ಒಟ್ಟು 13 ಕಡೆಗಳಲ್ಲಿ , 2 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಬಲು ಸೂಕ್ಷ್ಮ ಸದ್ಗತಿ ಸುಖಸಾಧನ ಧ್ರುವ ಬಯಲಿಗೆ ನಿರ್ಬಯಲಾಗೇದ ಗುಹ್ಯಗೂಢಕೆ ಮೀರ್ಯದ ಸೋಹ್ಯಸೊನ್ನಿದತ್ತಲದೆ ಕೈಯೊಳು ಸಿಲುಕದ 1 ಧ್ಯಾನಮೋನಕ ದೂರ ಏನೆಂದ್ಹೇಳಲಿ ವಿಚಾರ ಅನಂತಗುಣ ಅಪಾರ ‌ಘನ ಪರಾತ್ಪರ 2 ಕಣ್ಣಿನೊಳದೆ ಖೂನ ಧನ್ಯಗೈಸುವ ನಿಧಾನ ಚಿಣ್ಣ ಮಹಿಪತಿಗೆ ಪ್ರಾಣ ಆನಂದ ಘನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುದಿನ ಶುಭದಿವಸ ನೋಡಿ ಬಂದು ಕೂಡಿದ ಸದ್ಗುರು ದಯಮಾಡಿ ಧ್ರುವ ಮುನ್ನ ಮಾಡಿದ ಸುಪಣ್ಯ ಒದಗಿತು ಭಿನ್ನವಿಲ್ಲದೆ ಸುಚಿನ್ಹ ಹೊಳೆಯಿತು ಧನ್ಯಗೈಸುವ ಸುಫಲದೋರಿತು ಎನ್ನ ಜನುಮ ಸಾಫಲ್ಯವಾಯಿತು 1 ಸ್ವಾಮಿ ಕಂಡೆ ಕಣ್ಣಿನೊಳಂತರಂಗ ಬ್ರಹ್ಮಾನಂದ ಭಾಸುತದೆ ಸರ್ವಾಂಗ ಸಮಾರಂಭದೋರುತದೆ ಸುಸಂಗ ಒಮ್ಮಿಂದೊಮ್ಮೆ ಬಂದ ನೋಡಿ ಶ್ರೀರಂಗ 2 ಗುಹ್ಯ ಒಡೆದು ಹೇಳಲು ಸುವಿಚಾರ ದಯವಿಟ್ಟು ಬಂದ ನೋಡಿದರ ಇಹಪರಕೆ ಸದ್ಗುರು ಸಹಕಾರ ಮಹಿಪತಿಗೆ ಮಾಡಿದ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿರೋ ನಿಜನೋಡಿರೋ ಧ್ರುವ ನೋಡಿನೋಡಿ ನೋಡಿ ನೋಡುದರೊಳು ಕೂಡಿ ನೋಡುವದೇನೆಂದು ನೋಡಿ ನೋಡಿದ ಮ್ಯಾಲಿನ್ನು ಮೂಡಿಬಂದರ ಘನ ನೋಡುವದೇ ಖೂನ ಮಾಡಿ ಮಾಡಿದ ಮಾಟವು ಕೂಡಿಬಂದರೆ ಕೈಯ ನಾಡಗೂಡ ಹೇಳಬ್ಯಾಡಿ ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ ನೋಡಿ ನಿಮ್ಮೊಳು ಬೆರೆದಾಡಿ 1 ಓದಿದರೋದಬೇಕಿದೊಂದೇ ಅಕ್ಷರ ಭೇದಿಸುವಂತೆ ಬ್ರಹ್ಮಾಂಡ ಇದೇ ಸಾಧಿಸಿನ್ನು ಮೂಲವ ತಿಳಿಯದೆ ಓದುವದ್ಯಾಕೆ ಉದ್ದಂಡ ಹಾದಿ ತಿಳಿಯದಿದ್ದರೆ ಹೇಳಿಕೊಡುವನು ಸದ್ಗುರು ಘನಪ್ರಪಂಚ ಭೋದಿಸಿ ಬ್ರಹ್ಮಾನುಸಂಧಾನದ ಸುಖ ಉದಯ ಮಾಡುವ ಅಖಂಡ 2 ನಾನ್ಯ ಪಂಥವೆಂಬ ಮಂತ್ರದನುಭವ ಚನ್ನಾಗ್ಯಾಗಬೇಕು ಖೂನ ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ ತನ್ನೊಳಾಯಿತು ಸಮ್ಯಕಙÁ್ಞನ ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು ಕಣ್ಣಾರೆ ಕಾಂಬೊ ಸಾಧನ ಉನ್ಮತವಾಗದೆ ಸನ್ಮತದೋರದು ಇನ್ನೊಬ್ಬರ ಕೇಳುವದೇನ 3 ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ದೋರ್ವಾಂಗೆ ನೆಲೆಗೊಳಬೇಕು ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ ಗರ್ವಿತಲ್ಯಾಡುವ ಮಾತು ಹೋತು ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ ಮವ್ರ್ಹಿನೊಳೀಹುದು ಮುಸುಕು ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ ದೆರ್ವದಿದೊಂದೇ ಸಾಕು 4 ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು ಗುರುವಿಗೆ ಕೇಳಿ ನಿಜ ವಂದ ದೇಹದ ಒಳಗಿಹ್ಯ ದ್ಯಾವರ ತಿಳಿದರ ಜನ್ಮಕೆ ಬಂದುದು ಚಂದ ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ ಭವ ಮೂಲದಿಂದ ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ ಮಹಿಪತಿಗಿದೆ ಬ್ರಹ್ಮಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸಾಧಿಸಿನೋಡಿ ಮನ ಉನ್ಮನÀಮಾಡಿ ಘನಸುಖ ಭೇಧಿಸಿದರ ಭಾಸುತದೆ ತನ್ನೊಳು ತಾನೆ ಕೌತುಕಧ್ರುವ ನೋಡಿ ನೋಡಿ ಖೂನ ಅರುಹು ಇಲ್ಲದೆ ಜನದೊಳು ಬರುದೆ ಹೇಳ್ಯಾಡುದೇನ ನಿರ್ವಿಕಲ್ಪನ ನಿಜನೆಲೆನಿಭವರಿತು ನೋಡಿ ಸ್ಥಾನ ಸರ್ವಸಾಕ್ಷಿ ಸರ್ವಾತೀತವೆಂಬ ವಸ್ತು ನೋಡಿ ಪೂರ್ಣ 1 ಕಣ್ಣಿನ ಕೊನೆ ಮುಟ್ಟಿ ಕರಗಿ ಮನವು ನೋಡಿ ಪೂರ್ಣ ಬೊಧ ಸಣ್ಣ ದೊಡ್ಡವರೊಳಗಿದೆ ಒಂದು ಸಾರುತಿದೆ ವೇದ ಧನ್ಯ ಧನ್ಯಗೈಸುವ ನಿಜ ಪುಣ್ಯ ಗುರುಪಾದ ಚನ್ನಾಗ್ಯನುಭವದಿಂದ ನೋಡಲಿಕ್ಯಾಗದು ಸ್ವಾದ 2 ಸುರಿಮಳಿಗರೆವುತಲ್ಯದೆ ಸ್ವಸುಖದಾನಂದೊ ಬ್ರಹ್ಮ ತೆರೆತಿಳಿಯಲಿಕ್ಕೆ ಗುರು ಶರಣ ಹೋಗಬೇಕು ಇದೇ ವರ್ಮ ಹರುಷಗೈಸಿದ ನೋಡಿ ಪತಿತಪಾವನ ಸದ್ಗುರು ನಮ್ಮ ತರಳ ಮಹಿಪತಿಗಿದೆ ನಿತ್ಯಭಿನವದ ನೋಡಿ ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದು ಬಣ್ಣಿಸಲಿ ಗುರುರಾಯನಾ | ತಾ ನೆನೆದವರ ಧನ್ಯಗೈಸುವನಾ ಮಹಿಮೆ ಪ ಧರಿಯೊಳಜ್ಞಾನ ತಮಹರಣ ಭಾಸ್ಕರ ನೆನಿಪ | ಕರ ಕಮಲದಲಿ ಜನಿಸೀ | ವರಮೂಲ ಮಂತ್ರವನೆ ಗುರು ಮಹಿಪತಿಯಂಬಾ | ನಿರುತ ಖ್ಯಾತಿಯ ನಾಮ ಧರಿಸಿ ಬಂದನ ಮಹಿಮೆ1 ಘನಸಾರ ವಿದ್ಯದಾಕಾರವೋ | ಶುದ್ಧಜ್ಞಾನ ಕಲ್ಪ ದ್ರುಮವಿನಾ | ಮುದ್ದು ಫಲವೋಯನಲು ಸಿದ್ಧ ಸಾಧಕರ ನಡು | ಗದ್ದುಗೆಯೊಳೆಸೆವ ಗುಣ ನದ್ವೀತಿಯನ ಮಹಿಮೆ 2 ಸ್ವಸ್ಥ ಮನದಿಂದ ಭಕುತಿ ಸ್ತವನ ಮಾಡಲಿಕೆ | ಮಸ್ತಕದ ಮ್ಯಾಲಭಯ ಹಸ್ತನೀಡೀ | ಅಸ್ತಿ ಭಾತಿ ಪ್ರಿಯಂ ವಸ್ತು ವಿದೇಶ ಸಕಲ ಹೃದ | ಯಸ್ಥನೆಂದನು ಭವವ ವಿಸ್ತರಿಸುವನ ಮಹಿಮೆ 3 ಆರಿಗಳವಡದಿಹ ನೈರಾಸ್ಯ ವೃತ್ತಿಯಾ | ತಾರದಲಿ ನಡೆದು ಮುನಿ ವೈರಾಗ್ಯದಾ | ಸಿರಿ ಸಂಪದವ ತೋರಿದನು ನೋಡಲಿಕೆ | ಸಾರ ಸಾಂಖ್ಯವು ಯೋಗ ದಾರಿ ಬಲ್ಲನ ಮಹಿಮೆ4 ಹೊಂದಿದ್ದವರ ಚಿದಾನಂದ ಸುಖಸಾಗರದಿ | ನಿಂದು ಲೋಲ್ಯಾಡಿಸಿದ ನಂದಿಗಿಂದು | ತಂದೆ ಮಹಿಪತಿ ತನ್ನ ದ್ವಂದ್ವಪಾದುಕೆಗಳನು | ನಂದನ ಸಿರದಲ್ಲಿಟ್ಟು ಛಂದ ನೋಡುವನ ಮಹಿಮೆ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಣ್ಣಿಲಿ ನೋಡಿರೋ ಸಾಕ್ಷ ಘನಗುರು ಪ್ರತ್ಯಕ್ಷ ಧ್ರುವ ಕಣ್ಣಿನೊಳದೆ ನಿಜ ವಸ್ತದ ಖೂನ ಪುಣ್ಯವಂತನೆ ಬಲ್ಲನುಸಂಧಾನ ಧನ್ಯಗೈಸುವದನುಭವದ ಖೂನ ತನ್ನೊಳಗದೆ ಗುರು ಆತ್ಮಙÁ್ಞನ 1 ಕಣ್ಣಿನ ಹಿಂದಾಡುತಲದೆ ಮನ ಕಣ್ಣಿಗೆ ಕಣ್ಣು ನೋಡಲುನ್ಮನ ಕಣ್ಣಿನೊಳಾಡುತಲದೆ ಚಿದ್ಛನ ಅಣುರೇಣುಕ ತಾ ಇದೆ ಪರಿಪೂರ್ಣ 2 ಕಣ್ಣಿನೊಳಾಡುವ ಭಾಸ್ಕರ ಕರುಣ ಭಿನ್ನವಿಲ್ಲದೆ ಚೆನ್ನಾಗ್ಯನುದಿನ ಚಿನ್ನ ಮಹಿಪತಿಗೆ ನೋಡೇವ ಧ್ಯಾನ ಧನ್ಯಗೈಸುವ ತಾ ದೀನೋದ್ಧರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಜ ವಸ್ತುನೆ ಮುಂದುಗಾಣಿ ಥಳ ಥಳ ಗುಡುವುತ ಹೊಳೆವುತಲ್ಯದೆ ಬಲಿಯೊ ಸದ್ಗುರು ಸುಪ್ರಾರ್ಥನೆ ಧ್ರುವ ಜನ್ಮದ ಸಂದೇಹಗಳೀತೆ ಒಂದಾದರ ಮಾತಿಗಿಳಿಯಿತೆ ನಿಜಘನ ನೆಲೆಗೊಳ್ಳಿತೆ ಹೊಂದಿತೆ ಅರಿಯದಿಹುದು ಒಳಿತೆ1 ನಿನ್ನೊಳು ನೀ ನಿಜ ತಿಳಿಯದೆ ಖೂನ ಇನ್ನೊಬ್ಬರಿಗ್ಹೇಳುವುದೇನ ಕನ್ನಡಿಯೊಳು ಕಾಂಬುವ ಕಾಂಚನ ಸನ್ನಿದಾಗುವದೆ ಪೂರ್ಣ ಭಿನ್ನಭೇದವು ಹೋಗದೆ ಅನುಮಾನ ಚೆನ್ನಾಗ್ಯಾಗುವದೆ ಜ್ಞಾನ ಧನ್ಯಗೈಸುವ ಸದ್ಗುರು ಕರುಣ ಮನ್ನಿಸಿ ಪಡಕೊ ನಿಧಾನ 2 ಮುಗ್ದದಿ ಗುರುಪಾದ ಈಗ ಏನೆಂದು ತಾ ತಿಳಿಯುವದು ಆಗ ಸ್ವಾನುಭವದ ಸ್ವಸುಖಭೋಗ ಅಣುರೇಣುದೊಳಗ ತಾ ಬ್ಯಾಗ ದೀನ ಮಹಿಪತಿಗದೆ ಒಳಹೊರಗೆ ಫನ ಭಾಸುತಲ್ಯದೆ ಆವಾಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನ ನೀ ತಿಳಿಯೋ ಮೂಢ ಭೇದಿಸಿ ಗೂಢ ಧನ್ಯಗೈಸುವ ಪ್ರೌಢ ಸದ್ಗುರು ದೃಢ ಧ್ರುವ ಬಂದು ಬಂದು ಹೋಪಾದೇನ ಸಾಧಿಸಿದಲ್ಲದೆ ಖೂನ ಸಂಧಿಸಿ ಬೀಳುವುದು ಹೀನ ಜನ್ಮಕೆ ನಾನಾ ಹೊಂದು ಮನವೆ ನೀ ಪೂರ್ಣ ಸದ್ಗತಿ ಸುಖ ಸಾಧನ ಎಂದೆಂದಿಗಾದ ನಿಧಾನ ಸಾಂದ್ರ ಸದ್ಘನ 1 ಮುತ್ತಿನಂಥ ಸುಜನ್ಮ ವ್ಯರ್ಥಗಳೆವುದಧರ್ಮ ಹತ್ತಿಲ್ಯಾದಾನಂದೋ ಬ್ರಹ್ಮ ತಿಳಿಯೋ ನೀವರ್ಮ ಚೆನ್ನೊಬ್ಬಳೆ ಮಾಡೊಮ್ಮ ಕಿತ್ತಿಬಿಸ್ಯಾಡೊ ದುಷ್ಕರ್ಮ ಎತ್ತ ನೋಡಲು ಸಂಭ್ರಮ ಸದ್ಗುರು ಧರ್ಮ 2 ತನ್ನ ತಿಳಿದು ನೋಡೊ ಭಿನ್ನ ಭೇದವೆಂಬುದೀಡ್ಯಾಡೊ ಸನ್ಮತ ಸುಖ ಸೂರ್ಯಾಡೊ ಅನುಮಾನ ಬಿಡೊ ನಿನ್ನೊಳೂ ಮಹಿಪತಿ ನೋಡೊ ಅನುಭವನೇ ಕೊಂಡಾಡೊ ಉನ್ಮತವಾಗಿ ನೀ ಕೂಡೊ ಘನ ಬೆರೆದಾಡೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೂಜಿಮಾಡುವ ಬನ್ನಿ ರಾಜತೇಜೋನಿಧಿಯ ರಾಜಾಧಿರಾಜ ಮಹಾರಾಜ ಗುರುಮೂರ್ತಿಯ ಧ್ರುವ ಮನವೆ ಸುಮನಮಾಡಿ ಘನಗುರು ಪಾದÀಲಿಡಿ ಅನುಭವದಿಂದ ನೋಡಿ ಅನುದಿನವೆ ಕೊಂಡಾಡಿ 1 ಷೋಡಶೋಪಚಾರ ಮಾಡಿ ದೃಢ ವಿಚಾರ ನೋಡಿ ಮನೋಹರ ಒಡಿಯನೆ ಸಹಕಾರ 2 ಕಣ್ಣಿನೊಳಿಟ್ಟು ಖೂನ ಪುಣ್ಯನೋಡಿ ನಿಧಾನ ಚಿಣ್ಣಮಹಿಪತಿಪ್ರಾಣ ಧನ್ಯಗೈಸುವ ಸಾಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೋ ಬಾರೋ ಬಾರಯ್ಯ ಬಾರೊ ಸದ್ಗುರುಸ್ವಾಮಿ ಬಾರಯ್ಯ ಬಾರೊ ಮದ್ಗುರು ಸ್ವಾಮಿ ಬಾರಯ್ಯ ಬಾರೊ ಧ್ರುವ ಸ್ವರೂಪಸುಖ ನಿಜವನ್ನು ತೋರೊ ಹರುಷಾನಂದದನುಭವ ಬೀರೊ ಗುರುತವಾಗ್ಯೆನ್ನೊಳು ನಿತ್ಯವಿರೊ ತರಣೋಪಾಯದ ನಿಜಬೋಧ ನೀ ಸಾರೊ 1 ಕಣ್ಣುಕೆಂಗೆಂಡುತಾವೆ ಕಾಣದೆ ನಿಮ್ಮ ಪುಣ್ಯಚರಣ ತೋರೊ ಘನ ಪರಬ್ರಹ್ಮ ಚಿಣ್ಣಕಿಂಕರ ಅತಿದೀನ ನಾ ನಿಮ್ಮ ಧನ್ಯ ಧನ್ಯಗೈಸುವದೆನ್ನ ಜನುಮ 2 ಚಾಲ್ವರುತಾವೆ ಮನೋರಥಗಳು ಆಲೇಶ್ಯ ಮಾಡದಿರು ನೀ ಕೃಪಾಳು ಮೇರೆದಪ್ಪಿ ಹೋಗುತಿದೆ ದಿನಗಳು ಬಲು ಭಾಗ್ಯೊದಗಿಬಾಹುದು ನೀ ದಯಾಳು 3 ಹಾದಿ ನೋಡುತಿದೆ ಹೃದಯ ಕಮಲ ಸಾಧಿಸಿಬಾಹುದು ಮುನಿಜನ ಪಾಲ ಸಾಧುಹೃದಯ ನೀನಹುದೊ ಸಿರಿಲೋಲ ಛೇದಿಸೊ ನೀ ಬಂದು ಭವಭಯಮೂಲ 4 ಬಾರದಿದ್ದರೆ ಪ್ರಾಣ ನಿಲ್ಲದೊ ಎನ್ನ ಕರುಣಿಸಿಬಾಹುದು ಜಗನ್ಮೋಹನ ತರಳ ಮಹಿಪತಿಗೆ ನೀ ಜೀವಜೀವನ ಕರೆದು ಕರುಣ ಮಳೆಗೈಸು ಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸಗುಣ ನಿರ್ಗುಣ ಬಾರಯ್ಯ ಬ್ರಹ್ಮಾನಂದ ಸುಖವು ದೋರಯ್ಯ ಧ್ರುವ ಕಣ್ಣು ಬಡೆಯುತದೆ ನಿಮ್ಮ ನೋಡೇನೆಂದು ಪುಣ್ಯಚರಣ ಸುಪ್ರಭೆದೋರೋ ನೀ ಬಂದು ಧನ್ಯಧನ್ಯಗೈಸುವದೋ ಕೃಪಾಸಿಂಧು ಎನ್ನೊಡೆಯ ನೀನಹುದೋ ದೀನಬಂಧು 1 ಅನುದಿನ ಸುಸೇವೆ ನಿಮ್ಮ ಮಾಡೇನೋ ಕ್ಷಣಕ್ಕೊಮ್ಮೆ ಸ್ವರೂಪ ನಾನೋಡೇನೋ ಘನ ಸುಖದೊಳು ನಾ ಬೆರೆದಾಡೇನೋ ನೆನೆವಂಥ ದಾಸರ ನಿಮ್ಮ ಕೂಡೇನೋ 2 ಹೃದಯದೊಳು ನಿಜವಾಗಬೇಕಿಗ ಸದಾಸರ್ವದಾ ಮಾಡೋ ಏನ್ನೊಳೀವ್ಹಾಂಗ ಪಾದಪದ್ಮಕ್ಯೋಗ್ಯ ಮಾಡೋ ಮಹಿಪತಿಗೆ ಇದೆ ಪುಣ್ಯ ನೋಡಯ್ಯ ಕುಲಕೋಟಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು