ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು