ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ನದಿಗಳು ಗೋದಾವರೀ ದೇವಿ ನಿನಗೆ ಶರಣಾರ್ಥಿ ಪ ಮೇದಿನಿಯ ಪಾಪ ಸಂಹಾರಿಣೀ ಕಲ್ಯಾಣಿ ಅ.ಪ ಹೇಮಾದ್ರಿಸಂಜಾತೆ ಸೋಮಸಮಕಾಂತಿಯುತ ಭೂಮಿಜಾಖೇಲನಾ ಪುಳಿನಭರಿತೆ ಕ್ಷೇಮ ಸಂದಾತೆ ಶ್ರೀರಾಮ ಕರಪೂಜಿತೇ ಕಾಮಿತಾರ್ಥದೆ ಮಾತೆ ಪ್ರಾಙ್ಮುಖೀ ವರದಾತೆ 1 ದೇವಗಂಗೋಪಮೆ ಪಾವನತರಂಗಿಣೆ ವಿಪ್ರ ಸುಖದಾತೆ ಮೌನಿವಿನುತೆ ಕಾವೇರಿಸನ್ಮಿತ್ರೆ ಪರಮಶುಭಚಾರಿತ್ರೆ ಜೀವಪೋಷಕಶಾಲಿ ವಸನಾಂಬಿಕೆ 2 ದಂಡಕಾರಣ್ಯ ಸಂಚಾರಿಣಿ ನಾ ನಿನ್ನ ಕಂಡು ಧನ್ಯತೆಯಾಂತೆ ಮಿಂದು ನಲಿದೆ ಅಂಡಜಾಧಿಪಗಮನ ಮಾಂಗಿರೀಶನ ಸುತ ಎಂತು ಕಂಡಂತೆ ಮನದೊಳಾನಂದವಾಂತೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್