ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ಶ್ರೀಹರಿಯಾ ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ ಕುಲನೆನಿಸಿ ಮಾರ್ಗದಲಿ ಕುಲನೆಲೆ ತಿಳಿದು ಕಾಣುತಹೋಗುವ ನೆನೆಗಳ್ಳರ ಕೂಡೆ ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ ಚಂಚಲ ನತಿ------ದು ಭಲ ಭಲ ಎನಿಸಿಕೊ ಬೇಗನೆ ಪರಮ ಭಕ್ತರ ಒಳಗೆಂದೂ 1 ಸರಸರ ಮಾರ್ಗದ ಸರಳಿಯ ತಿಳಿದಾ ಶರಣರ ನೆಲೆಗಾಣೊ ನೆರೆಹೊರೆಲಿರುವರ ಕರಕರಿಗಳುಯೆಂಬ ಕಲ್ಮಿಷ-----ಕಾಣೊ ಹರಿಗುರು ಕರುಣಾದಿ ಅಂತರಂಗದಿ ಅರಿತಿರುವರ ಕೂಡೋ ಪರಿ ಪರಿಯಲಿ ಆ ಭಂಡಾರದ ಗುರುಭಾರವು ನೀನೋಡೊ 2 ಮನಘನ ಕಾಂತಿಯ ಮಹಿಮೆಯ ತಿಳಿದಾ ಮರ್ಮಜ್ಞರ ಬೆರಿಯೊ ದಿನ ದಿನ ಸಂಭ್ರಮವನು ಅಘಸರಿಸಿ ದೃಢಭವವು ಪಿಡಿಯೊ ತನುವನು------ದ್ರಿಸಿ ತಾರಕ ಜಪಿಸಿ ಧನ್ಯನಾಗೊ ಇನ್ನೂ ದೀನಜನ ರಕ್ಷಕ ಧೀರ 'ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು 3
--------------
ಹೆನ್ನೆರಂಗದಾಸರು
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ನೆನಿಯಬಾರದೆ ಮನವೆ ಹರಿಯ ನಾಮವ ನೆನವು ಸೆಲೆಗೊಳ್ಳಲಿಕ್ಕೆ ಘನಪದವನೀವ ಸ್ವಾಮಿ ಧ್ರುವ ಅಂತು ಇಂತು ಎಂತು ಎನದೆ ತಂತು ಪಿಡಿದು ತನುವಿನೊಳು ಪಾದ 1 ಶ್ರವಣ ಕೀರ್ತನೆ ಮೊದಲಾದ ನವವಿಧ ಭಕುತಿಯಿಂದ ಸವಿದು ಸವಿದು ಸವಿದುಂಬ ಸಾರವಾದ ದಿವ್ಯನಾಮ 2 ಧನ್ಯ ಧನ್ಯನಾಗೊ ಮನವೆ ನೆನೆದು ಪತಿತಪಾವನನಾಮ ಧನ್ಯಗುರುವಿನ ದಿವ್ಯನಾಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ಪ ಗೆಜ್ಜೆ ಕಟ್ಟಿದ್ದೊರೆ ಕೃಷ್ಣ ಭಜನೆಯಲ್ಲಿ ಮಾನದಲ್ಲಿ ಅ.ಪ. ಆರು ವಲಿದು ಮಾಡೊದೇನು ಆರುಮುನಿದು ಮಾಡೊದೇನು ಚಾರು ಚಾರು ಮೆಚ್ಚಲೇನು ಭಾರಿದೇವ ವಿಶ್ವಜನಕೆ ಹರಿಯದಾಸನೆಂದು ಇನ್ನು ಈರ ಮತವ ಸಾರಿಸಾರಿನಲಿದು ನಲಿದು ಸುಖಿಪುದಕ್ಕೆ 1 ದುಡ್ಡು ಕಾಸುಬೇಡ ನಮಗೆ ದೊಡ್ಡತನವು ಬೇಡ ಹಾಗೆ ಹೆಡ್ಡತನನ ಬಿಟ್ಟು ಪಿರಿಯಕೃಷ್ಣನನ್ನು ಭಜಿಸಲಿಕ್ಕೆ ಅಡ್ಡಿಏನು ಕುರುಡು ಮನವೆ ನೆನೆದುನೆನೆದು ನೋಡುನೀನೆ ದೊಡ್ಡತನವೆ ಸತ್ಯವೀದು ದಡ್ಡತನವೆ ದುರಭಿಮಾನ 2 ಹರಿಯದಾಸದೀಕ್ಷೆ ಪಡೆಯೆ ಸುಲಭವಲ್ಲ ಸುಲಭವಲ್ಲ ದುರಿತ ರಾಶಿಪೋಗಿ ಶುದ್ಧ ಚಿನ್ನದಂತೆ ಆಗದೇನೆ ಹಿರಿದು ಕಾಣೊ ಇಂಥಾ ಜನ್ಮ ಬರಿಯ ಮಾತಿಗೊಲಿಯದೇವ ಅರಿವಿನಂತೆ ನಡೆಯದಿರಲು ತೊರೆದು ಎಲ್ಲ ದುರಭಿಮಾನ 3 ಗೆಜ್ಜೆಕಟ್ಟಿ ಕುಣಿದು ಕುಣಿಯೆ ಲಜ್ಜೆನಾಶವಾಹುದೈಯ್ಯ ಲಜ್ಜೆನಾಶವಾಗಿ ಭಕ್ತಿಯುಕ್ತಿ ಉಕ್ಕಿಹರಿಯುತಿರಲು ಅಬ್ಜಪೀಠ ಪಿತನುತಾನೆ ಅಪ್ಪಿಕೊಂಡು ನಲಿದುನಲಿವ ಅಬ್ಜನಾಭ ನಲಿದು ವಲಿಯೆ ಹೆಚ್ಚುಉಂಟೆ ಅದರಕ್ಕಿಂತ 4 ಮೆರೆಯುತಿರಲು ದುಷ್ಟಕಲಿಯು ಅನ್ಯಮಾರ್ಗ ಸಾಧ್ಯವಿಲ್ಲ ಹರಿಯ ಭಜನೆ ಒಂದೇ ದಾರಿ ಹರಿಯ ವಲಿಸೆ ಸಿದ್ಧವೀದು ಜರಿದು ವಿಷಯ ಬೆರಸಿ ಭಕ್ತಿ ಸಿರಿಯ ರಮಣ “ಕೃಷ್ಣವಿಠಲ” ಚರಣ ಯುಗವ ಭಜಿಸಿ ನೀನು ಮಾನ್ಯನಾಗೋ ಧನ್ಯನಾಗೊ 5
--------------
ಕೃಷ್ಣವಿಠಲದಾಸರು