ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆಲೊ ಮುಕುಂದ ಮಾಧವ ಶ್ರೀರಾಮ ಧರಣಿಧರನೆನಿಸಿ ನಿಮ್ಮ ದಾಸ್ಯವ ಪ ಅಂಬುಜಾಕ್ಷ ಕಂಬುಕಂದರ ವಿನುತ ಮುರಹರ ಶಂಬರಾರಿ ಜನಕ ಗಿರಿಧರ ಶೌರಿ ಶುಭಕರ 1 ಚಾರು ಸುಚರಿತ ಶ್ರೀರಾಮ ವನಜನಾಭ ಮುನಿ ವಂದಿತ ದನುಜ ಗರ್ವ ಸಂಹಾರಾಚ್ಯುತ ಶ್ರೀರಾಮ ಅನಘ ಕನಕವಸನ ಭೂಷಿತ 2 ಪನ್ನಗೇಂದ್ರಶಯನ ವಾಮನ ಉದಧಿ ಬಂಧನ ಹೆನ್ನೆಪುರನಿಲಯ ಜನಾರ್ದನ ಶ್ರೀರಾಮಯನ್ನ ಮೊರೆಯ ಕೇಳಿ ಬೇಗನೆ 3
--------------
ಹೆನ್ನೆರಂಗದಾಸರು
ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ 1 ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ 2 ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಸಿರಿ ವಿಜಯವಿಠ್ಠಲ ತಿರುಮಲೇಶಾ 3
--------------
ವಿಜಯದಾಸ