ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾವಲ್ಲಿ ಕೂತಿದ್ದೀಯೊ ರೋಗಿಷ್ಠ ಕಾಯ ಎನ್ನನು ಕಾಯ್ಕೊಂಡು ಪ ಜೀವಕಂಟಕನಾಗಿ ಹೇಯದಿಂದೊಡಗೂಡಿ ಆವಕಾಲದಿ ರೋಗದ್ಹೊರಳುತ ಎಲೆ ಖೋಡಿ ಅ.ಪ ಏನು ಕರ್ಮವ ಮಾಡಿದ್ದೋ ಪಾಪಾತ್ಮ ನೀ ಹೀನಸ್ಥಿತಿಯ ಪೊಂದಿದಿ ನಾನಾವಿಧದಿ ಮಹಬೇನೆಯಿಂ ನರಳುತ ನೀನೆನ್ನ ಜತೆಗೂಡಿ ಬನ್ನಬಡಿಸುವಿ ಪಾಪಿ1 ಹೊಲಸಿನ ದ್ವಾರದಿಂದ ಇಹ್ಯಕೆ ಬಂದಿ ಮಲಮೂತ್ರ ತುಂಬಿಕೊಂಡು ತೊಳೆಯದಿರಲು ನಿಮಿಷ ಹೊಲಸಿಕ್ಕಿನಾರುವಿ ತಿಳಿದುನೋಡಲು ನಿನ್ನ ಸಲಿಗೆಯಿಂ ನಾ ಕೆಡುವೆ 2 ಎನ್ನ ಜೊತೆಯ ಪೊಂದಿರ್ದ ಕಾರಣದಿಂ ನಾ ನಿನ್ನ ಕ್ಷೇಮವ ಬಯಸುವೆ ಎನ್ನಯ್ಯ ಶ್ರೀರಾಮನುನ್ನತಡಿಗಳ ನಂಬಿ ಸನ್ನುತಿಯಿಂ ಕ್ಷಮೆಬೇಡಿ ಧನ್ಯನಾಗೆಲೋದೇಹ್ಯ3
--------------
ರಾಮದಾಸರು
ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ | ಮರೆವ ದಿನಗಳ ಜರಿವರೇ ನರದೇಹವಿದು ಅ.ಪ ದೊರೆಯದಿನ್ನು ಮತ್ತ ತರುವರ ಏನಾದರೇನೀ | ಹರಿಯ ಸ್ಮರಣೆಯ ಬಿಡುವರೇ | ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ | ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ 1 ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ | ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ | ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ | ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ | ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು | ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ 2 ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು | ತಿಂದ ನಡುವಳಿ ಬಿರಿದು | ಸದ್ಗುರುವೀನ | ದ್ವಂದ್ವ ಪಾದಗಳ ವಿಡಿದು | ಅವರ ದಯ | ದಿಂದ ಗತಿ ಮುಕ್ತಿ ಪಡೆದು | ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ | ತಂದೆ ಮಹಿಪತಿ ನಿಜನಂದನುಸುರಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು