ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ.
ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ.
ವ್ರತನೇಮ ಜಪ ತಪ ಹಿತಮಾದುದೈ ಸುತಪ
ಕೃತಿಪತಿ ತವ ಕೃಪಾಶತಧೃತಿಲೋಲುಪಾ 1
ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದ
ಪದುಮನಾಭ ಗೋವಿಂದ ಪವನನಯ್ಯ ಮುಕುಂದ 2
ಪ್ರೀಯ ತಪೋವಾಸನನೀಯುವ ದೇವರ ದಾನ
ತೋಯಜಾಕ್ಷ ಲಕ್ಷ್ಮೀನಾರಾಯಣ ಪರಾಯಣ 3