ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಅಜಹರವಿನುತ ನಿಜಪಾದ ಅನುದಿನವು ಭಜಸಿಬದುಕೆಲೊ ಪ ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ ಸುಜನ ಭಜಗಶಯನನ ಅ.ಪ ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ ಕೊಳಪಟ್ಟು ಕೆಡದಿರೆಲೊ ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ ಅಳಿವ ಸುಖದಾಸೆಗೆಳಸಿ ಕೆಡಬೇಡ ಜಲಜನಾಭನ ಒಲಿಸಿ ನಲಿಯೊ 1 ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ ಕರಕೊಂಡು ಧರೆಗೆ ಬಂದಿ ಅರಲವದ ಸುಖಕಾಗಿ ಮರೆದು ಎಲ್ಲವ ನೀನು ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ ಖರೆಯೆಂದೆನ್ವುದು ಸರಿಯಲ್ಲೆಲೊ ಇದು ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ 2 ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ ನೊಣಕ್ಹವಣಿಸುತಿರುವಂತೆ ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ ರಣೆಂಬ ದಣಿವು ಕಳೆವಂಥ ಜನಕಜಾತೆಯ ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ ಕುಣಿ ಕುಣಿದು ಧನ್ಯವಾಗೆಲೊ 3
--------------
ರಾಮದಾಸರು