(ಇ) ಶ್ರೀಕೃಷ್ಣಸ್ತುತಿಗಳು
ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ
ವಿನುತ ವಾಣೀಶ ಜಯಣೀಶ ಜಯ ಜಯ ಪ
ಕಮಲಭವನುತಿಪಾತ್ರ ಕಮಲಸಖನಿಭಗಾತ್ರ
ಕಮಲರಿಪುಸಮವಕ್ತ್ರ ಕಮಲದಳನೇತ್ರ
ಕಮಲಕರಧೃತಗೋತ್ರ ಕಮನೀಯ ಸುಚರಿತ್ರ
ಕಮಲಾರಿಧರಮಿತ್ರ ಕಮಲಾಕಲತ್ರ 1
ನಂದಗೋಪಕುಮಾರ ನವನೀತದಧಿಚೋರ
ಸುಂದರೀ ಕುಲಜಾರ ಸ್ಮರಸಮರ ಶೂರ
ಕಂದರ್ಪಸಹಕಾರ ಕಾಮಿನೀವಾರ
ಬೃಂದಾವನವಿಹಾರ ಭಕ್ತ ಮಂದಾರ 2
ಧರಣೀಧರಾಸ್ಫಾಲ ಮನಕರ ನಿಜಲೀಲ
ನರಪೌತ್ರ ಪರಿಪಾಲ ನವ್ಯವನಮಾಲಾ
ವರವ್ಯಾಘ್ರಗಿರಿಲೋಲ ವರದಾರ್ಯವಿಠಲ 3