯದ ಹಾಡುಗಳು424ಆದಿನಾಥಗೆ ಜಯಮಂಗಳಶ್ರೀಧರ ಮೂರ್ತಿಗೆ ಶುಭಮಂಗಳ ಪ.ಧರಿಸಿ ನಾವೆಯ ಸತ್ಯವ್ರತನ ಪಾವನ ಮಾಡಿಚರಿಸದೆ ಮಂದರಗಿರಿಯ ಹೊತ್ತುಧರೆಯ ನೆಗಹಿ ಬಂಗಾರಗಣ್ಣಿನವನಹರಿದು ದೈತ್ಯಜಗೊಲಿದು ಬಂದವಗೆ 1ಸುರಪನಂತಸ್ತಾಪ ತರಿದು ಧರಿತ್ರಿಯಸುರರಿಗೆ ಸಕಲ ಪದವಿಯನಿತ್ತುಶರಧಿಯ ದಾಟಿ ದಶಶಿರನ ತಲೆ ಚಿವುಟಿತುರುಗಾಯ್ದ ಗೋಪೇರ ಅರಸನಿಗೆ 2ಅಂತರಾಳ ಪಟ್ಟಣಕಪಾಯವನು ಮಾಡಿಅಂತ್ಯದಿ ಯವನರ ಸವರಿದಗೆಚಿಂತಿಪ ದಾಸರ ಚಿಂತಾಮಣಿಗೆಸಿರಿಕಾಂತ ಪ್ರಸನ್ವೆಂಕಟದಾಸನಿಗೆ 3
--------------
ಪ್ರಸನ್ನವೆಂಕಟದಾಸರು
ಬಿನ್ನಹಕೆ ಬಾಯಿಲ್ಲ ಎನಗೆ ಅದರಿಂದ |ನಿನ್ನ ಮರೆದೆನೊ ಸ್ವಾಮಿ ಎನ್ನ ಕಾಯಯ್ಯ ಪಅನ್ನಮದ ಅರ್ಥಮದಅಖಿಳವೈಭವದ ಮದ |ಮುನ್ನ ಪ್ರಾಯದ ಮದವುರೂಪಮದವು ||ತನ್ನ ಸತ್ವದ ಮದ ಧರಿತ್ರಿ ವಶವಾದ ಮದ |ಇನ್ನು ಎನಗಿದಿರಿಲ್ಲವೆಂಬ ಮದದಿ 1ಶಶಿವದನೆಯರ ಮೋಹಜನನಿ- ಜನಕರ ಮೋಹ |ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ ||ಪಶು ಮೋಹ ಶಿಶುಮೋಹ ಬಂಧುವರ್ಗದ ಮೋಹ |ಹಸನುಳ್ಳ ವಸ್ತ್ರ ಆಭರಣಗಳ ಮದದಿ 2ಇಷ್ಟ ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |ಅಷ್ಟು ದೊರಕಿದರೆ ಮತ್ತಷ್ಟರಾಸೆ ||ಕಷ್ಟ ಜೀವನದಾಸೆಕಾಣಾಚಿಕೊಂಬಾಸೆನಷ್ಟ ಜೀವನ ಬಿಡಿಸೆಪುರಂದರವಿಠಲ3
--------------
ಪುರಂದರದಾಸರು
ಸಿಂಧುಶಯನನೆ ಬಾರೊ ಇಂದಿರಾರಾಧ್ಯನೆ ಬಾರೊಮಂದಿರಜನಯ್ಯನೆ ಬಾರೊ ಇಂದೆನ್ನ ಮನಮನೆಗೆ ಪ.ಬಾರೊ ಭಕ್ತರ ಪಾಲಕ ವೆಂಕಟರನ್ನ ಬಾರೊ ಅ.ಪ.ರಾತ್ರಿನಾಮನರಿಯೆ ಬಾ ಗೋತ್ರಧರ ಬಾರೊಹೇಮನೇತ್ರನ ಸದೆದು ಧರಿತ್ರಿ ತಂದೆ ಪೋತ್ರಿರೂಪಬಾರೊ1ಹರಿಮೊಗದವ ಬಾರೊ ಹರಿಯನುಜನೆ ಬಾರೊಕರಜರ ಸವರಿದ ಹರಿಕುಲೋತ್ತಮರನ್ನ ಬಾರೊ 2ಚೆನ್ನನಾಗಿ ಮೆರೆದೆ ಬಾ ಚೆನ್ನೆವಾಸ ಜರಿದೆ ಬಾಉನ್ನತ ಹಯವೇರಿ ಪ್ರಸನ್ನವೆಂಕಟಾದ್ರಿವಾಸ ಬಾರೊ 3
--------------
ಪ್ರಸನ್ನವೆಂಕಟದಾಸರು