ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸಂತತಿಗೆ ನಮೊ ನಮೊ ಶ್ರೀ ಹರಿಶರಣರಿಗೆ ನಮೋ ನಮೋ ಪ ಧರಣೀಸುರರಿಗೆ ನಮೋ ನಮೋ ಅ.ಪ ವಿಜಯರಾಮದಾಸಗುರುವೆ ನಮೋ ನಮ ಭಜಕಜನರಸುರತರುವೆ ನಮೋ ವೃಜಿನ ಕಳೆವ ಭಾಗ್ಯನಿಧಿದಾಸ ನಮೋ ವಂದೇ ಸುಪ್ರೇಮದಾಸ ನಮೋ 1 ತಿರುಮಲಾಖ್ಯದಾಸರಿಗೆ ನಮೋ ನಮ ಗುರುಗೋಪಾಲರಾಯರಿಗೆ ನಮೋ ವರ ಭಾಗಣ ವಿಜಯರಾಯರಿಗೆ ನಮೋ ಪುರಂದರಾಖ್ಯ ಸುರಮುನಿಗೆ ನಮೋ 2 ವ್ಯಾಸಾಭಿಧಮೌನೀಶನಮೋ | ಹರಿ ದಾಸಶ್ರೀಪಾದರಾಯರಿಗೆ ನಮೋ ಭೂಸುರ ಪ್ರಿಯಹನುಮತೇ ನಮೋ ಸೀತೇಶ ಶ್ರೀಗುರುರಾಮ ವಿಠಲ ನಮೋ 3
--------------
ಗುರುರಾಮವಿಠಲ
ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ಶ್ರೀಲೋಲನೆ ಪರಿಪಾಲಿಪುದೆಮ್ಮನು ಕಾಲವಿಳಂಬಿಸದೇ ಪ. ಪೇಳಲೆಮಗೀ ನಾಲಿಗೆ ಸಾಲದು ಅ.ಪ ಅನಿಮಿಷರೂಪದಿಂದಾಗಮವನು ನೀನಜನಿಗೆ ತಂದಿತ್ತೆ ಪೂರ್ವದಿ ಘನ ಕಚ್ಛಪರೂಪದೊಳಾಗಿರಿಯನು ಬೆನ್ನೊಳಗಾಂತೇ ಅನಿಮಿಷರೊಡೆಯನ ಮನವನು ತಣಿಸಿದ ಫನಮಹಿಮನೆ ಶ್ರೀ ವನಜಜ ಜನಕನೆ ಶ್ರೀಲೋಲನೆ 1 ದುರುಳನ ಕರದಲಿ ಧರಣಿಯು ಸಿಲುಕುತ ಕರೆಕರೆಗೊಳ್ಳುತಿರೆ ವರಸೂಕರನಾಗುತ ದುರುಳನ ಛೇದಿಸಿ ಧರಣಿಯ ಕೈಪಿಡಿದೆ ಮತ್ತೆ ತರಳನ ಪೊರೆಯಲು ನರಕೇಸರಿ ರೂಪದಿ ಹಿರಣ್ಯಕನುದರದ ಕರುಳನು ಕಿತ್ತೆಸೆದೆÉೀ ಶ್ರೀಲೋಲನೆ 2 ಕಪಟತನದಲಿ ವಟುವಂದದಿ ಬಂದು ನೆಲವದಾನವ ಬೇಡಿ ಕಪಟವನರಿಯದೆ ದಾನವ ಕೊಟ್ಟನ ಪಾತಾಳಕೆ ಗುರಿ ಮಾಡಿ ಅಪರಿಮಿತಾನಂದದಿ ಮೆಚ್ಚಿ ಬಲೀಂದ್ರನ ಮನೆಬಾಗಿಲ ಕಾಯುವ ಗೊಲ್ಲ ನೀನೆನಿಸಿದೆ 3 ವರಮುನಿ ಜಮದಗ್ನಿಯ ರೇಣುಕಾಸುತ ಭಾರ್ಗವ ನೀನಾಗಿ ವರಪರಶುದರನೆಂದೆನ್ನಿಸಿ ಭೂಭುಜರನು ತರಿದಟ್ಟಿ ಧರಣೀಸುರರಿಗೆ ಸುರತರುವೆನಿಸಿದ 4 ಹರವಿರಂಚಿಯರ ವರಗಳ ಗರ್ವದೆ ದಶಶಿರದೈತ್ಯನು ಮೆರೆದು ಪರಿಪರಿ ವಿಧದಿಂ ಸುರಭೂಸುರರನು ಕರೆಕರೆಗೊಳಿಸುತಿರೆ ಧರಣಿಪ ದಶರಥ ತನುಭ ವರೆನ್ನಿಸಿ ನಿಶಿಚರ ಕುಲವನೇ ಸವರಿದ ರಾಘವ 5 ಅಷ್ಟಮದಂಗಳ ದಟ್ಟಣೆಯಿಂದತಿ ಅಟ್ಟಹಾಸದಿ ಮೆರೆದಾ ದುಷ್ಟ ಕಂಸನ ಮರ್ಧಿಸಿ ಧರಣಿಯ ಶಿಷ್ಟರ ಪಾಲಿಸಲು ವೃಷ್ಟಿವಂಶದಿ ಬಂದು ಕೃಷ್ಣನೆನಿಸಿ ತನ್ನ ಇಷ್ಟರಾದ ಪಾಂಡುಪುತ್ರರ ಸಲಹಿದ6 ಸಿದ್ದಿ ಸಂಕಲ್ಪದಿ ಬಲಭದ್ರನೆನ್ನಿಸಿ ಭವಬದ್ಧ ಜೀವಿಗಳಂ ಶುದ್ಧ ಮಾರ್ಗದಿ ಸಂಸ್ಕರಿಸಿ ಜಗವನು ಉದ್ಧರಿಸಲ್ಕಂಡು ಬುದ್ಧನೆಂದೊಳಿಸಿ ಮೆರೆದ ಸಂಕರ್ಷಣ ಭದ್ರಮಂಗಳ ಭವ್ಯಸ್ವರೂಪನೆ7 ಕಲಿಮಲದೋಷವ ತೊಳೆಯಲು ಪುನರಪಿ ಕಳೆಯೆ ನೀನೈತರುವೆ ಫಲತೆರದಲಿ ಭಕ್ತರ ಸಲಹಲು ಫಲರೂಪಗಳ ಕೈಕೊಳುವೆ ಹಲುಬುವ ಕಂದನ ಸಲಹೈ ಸಿರಿದೊರೆ 8
--------------
ನಂಜನಗೂಡು ತಿರುಮಲಾಂಬಾ