ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಳವೆ ಯೋಗದಭ್ಯಾಸ ಹರಿಯೇ ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ ಅವ್ಯಯಾನಂದ ಮಾಂಗಿರಿರಂಗ ವಿಠಲ 1 ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು ಕರ್ಮದೊಳಗುತ್ಸಾಹವಿರಲದೇ ಸುರಿನೀರು ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ ನಿರ್ಮಲತೆಯೇ ಫಲವು ಇದು ಕರ್ಮಯೋಗ 2 ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು ಭಕ್ತಜನರ ಸೇವೆಯೇ ಮೇಲೆರೆವ ನೀರು ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ ಮುಕ್ತಿಯೇ ಫಲಮಿದೆ ಭಕ್ತಿಯೋಗ3 ಆಸನವೇ ಬೀಜ ಪ್ರಾಣಾಯಾಮವೇ ಬೇರು ಆಸೆಯಿಂ ಗೈವ ದಿನಚರ್ಯೆಯೇ ನೀರು ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ ಭಾಸಿಪಾ ಫಲಮಿದೆ ಹಟಯೋಗವಯ್ಯ 4 ಯಮನಿಯಮಗಳೆ ಬೀಜಧಾರಣವೆ ತಾಂಬೇರು ಕ್ರಮಮಾದಘ್ರಣಿದಾನ ಮೇಲೆರೆವ ನೀರು ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ ಕ್ರಮಸಮಾಧಿಯೆ ಫಲವು ಇದು ರಾಜಯೋಗ 5 ವರವಿವೇಕ ಬೀಜ ವೈರಾಗ್ಯವೇ ಬೇರು ಗುರುಕರುಣಮೆಂಬುದೇ ಮೇಲೆರೆವ ನೀರು ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ ವರಮೊಕ್ಷವೇ ಫಲವು ಇದು ಜ್ಞಾನಯೋಗ 6 ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ ತ್ಯಾಗ ಮಾಡುವ ನಿಯಮವೆನಗಸಾದ್ಯ ಆಗಾಗ ನಿನ್ನ ನಾಮಂಗಳನು ಪೇಳ್ವುದೇ ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ರಂಗವಲಿದ ಗುರುರಾಯರ ನೀ ನೋಡೋ | ಅಂತರಂಗದಿ ಪಾಡೋ ಭಂಗ ಬಡಿಪ ದುರಿತಂಗಳ ಈಡ್ಯಾಡೋ ಸತ್ ಸಂಗವ ಬೇಡೋ ಅ.ಪ ಹಿಂದೆ ಮೂರೊಂದವತಾರ ಧರಿಸಿದಾತ ಇದು ಹಿರಿಯರು ಮಾತ | ಬಂದ ಮರಳಿ ಮಹೀತಳದಿ ಜಗನ್ನಾಥ ದಾಸಾರ್ಯ ಪ್ರಖ್ಯಾತ || ತಂದೆ ನಮಗೆ ತಿಳಿ ಎಂದೆಂದಿಗು ಎಂದೆಂದಿಗು ಈತ ಆನಂದ ಪ್ರದಾತ 1 ಬಣ್ಣಿಸಲೆನಗಿನ್ನೊಶವೆ ಇವರ ಚರಿಯ ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯತಾನಾಗಿ ವಿಧೇಯ ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ ಪುಸಿಯಲ್ಲವೊ ಖರಿಯ 2 ದಾಸವರ್ಯರಾ ವಾಸಗೈದ ಸ್ಥಾನ ಗಯಕಾಶಿ ಸಮಾನ ಲೇಸು ಭಕ್ತಿಯಲಿ ಸೇವಿಸಲನುದಿನ ಕೊಡುವುದುಸುಜ್ಞಾನ ಶ್ವಾನ | ಯಾತಕೆ ಅನುಮಾನ 3 ಸಾರ ನಿರ್ಮಿಸಿರುವ ದೇಹಾಖ್ಯ ರಥವ ಸೊಗಸಿಲಿಂದ ತಾನೇರಿ ನಗುತ ಬರುವ ಚತುರ್ದಿಕ್ಕಿಲಿ ಮೆರೆವ ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ ಪೊಗಳುವರಷತರಿವ 4 ಶಾಮಸುಂದರನ ಸುಕಥಾಮೃತಸಾರ | ರಚಿಸಿದ ಬಹುಚತುರ ಪಾಮರ ಜನರ ಪ್ರೇಮದಿ ಉದ್ಧಾರ ಮಾಡಲು ಗಂಭೀರ ಶ್ರೀಮಾನ್ ಮಾನವಿಕ್ಷೇತ್ರನೆ | ನಿಜಾಗಾರವೆಂದೆನಿಸಿದ ಧೀರ 5
--------------
ಶಾಮಸುಂದರ ವಿಠಲ