ಎಷ್ಟೆಂದು ಸಾರುವೆ ನಿಮ್ಮ ನಾಮ ಮಹಿಮಾ|
ಶ್ರೀ ಪರಬೊಮ್ಮಾ ಶಿಷ್ಟ ಜನರ ಸಂಭ್ರಮಾ ಪ
ಹರಿಹರಿಯಂದೊದರೆ ಮರೆದರಿದೊಮ್ಮಾ|
ಹರದ್ಹರ ದೋಹುದುಪಾಪ ಪುಣ್ಯವು ಮೋಪಾ|
ತಿರು ತಿರುಗಿ ಯಾತ್ರೆಗಳಾ ಮಾಡಿದ ಫಲಾ|
ಪರತರಾಸುಖ ನೀವುದು ರಕ್ಷಿಸುವುದು 1
ರಮ ರಾಮಯಂದು ಕಾಮಿಕಾಮಿ ಅಂದು|
ನಾಮಾ ನೇಮದಿ ನುಡಿಯೆ ಗಿಳಿಯ ಕರಿಯೆ|
ಪ್ರೇಮ ಪ್ರೇಮಕರ ತಂದೆ ಗತಿ ನೀಡದೇ|
ಸೋಮ ಸೋಮಾರಿ ಕುಲೇಶ ಕೋಟಿ ಪ್ರಕಾಶಾ 2
ಪರಿ ಪರೀವದಾನಂದಾ|
ಕರೆ ಕರೆದುಂಡು ನಲಿದರು ನಾರದಾದ್ಯರು|
ತರಿಸಿ ತಾರಿಸುತಿಹರು ಸಾಧು ಸಂತರು|
ಗುರುವರ ಮಹಿಪತಿ ಜನು ಧನ್ಯನಾದನು 3