ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗಕ್ಕಿಂತ ಭಾರವೇನೊ ನಮ್ಮ ರಂಗ ನಗಕ್ಕಿಂತ ಗಾತ್ರನೇನೋ ಪ ಜಗಕ್ಕಿಂತ ಭಾರವೇನೋ | ಖಗಪೊತ್ತು ತಿರುಗಲೆ[ೀಕೆ] ನಗದ ಮೇಲೇ ಕುಳಿತಿಹ ಭಾರ ಜಗಂಗಳ ಹೊರುತಲಿ ನಲಿವವನಿವನೇ ನಗಗಳ ಬೆರಳಲಿ ಎತ್ತಿದನಿವನೇ ಖಗಮೃಗಗಳಿಗೆ ಒಲಿದವನಿವನೇ1 ತೃಣಕ್ಕಿಂತ ಹಗುರನೇನೋ ರಣದೆ ರಾವಣನ ಕೊಂದೆ ಮಣಿಗಿಂತ ಸಣ್ಣನೇನೋ ಧರಣಿಯನಳೆದೈತಂದೆ ತೃಣಕ್ಕೆಲ್ಲಾ ತೃಣರೂಪಾಗಿಹನು ಮಣಿಗೆಲ್ಲಾ ಶ್ರೀಮಣಿಯಾಗಿರುವ ಸ ದ್ಗುಣಿಗಳಿಗೆ ಕರುಣಿಯು ಇವನು 2 ಎಲ್ಲೆಲ್ಲು ಇರುವನೇನೋ ನಮ್ಮ ರಂಗ ಎಲ್ಲಿಯೂ ಇರುವನೇನೇ ಅಲ್ಲಲ್ಲಿ ಇರುವ ರಂಗ ಎಲ್ಲೆಲ್ಲು ಇಲ್ಲವೇನೇ ಅಲ್ಲಲ್ಲಿ ಅಂತರಂಗ 7 ಬಲ್ಲಿದರೆಲ್ಲ ಬಲ್ಲರು ಇವನ ಕಲ್ಲೆಂಬುವರಿಗೆ ಇವನು ಇಲ್ಲದ ತಾಣವೊಂದಿಲ್ಲವು ಭಕ್ತಿಯ ಸೊಲ್ಲಿಗೆ ಸೋಲುವ ಮಾಂಗಿರಿರಂಗ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದ ವೆಚ್ಚರಿಕೇ ಚೆನ್ನಕೇಶವಮೂರುತೀ ಪ ಸರಸಿಜಭವಾಂಡವನೊಡೆದಚರಣ ಯೆಚ್ಚರಿಕೇ ಸುರನದಿಯ ಪಡೆದ ಪದ ಯೆಚ್ಚರಿಕೇ ಧರಣಿಯನಳೆದ ಪದಾಂಭೋಜಾತ ಯೆಚ್ಚರಿಕೇ ಪರಮ ಮಂಗಳ ಪಾದಪದ್ಮ ಯೆಚ್ಚರಿಕೇ 1 ಕುಸುಮಕೋಮಲಚರಣ ಯೆಚ್ಚರಿಕೇ ಋಷಿವಧೂಶಾಪಹರಣ ಯೆಚ್ಚರಿಕೇ ಶಶಿಸೂರ್ಯತೇಜದಮಲಾಂಘ್ರಿ ಯೆಚ್ಚರಿಕೇ 2 ಶಕಟಪ್ರಕಟನೋದ್ಧøತ ಚರಣ ಯೆಚ್ಚರಿಕೇ ಶುಕವಂದ್ಯ ಶ್ರೀಚರಣ ಯೆಚ್ಚರಿಕೇ ನಿಖಿಳ ಪ್ರಮೋದಕಾರಣ ಚರಣ ಯೆಚ್ಚರಿಕೇ ಅಕಳಂಕ ವೈಕುಂಠನಾಥಪದ ಯೆಚ್ಚರಿಕೇ 3
--------------
ಬೇಲೂರು ವೈಕುಂಠದಾಸರು
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ ನೀರಮುಳುಗಿ ಬಂದು ಘೋರಪರ್ವತ ತಂದು ಧಾರುಣಿಯನು ಕದ್ದ ದನುಜನ ಕೊಂದು ನರಹರಿ ರೂಪದಿ ತರಳಗೊಲಿದುಪುಟ್ಟ ಚರಣದಿಂ ಧರಣಿಯನಳೆದ ಮಹಾತ್ಮನೋ 1 ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು ಮಡುಹಿ ಬಂದವನಿವನೇನೋ ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2 ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ ಚಿತ್ತಬಂದಂತೆ ತಾ ತಿರುಗುವನೋ ಉತ್ತಮನಾದ ಶ್ರೀ ಪ್ರಾಣನಾಥವಿಠಲನು ಎತ್ತನೋಡಿದರು ಸುತ್ತುತ್ತಲಿರುವನು 3
--------------
ಬಾಗೇಪಲ್ಲಿ ಶೇಷದಾಸರು
ಸುರಸತಿಯರ ಆರತಿ-ಶೋಭನೆಕಂ|| ಹರೆದುದು ಜನತತಿ ಶ್ರೀಹರಿವರಶಯ್ಯಾಸನದಲಿಪ್ಪ ಸಮಯದಲೆನ್ನಾಪರಿಯನು ಬಿನ್ನವಿಸುವೆ ನಾಂಸಿರಿಚರಣವನೊತ್ತುತೊತ್ತುತೆಮ್ಮರಸನಿಗೇಆದಿತ್ಯವಾರದರ್ಚನೆಯಾದುದು ನಿನ್ನೊಲವಿನಿಂದ ಬಿನ್ನಹವಿದ ನೀನಾದರಿಸಿ ಸಲಹು ತಿರುಪತಿಭೂಧರ ಶುಭದಿವ್ಯಸದನ ವೆಂಕಟರಮಣಾಸಿರಿಧರಣಿಯರೊಡೆವೆರಸಿ ಹರುಷದಿ ವೆಂಕಟಪತಿಯುಇರೆ ಹಂಸತಲ್ಪದೆಡೆಯಲ್ಲಿ ಸುರಸತಿಯರುಕುರುಜಿನಾರತಿಯಾ ಬೆಳಗಿದರು ಶೋಭನವೆ 1ವೇದವನುದ್ಧರಿಸಿದಗೆ ಭೂಧರವನು ತಾಳ್ದವಗೆಮೇದಿನಿಯನೆತ್ತಿ ನಿಲಿಸಿದಗೆ ನಿಲಿಸಿದ ವೆಂಕಟಪತಿಗೆಮೋದದಲಾರತಿಯಾ ಬೆಳಗಿದರು ಶೋಭನವೆ 2ನರಹರಿ ರೂಪಾದವಗೆ ಧರಣಿಯನಳೆದಾ ಹರಿಗೆದುರುಳ ಕ್ಷತ್ರಿಯರಾ ತರಿದವಗೆ ತರಿದಾ ವೆಂಕಟಪತಿಗೆತರುಣಿಯರಾರತಿಯಾ ಬೆಳಗಿದರು ಶೋಭನವೆ 3ಜಾನಕಿಯನು ವರಿಸಿದವಗೆ ಧೇನುಕನನು ಬಡಿದವಗೆಮಾನಿನಿಯರ ವ್ರತವನಳಿದವಗೆ ಅಳಿದಾ ವೆಂಕಟಪತಿಗೆಜಾಣೆಯರಾರತಿಯಾ ಬೆಳಗಿದರು ಶೋಭನವೆ 4ತುರುಗವನೇರಿದ ಹರಿಗೆ ಶರಣಾಗತವತ್ಸಲಗೆತಿರುಪತಿಯ ಕ್ಷೇತ್ರದರಸಗೆ ಅರಸ ವೆಂಕಟಪತಿಗೆಪರಿಪರಿಯಾರತಿಯಾ ಬೆಳಗಿದರು ಶೋಭನವೆ 5ಓಂ ಬರ್ಹಿಬರ್ಹಾವತಂಸಕಾಯ ನಮಃ
--------------
ತಿಮ್ಮಪ್ಪದಾಸರು