ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಬಾರೋ ಬಾರಯ್ಯ ಬಾರೊ ಸದ್ಗುರುಸ್ವಾಮಿ ಬಾರಯ್ಯ ಬಾರೊ ಮದ್ಗುರು ಸ್ವಾಮಿ ಬಾರಯ್ಯ ಬಾರೊ ಧ್ರುವ ಸ್ವರೂಪಸುಖ ನಿಜವನ್ನು ತೋರೊ ಹರುಷಾನಂದದನುಭವ ಬೀರೊ ಗುರುತವಾಗ್ಯೆನ್ನೊಳು ನಿತ್ಯವಿರೊ ತರಣೋಪಾಯದ ನಿಜಬೋಧ ನೀ ಸಾರೊ 1 ಕಣ್ಣುಕೆಂಗೆಂಡುತಾವೆ ಕಾಣದೆ ನಿಮ್ಮ ಪುಣ್ಯಚರಣ ತೋರೊ ಘನ ಪರಬ್ರಹ್ಮ ಚಿಣ್ಣಕಿಂಕರ ಅತಿದೀನ ನಾ ನಿಮ್ಮ ಧನ್ಯ ಧನ್ಯಗೈಸುವದೆನ್ನ ಜನುಮ 2 ಚಾಲ್ವರುತಾವೆ ಮನೋರಥಗಳು ಆಲೇಶ್ಯ ಮಾಡದಿರು ನೀ ಕೃಪಾಳು ಮೇರೆದಪ್ಪಿ ಹೋಗುತಿದೆ ದಿನಗಳು ಬಲು ಭಾಗ್ಯೊದಗಿಬಾಹುದು ನೀ ದಯಾಳು 3 ಹಾದಿ ನೋಡುತಿದೆ ಹೃದಯ ಕಮಲ ಸಾಧಿಸಿಬಾಹುದು ಮುನಿಜನ ಪಾಲ ಸಾಧುಹೃದಯ ನೀನಹುದೊ ಸಿರಿಲೋಲ ಛೇದಿಸೊ ನೀ ಬಂದು ಭವಭಯಮೂಲ 4 ಬಾರದಿದ್ದರೆ ಪ್ರಾಣ ನಿಲ್ಲದೊ ಎನ್ನ ಕರುಣಿಸಿಬಾಹುದು ಜಗನ್ಮೋಹನ ತರಳ ಮಹಿಪತಿಗೆ ನೀ ಜೀವಜೀವನ ಕರೆದು ಕರುಣ ಮಳೆಗೈಸು ಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು