ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ ಶರಣ ಜನಕನು ಪೊರೆವ ಕಾರುಣ್ಯಧಾಮ ಪ. ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ ಕುಶಲದಿಂದಲಿ ಬಂದು ನಗರದಲ್ಲಿರಲೂ ಸತಿ ಅನುಜಸಹ ವನದಿ ನಸುನಗುತ ಚರಿಸಿ ರಕ್ಕಸರ ಸದೆಬಡಿದೆ 1 ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ ಹತಗೈದು ರಾವಣಾದಿಗಳನೆಲ್ಲ ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ 2 ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ ಇಷ್ಟಾರ್ಥವೀಯೊ ಸನ್ಮಂಗಳವನೂ ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ 3
--------------
ಅಂಬಾಬಾಯಿ
ಭಕುತಿಯಲಿ ಭಜಿಸಿ ಹರಿಯ ಸುಖಿಸಬಾರದೇ ಪ ಪ್ರಕಟದಿ ಸಜ್ಜನ ನಿಕಟದಿ ತಾಮಸ| ಶಕಟ ಮುರಿದ ಸುರ ಮುಕುಟ ಮಣಿಯಾ ಅ.ಪ ತರಣೀಯಾ ಕೋಟಿ ಪ್ರಕಾಶದಿ ಧರಣಿಯಾ ರಮಣನ ನಾಮ| ಕರಿ ಕಿರಿಯನೆ ಶಿರಿ| ಗರುಡಗರಿಯದೇ ಭರದಿ ತಾ ಬರುತದೆ ಶರಣರಾ ಹೊರೆದ 1 ಮರುವಿನ ಕತ್ತಲೆ ನೂಕುವ ಚರಣವ ಅರವಿನ ದೀಪವ ಹಚ್ಚಿ| ಕುರುವಿನಾ ಚಿನ್ಮಯ ನೊಡಲು ಗುರುವಿನಾ| ಚರಣವ ಪೂಜಿಸಿ ಕರುಣವ ಸಾಧಿಸಿ ತರುಣೋಪಾಯದ ಚರಣವ ಬಲಿಯೋ 2 ಮನವಧಾನದಿ ನಿಲಿಸಿ ತನುವನಾ ಸೇವೆಗರ್ಪಿಸಿ| ಘನವನು ಮಾಡುತಾ ಸುಜನರಾ ಅನುವನು ಕನಸಿಲೇ| ಘನ ಗುರು ಮಹಿಪತಿ-ಜನ ಪ್ರಭುವಿನ ಅನುದಿನದಲಿ ಪಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ ಕುಜನರೊಳಾಡದಲೆ ನಿಜ ಭಕುತಿಯಿಂದ ಭುಜಬಲವುಳ್ಳ ಪರಜರಟ್ಟುವ ದಿ ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ ಕರಯುಗಳ ಮುಗಿದು ಶಿರವಾನಿಲ್ಲದೆ ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ ಪರಿಹರವೊ ಬಂದರಘಳಿಗೆಯಲಿ ದುರುಳರಿಗಾಯ್ತು ಮರಿಯದೆ ಚೆನ್ನಾಗಿ1 ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ಜ್ಞಾನಾಂ ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು ಸುರರು ಮೆಚ್ಚುತಲಿರೆ ಮುರರಿಪು ಚತುರ್ದಶ ಧರಣಿಗೆ ಪರನೆಂದು ಬಿರಿದನು ಎತ್ತಿ ಡಂಗುರವ ಹೊಯಿಸಿ ಡಿಂಗರರಿಗೆ ಸಚ್ಛಾಸ್ತ್ರ ಕೊಡುವ ಯತಿಶಿರೋಮಣಿ ಕರ್ನಾ 2 ಪಾದಾಂಬುಜಾತ ಕೃಷ್ಣಾ ತನು ಭವಸರಿತ ನಿವಾಸಾ ದಿವಿಜೇಶನಾಯುಧ ಕವಚದಿಂದಲಿ ತನ್ನವರನ ಪೊರೆದೆತ್ತಿ ನವವಿಧ ಬಗೆ ತೋರಿ ತವಕದಿ ಕೋಲುಪುರ ಪವಿತುರ ಸ್ಥಳದಲ್ಲಿ ರವಿಯಂತೆ ಪೊಳವರು ಭವದೋಷ ಕಳೆವುತಾ ಕವಿಗಳ ಮನೋಹರ ವಿಜಯವಿಠ್ಠಲನ ಶ್ರವಣ ಮನನ ಧ್ಯಾನವನು ಬಲ್ಲವರಾ3
--------------
ವಿಜಯದಾಸ
ಯಾಕೆ ಕಷ್ಟ ಪಡುವೆ ಲೋಕನಾಯಕ ಮಾಯಾ ಜೋಕೆಯಿಂದ ಸಲಹು ನಮ್ಮ ಪ ಸಿರಿಯೆ ಪಟ್ಟದರಸಿ ನಿನಗೆ ಕಿರಿಯ ಮಡದಿ ಧರಣಿಯಾಗೆ ಹಿರಿಯ ಮಗನು ಸರ್ವಜನರೊಳಿರುತ ಕಾಮಿಸುವನು ಜಗವ 1 ಮಗನು ಜಗವ ನಿರ್ಮಿಸುವನು ಮಗುಳೆಲಯವಗೈವ ಮೊ- ಮ್ಮಗನು ನಿನ್ನ ದಾಸಿ ಈ ಜಗವ ಮೋಹಿಸುತ್ತಲಿರವಳು 2 ನೀರೊಳಿರುತ ಮೋರೆ ಮುಚ್ಚಿ ಕೋರೆ ಮಸೆದು ಕಂಬದಿಂದ ಹಾರಿಯೆಳೆದು ಧಾರಿಣಿಯ ಧೀರ ನೃಪರನ್ನೆಲ್ಲ ಕೊಂದು 3 ಊರುಬಿಟ್ಟು ಹಾರಿ ವನವ ಜಾರನಾಗಿ ಭಂಗಪಡಿಸಿ ನಾರಿಯರನು ದಾರ ತೇಜಿಯೇರಿ ಮೆರೆದು ಬಾರಿ ಬಾರಿ4 ಪರಮಪದವನಗಲಿ ಚಂಡ ಕರಣರಥವ ನುಳಿದು ಕ್ಷೀರ ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದವಿಠಲ5
--------------
ವೆಂಕಟವರದಾರ್ಯರು
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1 ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2 ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು