ಒಟ್ಟು 18 ಕಡೆಗಳಲ್ಲಿ , 11 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಶ್ರೀಕೃಷ್ಣಸ್ತುತಿಗಳು ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ ವಿನುತ ವಾಣೀಶ ಜಯಣೀಶ ಜಯ ಜಯ ಪ ಕಮಲಭವನುತಿಪಾತ್ರ ಕಮಲಸಖನಿಭಗಾತ್ರ ಕಮಲರಿಪುಸಮವಕ್ತ್ರ ಕಮಲದಳನೇತ್ರ ಕಮಲಕರಧೃತಗೋತ್ರ ಕಮನೀಯ ಸುಚರಿತ್ರ ಕಮಲಾರಿಧರಮಿತ್ರ ಕಮಲಾಕಲತ್ರ 1 ನಂದಗೋಪಕುಮಾರ ನವನೀತದಧಿಚೋರ ಸುಂದರೀ ಕುಲಜಾರ ಸ್ಮರಸಮರ ಶೂರ ಕಂದರ್ಪಸಹಕಾರ ಕಾಮಿನೀವಾರ ಬೃಂದಾವನವಿಹಾರ ಭಕ್ತ ಮಂದಾರ 2 ಧರಣೀಧರಾಸ್ಫಾಲ ಮನಕರ ನಿಜಲೀಲ ನರಪೌತ್ರ ಪರಿಪಾಲ ನವ್ಯವನಮಾಲಾ ವರವ್ಯಾಘ್ರಗಿರಿಲೋಲ ವರದಾರ್ಯವಿಠಲ 3
--------------
ವೆಂಕಟವರದಾರ್ಯರು
ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ಕರುಣಾಕರ ಧರಣೀಧರೇಂದ್ರ ಪ ದಶರಥಸುಪುತ್ರ ಶಶಧರ ಸುವಕ್ತ್ರ ಪಶುಪತಿಮಿತ್ರನೆ ಪೊರೆಯೊ ಎನ್ನನು 1 ವನರುಹದಳಾಕ್ಷ ದನುಭುಜವಿಪಕ್ಷ ಮುನಿಜನ ಸುರಕ್ಷ ರಕ್ಷಿಸೆನ್ನನು ದೇವನೆ 2 ಸುರಜನ ಸುಪೋಷ ಖರಹರ ಸುರೇಶ ನಿರತವು ನಾ ನಿನ್ನ ನಮಿಸುವೆನೈ ಹರೇ 3 ದಾನವಖಂಡನ ಧೇನುಪುರೀಶನೆ ಮಾನವ ಪುಂಗವ ದೇವನೆ ಪೊರೆಯೈ 4
--------------
ಬೇಟೆರಾಯ ದೀಕ್ಷಿತರು
ಖಗವಾಹನಾ ಜಗಮೋಹನಾ ಪ ಕಮಲಾಸನಾ ನುತಪಾವನಾ ಸುರಜೀವನಾ ಸುಮಲೋಚನಾ ಅ.ಪ ಧರಣೀಧರಾ | ಮೃಗಕಂಧರಾ ಬಲಿಗೋಚರಾ | ದ್ವಿಜಮಾವರಾ ಭುವನೇಶ್ವರಾ | ಮುರಳೀಧರಾ 1 ತ್ರಿಪುರಾಂತಕಾ | ಕಲಿನಿವಾರಕಾ ಸುರನಾಯಕಾ | ವರದಾಯಕಾ ಸರಸಿಜಾಂಬಕಾ | ಶುಭಕಾರಕಾ ಕರುಣಾಬ್ಧಿ ಮಾಂಗಿರಿ ನಾಯಕಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾರಾಯಣ ನರಹರಿಯೆ ನರ ಜನ್ಮದಿ ಸಿಲುಕಿದೆನು ಮರಳಿ ಜನಿಸದಂದಲೆನ್ನ ಕರುಣಿಸೋ ಕ್ಷೀರವಾರಿಧಿಶಯನ ಪ ಮುರಹರ ಮಧುಸೂಧನ ಶ್ರೀಹರಿ ಧರಣೀಧರ ವರಾಹ ನಾರಾಯಣ ವಟು ವಾಮನ ಕೇಶವ ವಾರಿಜದಳನಯನ 1 ನಂದನಂದನ ಹರಿಯೆ ನಾರದವಂದಿತ ಸುರ ಸಂಹಾರಿ ಮಂದಜಾಯತನಯನ 2 ಅರಿಗದೆ ಶಂಖಾಬ್ಜ ಕರದೊಳು ಮೆರೆವ ಪೀತಾಂಬರ ಧಾರಿ ಕರಿವದನನೆ ಕಾಳಿಂಗಮರ್ಧನ ಸರಸಿರುಹದಳನಯನ 3 ಮುಳುಗಿದೆನು ಎತ್ತು ಕಮಲನಯನ 4 ಬಲ್ಲುದೇ ಕರು ಎತ್ತಿಕೋ ಹರಿಯೇ 5
--------------
ಕವಿ ಪರಮದೇವದಾಸರು
ನಿತ್ಯ ನಿಜಾನಂದನಿರ್ಲೇಪ ನಿಗಮಾಂತವೇದ್ಯ ನರಸಿಂಹ 1ವಿಶ್ವನಿರ್ಮಾಣಾದಿ ವಿವಿಧ ಶಕ್ತ್ಯಾತ್ಮಕವಿಧಿಹರ ರೂಪ ಶ್ರೀ ವೀರನರಸಿಂಹ 2ಪರಿಭ್ರಾಜಮಾನಾರ್ಕ ಪಾವಕ ಶಶಿಯುಕ್ತಪದ್ಮ ಮಹಾಯೋಗಪೀಠ ನರಸಿಂಹ 3ಸಮ ಕಾಲೋದಿತ ಸೂರ್ಯಶಶಿಕೋಟಿಸಂಕಾಶಸರಸಿಜಜಾತಾಯುತೋತ್ಸಂಗ ಸಿಂಹ 4ಬ್ರಹ್ಮಾಮರೇಂದ್ರಾದಿ ಬೃಂದ ಕಿರೀಟಾಗ್ರಮಣಿ ನೀರಾಜಿತ ಪಾದಪದ್ಮ ನರಸಿಂಹ 5ಧೃತ ಶಂಖ ಚಕ್ರಾಬ್ಜ ದಿವ್ಯ ಚತುರ್ಭುಜಧರಣೀಧರಾಚ್ಯುತ ದೇವ ನರಸಿಂಹ 6ಪ್ರಹ್ಲಾದಖೇದಾಪಹಾರಕ ಪರಿಪೂರ್ಣಆಹ್ಲಾದ ಸುಕೃತಾಟ್ಟಹಾಸ ನರಸಿಂಹ 7ಆಂತ್ರಮಾಲಿಕಾಕಂಠ ಅಮಿತ ನಖಾಯುಧಅಂಕಾರೋಪತ ದೈತ್ಯಕಾಯ ನರಸಿಂಹ 8ಮಕುಟಮಂಡಿತ ಶುಭ ಮಕರಕುಂಡಲ ಧರಪ್ರಕಟಿತಕರುಣಾಕಟಾಕ್ಷ ನರಸಿಂಹ 9ಕೇಯೂರ ಹಾರ ಕೌಸ್ತುಭಮಣಿ ಭೂತಕಾಂಚನಚೇಲ ಕಲುಷಹರ ಸಿಂಹ 10ಸಕಲ ಲೋಕಾಧೀಶ ಸಾಧು ಸಂರಕ್ಷಕಸುರ ಸಿದ್ಧ ಮುನಿ ವಂದ್ಯ ಶ್ರೀ ನರಸಿಂಹ 11ತೂಲನಾಮಕ ಗ್ರಾಮ ನಿಕಟಾದ್ರಿ ಸ್ಥಿರವಾಸಪಾಲಿತಬಹುಭುವನೇಶ ನರಸಿಂಹ 12ದ್ವಿತೀಯ ಶ್ರೀ ತಿರುಪತಿ ಕ್ಷೇತ್ರಸಮಾನಾದ್ರಿ ವೆಂಕಟಪತಿ ಪ್ರತಿವೇಷ ನರಸಿಂಹ 13ಓಂ ಅನಾದಿ ಬ್ರಹ್ಮಚಾರಿಣೇ ನಮಃ
--------------
ತಿಮ್ಮಪ್ಪದಾಸರು
ನ್ಯಹರೆ ನಿಮ್ಮ ಚರಣ ತೋರೋ ವಿಹಗಗಮನ ಕರುಣದಿ ಪ ಘನಸಾರ ಶೋಭಿತ ಮುನಿಮಂದಾರ ಮಾಧವ ಮೇರುಗಂಭೀರ ಭವದುರಿತ ವಿದೂರ 1 ಸಾರಸಾಕ್ಷ ಮಾರಜನಕ ಘೋರದನುಜ ಸಂಹಾರ ವಿನುತ ಶ್ರೀರಮಾರಮಣನುತ ಚರಿತ 2 ಉರಗಶಯನ ಗರುಡಗಮನ ಧರಣೀಧರ ಮುರಾರಿ ಹೆನ್ನೆಪುರ ನಿವಾಸ ನಾರಶಿಂಹ ತರಣಿಕೋಟಿಧಾಮ ರಾಮ 3
--------------
ಹೆನ್ನೆರಂಗದಾಸರು
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ಪ ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಕಾರುಣ್ಯನಿಧಿ ಹರಿ ಒಲಿವಾ ಅ.ಪ. ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದರ್ಭಶಯನ ಮಧ್ಯಾರ್ಜುನ 1 ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ ಒಂದೊಂದು ಕೋಟೀಶ್ವರಾ 2 ಸಿರಿ ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ ವೀರ ನಾರಾಯಣವೋ ಕೇದಾರ ಕುರುಕ್ಷೇತ್ರ ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ 3 ಉದ್ಭವ ಆದಿ ಅನಂತ ಬಲಕ್ಷೇತ್ರ ಪುಂಡರೀಕಾಕ್ಷ ಸುಧಿಯೆಂದು ಕನ್ಯಾಕುಮಾರಿ ಮುದದಿ ಮಹಂಕಾಳಿ ಹಸ್ತಿಪಳಿನಾಥ ಪದ ಮುರಳಿ ತ್ರಿವಿಕ್ರಮ 4 ಕೂರ್ಮ ನೆಲ್ಲನಪ ಧರಣೀಧರ ಚಾಪವಾಣಿ ಕ್ಷೇತ್ರ ಶ್ರೀನಿವಾಸನೆದ ನಿಧಿ ಗೌರೀ ಮನೋಹರ 5 ಶಂಕರನ ಕ್ಷೇತ್ರ ಗೋಗರ್ಭ ಶೇತುವನ ಗಜಾರಣ್ಯ ಓಂಕಾರನಾಥ ದೇವಾ ವೇದಿ ಗೋಪಾಲನಿಧಿ ಅಲಂಕಾರ ಮುಕ್ತಿ ಕ್ಷೇತ್ರ 6 ಮಳೂರಪ್ರಮೇಯ ಶಿವಾ ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ ನೀಲಾರಣ್ಯ ರಾಜವನ ನೈಮಿಷ ಭೋಕ್ತ 7 ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ ಮಹಾಲಕುಮಿ ರಘುನಾಥ ಶಿವಗಂಗೆ ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ 8 ಪೇಳಿದುದಕ್ಕೆ ಆರಿಗೆ ಅಳವಲ್ಲ ನೆನಸೋದು ಮಾನವರು ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ- ಪಾಲಿಸುವ ಕುಲಕೋಟಿಗಳ9
--------------
ವಿಜಯದಾಸ
ಬಾರೋ ನಿತ್ಯಾನಂದಲೀಲಾ | ಗೋಪಾಲ ಬಾಲ ಪ ಬಾರೋ ವನಜಮಾಲಾ ಬಾರೋ | ಗಾನಲೋಲಾ ಅ.ಪ ನಿನ್ನ ಕರುಣೆ ಎನ್ನೊಳಿರಲಿ ನಿನ್ನ ಚರಣ ಎನಗೆ ಸಿಗಲಿ ನಿನ್ನ ಧ್ಯಾನ ಮನದೊಳಿರಲಿ ನಿನ್ನ ನಾಮ ರಸನೆಯೊಳಿರಲಿ 1 ಮುರಳೀಧರ ಲೋಕೇಶ ಧರಣೀಧರ ವೆಂಕಟೇಶ ಶರಣಾಗತ ಕ್ಲೇಶನಾಶ ವರದಾಯಕ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗ ಬಾರೈಯ್ಯ ದೇವೋತ್ತುಂಗ ದಯಾಂತರಂಗ | ಅಂಗಜನಯ್ಯ ನರಶಿಂಗಾ ಸಾರಸಾಪಾಂಗ || ಮಂಗಳ ಮಹಿಮಾ ವಿಹಂಗ ಘೋರ ಭವಭಂಗರಹಿತ ರಣರಂಗ ವಿಜಯ || ಸನ್ನುತ ಶೃಂಗಾರಾಂಗ ರಮಾಂಗನಾಸಂಗ ಪ ಶತಕೋಟಿ ಭಾಸ್ಕರ ಯುತತೇಜ ಮರುತಾಂತರ್ಗತ | ಹರಿಮೃದು ಭಾಷಣ | ಕೌಸ್ತು ಭಾಭರಣ | ಜಿತದಿತಿಸುತಬಾಲ | ಶ್ರಿತಭಕ್ತ ಮಂದಾರ | ಪತಿತ ಪಾವನ ಶ್ರೀರಾಮ ಪಟ್ಟಾಭಿರಾಮ | ಅತುಲಿತ ಚರಿತ ಕಾಮಿತ ಫಲದಾಯಕ | ಶತ ಧೃತಿ ಜನಕಾಚ್ಯುತ ಸರ್ವೋತ್ತಮ | ಸತತವು ನೀನೇ ಗತಿಯೆಂದೆನುತಲಿ | ಹಿತದಿ ನಾನು ನಿಮ್ಮ ಸ್ತುತಿಸುತಲಿರುವೆನು 1 ನಂದನಂದನ ವೇಣುನಾದ ವಿನೋದ ಜಗದ್ವಂದ್ಯ ಶ್ರೀವತ್ಸಲಾಂಛನ ವಾಸುಕಿಶಯನ | ಮಂದಹಾಸ ಮುಚುಕುಂದವರದ ರಾಕೇಂದುವದನ | ಗೋವಿಂದ ಇಂದಿರಾನಂದ ಸಿಂಧು ಗಂಭೀರಾ | ಮುಕುಂದ ಧರಣೀಧರ ಕುಂದರದನ ಕಾಳಿಂದಿರಮಣ ಗಜೇಂದ್ರನ ಸಲಹಿದ ಛೆಂದದೆನ್ನ ಮೊರೆಯಿಂದಿಗೆ ಲಾಲಿಸೊ ಪರಮಾತ್ಮ ಸರಸಿಚೋದರ ಸಕಲಾಣುರೇಣು ಪರಿಪೂರ್ಣ 2 ನಿರುಪಮಧೀರ ಶರಣಾಗತ ರಕ್ಷಣ ಮಧುಸೂದನ ಸುರವರ ಪೂಜಿತ ಚರಣಾಂಭೋರುಹ ಕೃಪಾಕಾರ ಹರುಷದಲಿ 3
--------------
ಹೆನ್ನೆರಂಗದಾಸರು
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಪ ವರೇಣ್ಯ | ಭಂಗ | ಹರಿಸಿದ ಶಿರಿ ರಂಗ | ವಿಹಂಗ | ತುರಗ ತುರಗ ವದನ | ಸದನ ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1 ಪಾದದಲಿ ಪೆಣ್ಣಾ | ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ | ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ | ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು | ಯಾದುದೆ ಇತ್ತ ನೋಡು 2 ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ | ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ | ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ | ಜಾರ ಚೋರ | ಅಳಿದೆ ಮುಪ್ಪುರು ಶೂರಾ | ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
--------------
ವಿಜಯದಾಸ
ಶ್ರೀ ಕೃಷ್ಣದೇವ ಸದಾನಂದ ಶ್ರೀ ಕೃಷ್ಣದೇವ ಪ ಶ್ರೀ ಕೃಷ್ಣ ಕರುಣಾನಿಧೇ ಭಕ್ತವತ್ಸಲ ಶ್ರೀ ಕೃಷ್ಣ ಪರಮ ಪುರುಷ ಸಚ್ಚಿದಾನಂದ ಅ.ಪ ವಸುದೇವ ನಂದನ ಕಂಸನಿಷೂದನ ಕುಸುಮೇಷು ಕೋಟಿ ಸಮಾನ ಪದಾಂಭೋಜ 1 ಲೀಲಾಮಾನುಷ ಮೂರ್ತೇ ಶ್ರೀವತ್ಸ ವಕ್ಷಸ್ಕ ನಿರಂಜನ 2 ಪೂತನಾ ಶಕಟ ತೃಣಾವರ್ತ ಭಂಜನ ಪಾತಕಹರ ಪುಣ್ಯಕೀರ್ತೇ ಜನಾರ್ದನ 3 ದರ ಪದ್ಮ ಚಕ್ರ ಗದಾಧರ ರವಿಕೋಟಿ ಸಂಕಾಶ 4 ಮಣಿ ರಂಜಿತ ಪದಯುಗ್ಮ ನೀಲಮೇಘಶ್ಯಾಮ ನೀರಜಲೋಚನ 5 ಕೌಸ್ತುಭಮಣಿ ಭೂಷ ಕನಕಕುಂಡಲ ಕರ್ಣ ಸಂಸ್ತುತ ಮಹಿಮ ಶ್ರೀ ಧರಣೀ ಸೇವಿತ ಪಾಶ್ರ್ವ 6 ನಂದ ಕಿಶೋರ ಯಶೋದಾ ಮನೋಹರಸುಂದರ ತಿರುಪತಿ ಧರಣೀಧರಾವಾಸ 7
--------------
ತಿಮ್ಮಪ್ಪದಾಸರು
ಶ್ರೀ ವೆಂಕಟೇಶ ಷಡ್ಗುಣಧಾಮ ಶ್ರೀ ವೆಂಕಟೇಶಶ್ರೀ ವೆಂಕಟೇಶ ಸದಾನಂದ ವಿಗ್ರಹ ಪಾವನಕೀರ್ತೇ ಪರಮೇಶ ಪಕೇಶವ ಬ್ರಹ್ಮಾದಿಕಾಯ ನಾರಾಯಣಶ್ರೀಶ ಗೋವಿಂದ ಗೋವರ್ಧನೋದ್ಧರ ವಿಷ್ಣೋ 1ಮಧುಸೂದನಾಮಿತಮಹಿಮ ತ್ರಿವಿಕ್ರಮಬುಧವಂದ್ಯ ವಾಮನ ಭಯಹರ ಶ್ರೀಧರ 2ಹೃೀಕೇಶ ನಿಜ ಜನಹೃತ್ಕಂಜಸ್ಥಿರ ಭಾನೋವಿಷಮರಹಿತ ಪದ್ಮನಾಭ ದಾಮೋದರ 3ಸಂಕರ್ಷಣ ವಾಸುದೇವ ಸನಾತನಪಂಕಜನೇತ್ರ ಪಾವಕಮುಖ್ಯ ಪ್ರದ್ಯುಮ್ನ 4ಅನಿರುದ್ದ ಪುರುಷೋತ್ತಮಾದಿಕಾರಣ ಲೋಕಜನಕಾಧೋಕ್ಷಜ ಜೀವಸುಖ ಶುದ್ಧ ನರಸಿಂಹ 5ಅಚ್ಯುತಾನಂತ ಜನಾರ್ದನಾಮಿತ ರೂಪಸಚ್ಚಿದ್ರೂಪೋಪೇಂದ್ರ ಸರ್ವೇಶ ಶ್ರೀಹರೆ 6ಶ್ರೀ ಕೃಷ್ಣ ರುಕ್ಮಿಣೀ ಸತ್ಯಭಾಮಾ ಧವಏಕರೂಪಾವ್ಯಯಾನೇಕ ಶಕ್ತ್ಯಾತ್ಮಕ 7ಕ್ಲೇಶತಿಮಿರ ಹರ ಕೋಟನಾಮಾತ್ಮಕಕೋಶಪಂಚಕ ದೂರ ಕೋಶ ಪ್ರವರ್ತಕ 8ತಿರುಪತೀತಿಖ್ಯಾತ ದಿವ್ಯಕ್ಷೇತ್ರೋದ್ಭವಸುರತರು ವೆಂಕಟಧರಣೀಧರಾಧೀಶ 9ಓಂ ನರಕಾಂತಕಾಯ ನಮಃ
--------------
ತಿಮ್ಮಪ್ಪದಾಸರು
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು