ಘನ ಗುರು ನೀನೆನೋ ಎನಗೆ ಸಾಕ್ಷಾತವೋ
ಮನಕಾದನಕೂಲವೋ ಧ್ರುವ
ಕಣ್ಣಿಲೆ ಕಂಡೆವೋ ಚನ್ನಾಗ್ಹಿಡಿದೆವೋ
ಇನ್ನೆಲ್ಲಿಗ್ಹೋದೆಲವೋ ಮುನ್ನಿನ ಪುಣ್ಯವೋ
ನಿನ್ನ ನೋಡಿದೆವೋ ಧನ್ಯ ಧನ್ಯವಾದೆವೋ 1
ಸಾಧಿಸಿ ಬಿಡೆವೋ ಭೇದನ ಮಾಡೆವೋ
ಸದಮಲ ಸುಖಗೂಡುವೆವೋ ಸಾಧನ ಮಾಡುವೆವೋ
ಭೇದಿಸಿ ನೋಡುವೆವೋ ಸದೋದಿತ ಬೆರದಾಡುವೆವೋ 2
ಗುಹ್ಯ ಗುರುತವೋ ಧ್ಯಾನಿಸುವೆವೋ
ದಂiÀiಮಾಡಬೇಕೆಲವೋ ಇಹಪರ ನೀನೆವೋಮಹಿಪತಿ ನಿಜವೋ ತಾಯಿತಂದೆ ನೀನೆವೋ 3