ಒಟ್ಟು 4 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ. ಅರುಣ ಉದಯದಲ್ಲಿ ಎದ್ದು ದುರಿತದೂರವನ್ನು ಸ್ಮರಿಸಿ ಹರುಷದಿಂದ ಶೌಚ ಕರ್ಮ ಅರಿತು ನಿರುತ ಚರಿಸುವರನು 1 ಸತ್ಯಮತದ ಪದ್ಧತಿಯನು ಚಿತ್ತವಿಟ್ಟು ಆಚರಿಸುತ ಭೃತ್ಯನೆಂದು ಪೇಳಿಕೊಳುವ ನಿತ್ಯ ತೃಪ್ತನಾದವರನು2 ಸಿರಿಯುತ ರಂಗೇಶವಿಠಲ ಸರುವ ದೇವರೊಡೆಯನೆಂದು ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾಣ ನರನು 3
--------------
ರಂಗೇಶವಿಠಲದಾಸರು
ಧನ್ಯನಲ್ಲವೇ ಇವನು ಧನ್ಯನಲ್ಲವೇ ಪ ಧನ್ಯನಲ್ಲವೇ ಪನ್ನಂಗಶÀಯನ ನುನ್ನತ ಮಹಿಮೆ ತನ್ನೊಳ್ತಿಳಿದವ ಅ.ಪ ಕರಿ ಮೊಸಳಿಗೆ ಸಿಲ್ಕಿ ಪೊರೆಯೊ ಹರಿಯೆನಲು ಕರುಣದಿಂದಲಿ ಬಂದು ಪೊರೆದನೆಂದರಿತವ 1 ದುರುಳ ದುಶ್ಯಾಸನನು ಸೀರೆ ಸೆಳೆಯುತಿರೆ ತರುಣಿಗ್ವರದ ಶ್ರೀಪರಮನೆಂದರಿತವ 2 ಬಲಿಯನು ರಸಾತಳಕಿಳಿಸಿ ತಾ ಪಾದದಿ ಒಲಿದು ಮನೆಯ ಬಾಗಿಲ ಕಾಯ್ದೆಂದರಿತವ 3 ಮಲತಾಯಿ ಧ್ರುವನೊದೆದು ಛಲದಿ ನೂಕಲು ಕಂದ ನಳಿನಾಕ್ಷ ಗತಿಯೆನಲು ಒಲಿದು ಸಲಹಿದ್ದರಿತವ 4 ನೀನೆಗತಿಯೆನಗೀ ಭುವನದಾರು ಗತಿಯಿಲ್ಲ ಪಾದ ನೆನವಿನೊಳಿರ್ದವ 5
--------------
ರಾಮದಾಸರು