ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ನಿನ್ನಂಘ್ರಿ ಭಜಿಸುವರೈಯ್ಯಾ ಸಾರಹೃದಯರ ಪ್ರೀಯ ಸುರಮುನಿಜನ ಧ್ಯೇಯಾ ಪ ಕಮಲಭವಶಿವ ಇಂದ್ರ ನೀನಾಗೇನು ರಮೆ ಧರಾದೇವಿ ರಮಣಾದರೇನು ಯಮದೂತರೊಳಗಾದ ಆಜಮಿಳ ಪೆಸೆ ರ್ಗೊಳೆ ಸುಮನಿಸುರ ನಯ್ಯವನ ಕಾಯದಿದ್ದೊಡೆ 1 ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗೇನು ಮಗುಳಿ ಸೂತ್ರಧಾರಿಯಾದರೇನು ಸುಗುಣ ಪ್ರಲ್ಹಾದಂಬರೀಷ ಕರಿವರ ಧ್ರುವಾದಿಗಳನುದ್ದರಿಸಿ ತಾರಿಸದಿದ್ದಡೆ 2 ಎಂದೆಂದು ಅರ್ತಜನ ಬಂದು ದೀನಾನಾಥ ತಂದೆ ಮಹಿಪತಿ ಸ್ವಾಮಿಯಂದಡೇನು ಮಂದಮತಿ ಕುಂದಘನವಂದು ನೋಡದ್ದೆ ಇಂದು ನಂದನಗೆ ಸೇವೆ ಪದಲಿಡದಿದ್ದರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಪ ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ | ವೀಯೆ ಭಕ್ತರ ಪ್ರೀಯೇಅಪ ಕನ್ನಾಮಣಿಯೆ ಕಾಮಿನಿ ಮಂಗಳವಾಣಿ | ಸನ್ನುತೆ ಲೋಕ ಜನನಿ | ನಿನ್ನ ಚರಣಯುಗ್ಮ | ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ | ಭಿನ್ನೆ ಭಾಗ್ಯಸಂಪನ್ನೆ || ಮನ್ನಿಸಿ ಮುದದಿಂದ | ಬಿನ್ನಪ ಲಾಲಿಸು | ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ 1 ಅತಿದಯವಂತೆ ನೀನೆಂದು ಬೇಗದಿ ಬಂದು | ನುತಿಸಿದೆ ದೀನನಾಗಿಂದೂ | ಪತಿತರೊಳಿಡದಲೆ | ಗತಿಗೆ ಸಮ್ಮೊಗಮಾಡು | ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ | ಪತಿಯಲಿ ಜನಿಸಿದೆ| ಪತಿಗೆ ಸತಿಯಾದೆ | ಪತಿಯ ಸಂಗಡ ಜ | ನಿತಳಾದ ಚರಿತೆ2 ಕುಂಕುವರತ ರಾಜಿತೆ ಧವಳಗೀತೆ | ಪಂಕಜಸದನೆ ಖ್ಯಾತೆ | ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ | ಸಂಕಾಸೆ ಬಹುಕಾಲ | ಸಂಕಟವ ವಿನಾಶೆ | ಕ | ಳಂಕವಾಗದಂತೆ3
--------------
ವಿಜಯದಾಸ
ನಂದ ಯಶೋದೆಯರಲ್ಲಿ ಬಂದು ಅವತರಿಸಿದ ಇಂದಿರಾಪತಿಯ ಮಹಿಮೆಯನಲುವಿನಿಂದ ಚಂದವನೆಲ್ಲ ರಚಿಸಿದ ಪ. ದೇವನಾರಾಯಣ ಭೂದೇವಿ ಮೊರೆ ಕೇಳಿ ದೇವಕಿಯಲ್ಲಿ ಅವತರಿಸಿದ ದೇವಕಿದೇವಿಯಲ್ಲಿ ಅವತರಿಸಿದ ಧರಾದೇವಿ ಭಾರವನೆಲ್ಲ ಇಳಿಸಿದ1 ದುಷ್ಟ ದೈತ್ಯರನಟ್ಟಿ ಆಪನೊಳು ಮನೆಕಟ್ಟಿಪಟ್ಟದ ರಾಣಿಯರ ಒಯ್ದಿಟ್ಟಪಟ್ಟದ ರಾಣಿಯರ ಒಯ್ದಿಟ್ಟ ಶೌರ್ಯವ ಎಷ್ಟು ವರ್ಣಿಸಲ್ಪಶವಲ್ಲ 2 ಹರಿಯು ವೈಕುಂಠದ ಪರಿಯ ತೋರುವೆನೆಂದುಧರೆ ಮೇಲಾಗ ಜನಿಸಿದ ಧರೆ ಮೇಲಾಗ ಜನಿಸಿದ ದ್ವಾರಕಾಪುರನಿರ್ಮಿಸೆಂದು ಜಲದೊಳು 3 ದೊರೆ ಕೃಷ್ಣಯ್ಯನ ಹಿರಿ ಮಡದಿಮನೆಪರಿಯ ವರ್ಣಿಸಲು ವಶವÀಲ್ಲಪರಿಯ ವರ್ಣಿಸಲು ವಶವಲ್ಲ ದ್ವಾರಕಾಸಿರಿಕೇಳಿ ಬ್ರಹ್ಮ ಬೆರಗಾದ4 ಅಪ್ಪ ರಾಮೇಶನು ಇಪ್ಪಂಥ ಅರಮನೆಯುಅಪ್ರಾಕೃತ ವೈಕುಂಠಅಪ್ರಾಕೃತ ವೈಕುಂಠ ವೆಂಬೋದುಸುಪ್ರಕಾಶವಾಗಿ ಹೊಳೆದೀತು5
--------------
ಗಲಗಲಿಅವ್ವನವರು
ಆರೋಗಣೆಯ ಮಾಡೇಳಯ್ಯ ಶ್ರೀಮನ್ನಾರಾಯಣಭೋಗ ಸ್ವೀಕರಿಸಯ್ಯಪ.ಸರಸಿಜಭವಾಂಡದ ಮೇರು ಮಂಟಪದಿ ದಿನಕರಕರ ದೀಪ್ತ ಜ್ಯೋತಿಶ್ಚಕ್ರವು ||ತರಣಿ ಮಂಡಲ ಪೋಲುವ ರತುನದ ಹೊನ್ನಹರಿವಾಣದಲಿ ದೇವಿ ಬಿಡಿಸಿಹಳಯ್ಯ 1ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2ಹಪ್ಪಳ ಸಂಡಿಗೆ ವಿವಿಧ ಶಾಕಂಗಳುತುಪ್ಪ ಸಕ್ಕರೆ ಹಣ್ಣು-ಹಂಪಲವು ||ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3ಎಣ್ಣೂರಿಗತಿರಸ ಚೆನ್ನಾದ ಮಂಡಿಗೆಅನ್ನಕ್ಷೀರಾನ್ನ ಪರಮಾನ್ನಗಳು ||ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4ನೀ ನಿತ್ಯತೃಪ್ತನಹುದು ನಿನ್ನ ಉದರದೊಳುನಾನಾ ಜನರು ಬಂದು ಉಣ್ಣಬೇಕೋ ||ಶ್ರೀನಾಥ ಗದುಗಿನ ವೀರನಾರಾಯಣಅನಾಥ ಬಂಧು ಶ್ರೀ ಪುರಂದರವಿಠಲ 5
--------------
ಪುರಂದರದಾಸರು