ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀರಾಮಸ್ತುತಿಗಳು ರಾಮನ ನೆನೆ ಮನವೆ ಹೃದಯಾರಾಮನ ನೆನೆ ಮನವೆ ಪ ಸದ್ಗುಣಧಾಮನ ಸೀತಾ ಅ.ಪ ದಶರಥ ನಂದನನಾ ಧರಣಿಯೊಳಸುರರÀ ಕೊಂದವನ ವಸುಮತೀಸುತೆಯಂ ಒಲಿದೊಡಗೂಡಿ 1 ತಂದೆಯಮಾತಲಿವನಕೈತಂದುಸರಾಗದಲಿಬಂದವಿರಾಧನ ಕೊಂದು ನಿಶಾಚರಿಯಂದವಳಿದು ಖಳವೃಂದವ ಸವರಿದ 2 ಸೀತೆಯನರಸುತಲಿ ಕಬಂಧನ ಮಾತನನುಸರಿಸುತ ಸುತನ ಘಾತಿಸಿ ದಾತನ 3 ವಿಲಾಸದಿಂದ ತರುಣಿಯನರಸಲು ಮರುತನ ಮಗನಿಗೆ ಬೆರಳುಂಗುರವನು ಗುರುತಾಗಿತ್ತನ 4 ಧರಣಿಜೆಯನುಕಂಡುವನವನುಮುರಿದುಗುರುತುಗೊಂಡು ಅರಿಪುರವನು ಸುಟ್ಟುರುಹಿದ ವಾನರವರನಿಗೆ ಸೃಷ್ಟಿಪ ಪದವಿತ್ತಾತನ 5 ಶರಣನ ಲಂಕೆಗೆ ದೊರೆಯನು ಮಾಡಿ ಸಿರಿಯನಯೋಧ್ಯೆಗೆ ಕರೆತಂದಾತನ6 ಧರಣಿಯ ಪಾಲಿಸುತ ಧರ್ಮದ ಸರಣಿಯ ಲಾಲಿಸುತ ವರದವಿಠಲದೊರೆ ಪರಮೋದಾರನ 7
--------------
ವೆಂಕಟವರದಾರ್ಯರು
ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ಪ. ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1 ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2 ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
--------------
ವಾದಿರಾಜ
ರಾಮನ ನೋಡಿದೆ ರಘುಕುಲ ತಿಲಕನ ಕಾಯ ಕೌಸಲ್ಯ ತನಯನ ಪ ತಾಮಸ ದೈತ್ಯರ ಲೀಲೆಯಲಿ ಕೊಂದು ಭೂಮಿ ಭಾರವನಿಳುಹಿದ ನಿಸ್ಸೀಮನಅ.ಪ. ತಾಟಕಾದಿಗಳ ಘೋರಾಟವಿಯಲಿ ಪಾಟುಪಡಿಸಿದ ಹಾಟಕಾಂಬರನ ತೋಟಿಗೊದಗಿದ ಮಾರೀಚಾದಿಗಳ ಆಟನಾಡಿಸಿದ ನೀಟುಗಾರ 1 ಹಲವು ಕಾಲದಿ ಶಿಲೆಯಾಗಿರ್ದ ಲಲನೆ ಅಹಲ್ಯೆಯ ಶಾಪವ ಹರಿಸಿ ಕಲುಷವ ಕಳೆಯುತ ಕುಲಸತಿ ಮಾಡಿದ ನಳಿನ ನಯನನ 2 ಹರನ ಧನುವನು ಸ್ಮರನ ಧನುವಿನಂತೆ ತ್ವರದಿ ಮುರಿದು ನಿಂದ ಸುಕುಮಾರನ ಧರಣಿಪ ಜನಕನ ಭಕ್ತಿಗೆ ಒಲಿದು ಧರಣಿಜೆಯ ವರಿಸಿ ಹರುಷವಿತ್ತನ 3 ತಾತನ ಭಾಷೆಯ ಪ್ರೀತಿಯಿಂ ಸಲಿಸೆ ಸೀತೆ ಸಹಿತ ಭ್ರಾತ ಲಕ್ಷ್ಮಣವೆರಸಿ ಆತುರದಿಂದಲಿ ಅರಣ್ಯವನೈದಿ ಕೌತುಕ ತೋರುತ ಚರಿಸಿದವನ4 ಖರದೂಷಣ ತ್ರಿಶಿರಾದಿ ರಕ್ಕಸರ ಅರೆಕ್ಷಣದಲಿ ತರಿದು ಬಿಸುಟವನ ಹಿರಣ್ಯಮೃಗವ ಬೆನ್ನಟ್ಟಿ ಕೆಡಹುತ ವರ ಜಟಾಯು ಶಬರಿಗೆ ಒಲಿದವನ 5 ವಾತಸುತನ ಕಂಡಾತನ ಪದುಳಿಸಿ ತರಣಿ ಸುತಗೆ ಅಭಯವನಿತ್ತ ಜಾತವೇದನೆದುರಲಿ ಸಖ್ಯವ ಮಾಡಿ ಘಾತಕ ವಾಲಿಯ ನಿಗ್ರಹಿಸಿದನ 6 ಕೋತಿ ಕರಡಿಗಳ ಹಿಂಡನು ಕೂಡಿಸಿ ಸೇತುವೆಗಟ್ಟಿಸಿ ಜಲಧಿಯ ದಾಟಿ ಪಾತಕಿ ರಾವಣನÀ ಶಿರಗಳ ಕಡಿದು ಸೀತೆಯ ಸೆರೆಯನು ಬಿಡಿಸಿದಾತನ 7 ಮೊರೆಯನು ಪೊಕ್ಕಾ ವರ ಭೀಷಣನ ಕರುಣದಿ ಕರೆದು ಕರವನು ಪಿಡಿದು ಧರೆಯಿದು ಸ್ಥಿರವಾಗಿರುವ ಪರಿಯಂತ ದೊರೆತನ ಮಾಡೆಂದ್ಹರಸಿದಾತನ 8 ಅಕ್ಕರೆಯಿಂದಲಿ ಅರ್ಚಿಸುವರಿಗೆ ತಕ್ಕಂತೆ ವರಂಗಳ ನೀಡುತಲಿ ಮಿಕ್ಕು ರಾಜಿಸುತಿಹ ಪಂಪಾಪುರದ ಚಕ್ರತೀರ್ಥದಿ ನೆಲೆಸಿಹನ 9 ಕಂತುವೈರಿ ವಿರುಪಾಕ್ಷಗೆ ತಾರಕ ಮಂತ್ರ ನಾಮಕನಾಗಿರುತಿರ್ಪನ ಯಂತ್ರೋದ್ಧಾರನಾಗಿರುವ ಹನುಮನ ಮಂತ್ರಿಯ ಮಾಡಿಕೊಂಡು ರಾಜಿಪನ 10 ದುಷ್ಟ ರಕ್ಕಸ ದಮನವ ಮಾಡಿ ಶಿಷ್ಟ ಜನರುಗಳಿಷ್ಟವ ಸಲಿಸುತ ಶ್ರಿಷ್ಟಿಗೊಡೆಯನೆನಿಸಿ ಮೆರೆಯುತಲಿರುವ ದಿಟ್ಟ ಶ್ರೀ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ಸುರಪಕುಮಾರ ನಾರಣ ಗೀತಾರ್ಥ ಪ ಧರಣಿಯ ಸೌಖ್ಯದ ಬಯಕೆಯು ವ್ಯರ್ಥ ಅ.ಪ ಮರಣಕಾಲದಿ ತನ್ನ ಬಳಿಗೆ ಬಂದಾತನ ಚರಣವೆ ಶರಣೆಂದ ಖಗನು ಸಮರ್ಥ ಶರಣೆಂದೆನ್ನುತ ಧರಣಿಜೆಯರಸನ ಚರಣವ ನುತಿಸಿದ ದನುಜ ಸಮರ್ಥ1 ಸರಳ ಪಂಜರದಲಿ ಶಯನಿಸಿದಾಗ ತನು ಹರಿ ಶರಣೆಂದುದು ಪರಮ ಪದಾರ್ಥ ಗುರು ಉಪದೇಶದಿ ಶರಣಾಗತಿಯ ಮಾಂ ಗಿರಿಯರಸಗೊರೆವುದೆ ಚಿರ ಚರಿತಾರ್ಥ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್