ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ. ಅರುಣ ಉದಯದಲ್ಲಿ ಎದ್ದು ದುರಿತದೂರವನ್ನು ಸ್ಮರಿಸಿ ಹರುಷದಿಂದ ಶೌಚ ಕರ್ಮ ಅರಿತು ನಿರುತ ಚರಿಸುವರನು 1 ಸತ್ಯಮತದ ಪದ್ಧತಿಯನು ಚಿತ್ತವಿಟ್ಟು ಆಚರಿಸುತ ಭೃತ್ಯನೆಂದು ಪೇಳಿಕೊಳುವ ನಿತ್ಯ ತೃಪ್ತನಾದವರನು2 ಸಿರಿಯುತ ರಂಗೇಶವಿಠಲ ಸರುವ ದೇವರೊಡೆಯನೆಂದು ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾಣ ನರನು 3
--------------
ರಂಗೇಶವಿಠಲದಾಸರು