ದರುಶನವಾಯಿತು ಪಂಢರೀಶನ ಪ
ದರುಶನದಿಂದಲಿ ಧನ್ಯರಾದೆವು
ಸರಸಿಜಭವನ ನಾಭಿಯಲಿ ಪಡೆದವನ ಅ.ಪ
ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ-
ನಂದಪದವಿಯನಿತ್ತ ನಂದನ ಕಂದನ 1
ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ
ಶಿಷ್ಟರ ಸಲಹುವ ವಿಠ್ಠಲರಾಯನಂಘ್ರಿ 2
ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ
ನೆರವೇರಿಸುವ ಜಗದ್ಭರಿತನ ಶ್ರೀಪಾದ 3
ನಾಗಶಯನ ನಿಖಿಲಾಗಮವೇದ್ಯನ 4
ಮುಕುತಿದಾಯಕ ಗುರುರಾಮವಿಠಲ ಚರಣ5