ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗುವೆ
ಲಲನಾಮಣಿಯ ಸೇರಿ ಸುಖಿಸಿ ನಲಿದು ಪಾಡುವೆ ಪ
ಸರಸಿಜಾಸನಾದಿವಿನುತೆ, ಸುರವರಾರ್ಚಿತೆ
ಶರದಿಂದುಹಾಸೆÉ ಧರಣಿಜಾತೆ ಕರುಣಿಸೆನ್ನುತೆ 1
ಕಮಲವದನೆ ಕಮಲನಯನೆ ಕಮಲವಾಸಿನೀ
ವಿಮಲಚರಣೆ ರಾಮರಮಣಿ ಮಧುರಭಾಷಿಣಿ 2
ಶೇಷಶೈಲಾವಾಸದಯಿತೆ ವಿಶ್ವಸನ್ನುತೆ
ಪೋಷಿಸೆನ್ನ ಜನಕಜಾತೆ ಸೀತೆಯೆನ್ನುತೆ 3