ಜೋ ಜೋ ಸುಚರಿತ್ರ ಪರಮ ಪವಿತ್ರಾ
ಜೋ ಜೋ ಶತಪತ್ರನೇತ್ರ ಸುಗಾತ್ರಾ ಪ
ಜೋ ಜೋ ವಟಪತ್ರಶಯನ ವಿಚಿತ್ರ
ಜೋ ಜೋ ಸುಂದರಚಿತ್ರ ಸೀತಾಕಳತ್ರ ಅ.ಪ
ಕುಶಿಕಾಧ್ವರಪಾಲಬಾಲ ಸುರನುತಿಪಾತ್ರಾ
ಸನ್ನುತ ಸ್ವರರೂಪ ಚಿತ್ರ
ನಿಶಿಚರಹರ ನಿತ್ಯಸುಖದಾತ ಮಿತ್ರಾ
[ತ್ರಿಶಿರಾದ್ಯಸುರ ಸಂಹಾರಕನೇತ್ರ] 1
ಕರುಣಾಕಾರ ದಿವ್ಯ ಶಶಿಬಿಂಬವದನಾ
ಶರಣಜನಾನತ ಮರಕತವದನಾ
ಧರಣಿಜಲೋಲ ಭಾಸ್ಕರವಂಶಮದನಾ
ನಿತ್ಯ ಮಾಂಗಿರಿಸದನಾ 2