ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗಿರೆ ಲಲನಾಮಣಿಯ ಸಾರಿ ನುತಿಸಿ ನಲಿದು ಪಾಡಿರೆ ಪ. ಸರಸಿಜಾಸನಾದಿ ವಿನುತೆ ಸುರವರಾರ್ಚಿತೆ ಶರದಿಂದುಹಾಸೆ ಧರಣಿಜಾತೆ ಕರುಣಿಸೆನ್ನುತೆ 1 ಕಮಲನಯನೆ ಕಮಲವದನೆ ಕಮಲವಾಸಿನಿ ವಿಮಲಚರಣೆ ರಮಾರಮಣಿ ಮಧುರಭಾಷಿಣಿ 2 ಶೇಷಶೈಲವಾಸದಯಿತೆ ವಿಶ್ವಸನ್ನುತೆ ಪೋಷಿಸೆಮ್ಮ ಪ್ರಾಣದಾತೆ ಸೀತೆಯೆನ್ನುತ 3
--------------
ನಂಜನಗೂಡು ತಿರುಮಲಾಂಬಾ
ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗುವೆ ಲಲನಾಮಣಿಯ ಸೇರಿ ಸುಖಿಸಿ ನಲಿದು ಪಾಡುವೆ ಪ ಸರಸಿಜಾಸನಾದಿವಿನುತೆ, ಸುರವರಾರ್ಚಿತೆ ಶರದಿಂದುಹಾಸೆÉ ಧರಣಿಜಾತೆ ಕರುಣಿಸೆನ್ನುತೆ 1 ಕಮಲವದನೆ ಕಮಲನಯನೆ ಕಮಲವಾಸಿನೀ ವಿಮಲಚರಣೆ ರಾಮರಮಣಿ ಮಧುರಭಾಷಿಣಿ 2 ಶೇಷಶೈಲಾವಾಸದಯಿತೆ ವಿಶ್ವಸನ್ನುತೆ ಪೋಷಿಸೆನ್ನ ಜನಕಜಾತೆ ಸೀತೆಯೆನ್ನುತೆ 3
--------------
ನಂಜನಗೂಡು ತಿರುಮಲಾಂಬಾ
ವಾರಿಧಿ ಈರೇಳು ಲೋಕನಾಯಿಕೆ ಪ ದೂರ ನೋಡದಲೆ ಅಪ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಮಾಧವ ಪ್ರಿಯಳೆ 1 ಮಾಯಾ ಕೃತಿ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ ಸೋಮಾರ್ಕ ಕೋಟಿ ಮಿಗೆ ಕಾಂತೆ ತಾಮರಸಾಂಬಕೆ ರಮೆ ಲಕುಮಿ ಸತ್ಯ ಭಾಮೆ ಭವಾರಣ್ಯ ಧೂಮಕೇತಳೆ ಯಾಮ ಯಾಮಕೆ ಹರಿ ನಾಮವ ನುಡಿಸಿ ಉತ್ತಮರೊಡನೆ ಪರಿ ಣಾಮವನೀಯುತ 2 ಅನೇಕಾಭರಣ ಭೂಷಿತೆ ಧರಣಿಜಾತೆ ಜ್ಞಾನಿಗಳ ಮನೋಪ್ರೀತೆ ಆನಂದಲೀಲೆ ವಿಖ್ಯಾತೆ ಆದಿದೇವತೆ ಕಾಣೆನೆ ದಾನಿ ಇಂದಿರಾದೇವಿ ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು3
--------------
ವಿಜಯದಾಸ