(1) ದಶಾವತಾರ
ಶ್ರೀಹರ ನಿನ್ನ ಲೀಲೆ ಏನು ಹೇಳಲಯ್ಯ ನಾನು ಪ
ಮೋಹಗೊಳಿಸಿ ಲೋಕವನ್ನು ಪಾಲಿಸುತ್ತಿಹೆ ಅ.ಪ
ಮತ್ಸ್ಯನಾಗಿ ವೇದ ತಂದೆ ಆಮೆಯಾಗಿ ಅಮೃತ
ವಿತ್ತೆ ವರಹನಾಗಿ ನೀನು ಧರಣಿ ಹೊತ್ತೆಯೈ 1
ನರಹರಿ ತರಳರಕ್ಷ ಬ್ರಹ್ಮಚಾರಿ ಇಂದ್ರಪಾಲ ದಾ
ಶರಥಿಯೆ ನೀನು ಧರ್ಮ ತೋರ್ದೆಯೈ 2
ಬಾಲಕೃಷ್ಣ ಲಾಲಿಲೀಲೆ ಪರುಶುಧಾರಿ ಪಿತೃಭಕ್ತ
ಬಲ್ಲರಾಮನಾಗಿ ನೀನು ಬುದ್ಧಿ ಪೇಳ್ದೆಯೈ 3
ಕಲ್ಕಿಯಾಗಿ ಕೆಸರ ತೊಳೆವೆ ವಿಷ್ಣು ಜಾಜಿಶ್ಯಾಮವನ್ನು
ಶುಲ್ಕವಿಲ್ಲದಂತೆ ನಿನ್ನಲ್ಲಿಗೊಯ್ವುದೈ 4