ಒಟ್ಟು 7 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದನೆಂದೆನಿಸಿದ ಕೌಸಲ್ಯದೇವಿಗೆ ರಾಮ ಎನಬಾರದೆ ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ 1 ಶಿಶುವಾಗಿ ಅವತಾರ ಮಾಡಿದ ದಶರಥನಲಿ ರಾಮ ಎನಬಾರದೆ ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ 2 ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ 3 ಪಾದನಖವು ಸೋಕಿ ಪಾದನಾಶನವಾಗೆ ರಾಮ ಎನಬಾರದೆ ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ 4 ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಿ ರಾಮ ಎನಬಾರದೆ ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ 5 ಚೆಲ್ವೆ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ ವಲ್ಲಭಗ್ಹಾಕಲು ಫುಲ್ಲಲೋಚನೆ ಸೀತಾರಾಮ ಎನಬಾರದೆ 6 ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ರಾಮ ಎನಬಾರದೆ ಮಾಂಗಲ್ಯ ಬಂಧನ ಮಾಡಿದ ಮಹಾತ್ಮನು ರಾಮ ಎನಬಾರದೆ 7 ಜಗದೇಕ ಸುಂದರಿ ಜಾನಕಿಯನೆ ಗೆದ್ದ ರಾಮ ಎನಬಾರದೆ ಜಗದೀಶ ಜನಕಗೆ ಜಾಮಾತನೆನಿಸಿದೆ ರಾಮ ಎನಬಾರದೆ 8 ಮುದ್ದು ಜಾನಕಿ ಕೂಡಿ ಅಯೋಧ್ಯಕೆ ಬರುತಿರೆ ರಾಮ ಎನಬಾರದೆ ಮಧ್ಯ ಮಾರ್ಗದಿ ಬಂದಿದ್ದನು ಭಾರ್ಗವ ರಾಮ ಎನಬಾರದೆ 9 ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ ರಾಮ ಎನಬಾರದೆ ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ರಾಮ ಎನಬಾರದೆ 10 ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ರಾಮ ಎನಬಾರದೆ ದುಷ್ಟ ಕೈಕೆಯ ನಿಷ್ಠೂರ್ವೊಚನವ ಕೇಳಿದ ರಾಮ ಎನಬಾರದೆ 11 ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ ರಾಮ ಎನಬಾರದೆ ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರುಗಿದ ರಾಮ ಎನಬಾರದೆ 12 ಸತಿ ಆದೇನೆಂದಸುರೆಯ ರಾಮ ಎನಬಾರದೆ ನಾಶÀರಹಿತ ಕಿವಿ ನಾಸಿಕನಳಿಸಿದ ಶ್ರೀ ರಾಮ ಎನಬಾರದೆ 13 ದಂಡಕಾರಣ್ಯದಿ ಕಂಡು ಮಾರೀಚನ್ನ ರಾಮ ಎನಬಾರದೆ ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ ರಾಮ ಎನಬಾರದೆ 14 ಘಾತಕ ರಾವಣ ಜಗನ್ಮಾತೆನೊಯ್ಯಲು ರಾಮ ಎನಬಾರದೆ ಸೋತು ಜಟಾಯು ಯುದ್ಧವ ಮಾಡಿ ತಾ ಬೀಳಲು ರಾಮ ಎನಬಾರದೆ 15 ಒಲಿದು ಸುಗ್ರೀವಗೆ ವಾಲಿ ವಧೆಯ ಮಾಡಿ ರಾಮ ಎನಬಾರದೆ ವಾನರಗಳ ಕೂಡಿ ವಾರಿಧಿಕಟ್ಟಿದ ಶ್ರೀರಾಮ ಎನಬಾರದೆ16 ಲೋಕ ಮಾತೆಯ ಲಂಕಾನಾಥ ತಾ ಒಯ್ದಾಗ ರಾಮ ಎನಬಾರದೆ ಸೀತಾಕೃತಿಯನಿಟ್ಟಶೋಕ ವನದೊಳು ರಾಮ ಎನಬಾರದೆ 17 ಮಂಡೋದರಿಯ ಗಂಡನ್ನ ದಶಶಿರಗಳ ರಾಮ ಎನಬಾರದೆ ಚೆಂಡನಾಡಿದ ಕೋದಂಡ ಪಾಣಿಯ ಶ್ರೀರಾಮ ಎನಬಾರದೆ 18 ಪ್ರೀತಿಂದ್ವಿಭೀಷಣಗೆ ಪಟ್ಟವಗಟ್ಟಿ ರಾಮ ಎನಬಾರದೆ ಸಿಂಧು ದಾಟಿದ ರಾಮ ಎನಬಾರದೆ 19 ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ ರಾಮ ಎನಬಾರದೆ ಶ್ರೀದೇವಿ ಸಹಿತ ಪಟ್ಟಣ ಹೊಕ್ಕ ಪಟ್ಟಾಭಿರಾಮ ಎನಬಾರದೆ20 ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ರಾಮ ಎನಬಾರದೆ ಮುಕ್ತಿದಾಯಕ ಮುಂದೆ ಬಿಡದೆ ಕಾಪಾಡುವ ರಾಮ ಎನಬಾರದೆ21 ಪತ್ನಿ ವಾರ್ತೆಯ ತಂದ ಪವನಸುತಗೆ ಒಲಿದ ರಾಮ ಎನಬಾರದೆ ಸತ್ಯ ಲೋಕದ ಆಧಿಪತ್ಯವ ಕೊಟ್ಟ ಶ್ರೀ ರಾಮ ಎನಬಾರದೆ22 ರಾಮ ರಾಮನು ಎಂದು ಕÀರೆಯೆ ಭಕ್ತಿಯ ನೋಡಿ ರಾಮ ಎನಬಾರದೆ ಪ್ರೇಮದಿ ತನ್ನ ನಿಜಧಾಮವ ಕೊಡುವೋನು ರಾಮ ಎನಬಾರದೆ 23 ಅರಸಾಗಯೋಧ್ಯವನಾಳಿ ಯದುಕುಲದಲಿ ರಾಮ ಎನಬಾರದೆ ಹರುಷದಿ ಭೀಮೇಶ ಕೃಷ್ಣನಾಗ್ಯುದಿಸಿದ ರಾಮ ಎನಬಾರದೆ 24
--------------
ಹರಪನಹಳ್ಳಿಭೀಮವ್ವ
ನಂಬು ಮನವೆ ರಾಮಚಂದ್ರನಾ ದ | ಯಾಂಬು ನಿಧಿ ಸದ್ಗುಣ ಸಾಂದ್ರನಾ|| ನಂಬಿದ ಭಕ್ತ ಕುಟುಂಬಿಯೆನಿಸುವ| ಅಂಬುಜನಾಭನ ಹಂಬಲವಿಡಿದು ಪ ದಶರಥ ಕೌಸಲ್ಯ ಬಸುರಿಲಿ ಬಂದು| ಋಷಿಮಖ ರಕ್ಷಿಸಿ ಶರದಿ|| ಅಸುರೆಯ ಭಂಗಿರಿಸಿ ನಡೆಯಲಿ|ಮುನಿ| ಅಸಿಯಳುದ್ದರಿಸಿ ಉಂಗುಟದಲಿ| ಅಸಮ ಧನುವೆತ್ತಿ ವಸುಧಿಯ ಮಗಳ ವ ರಿಸಿಕೊಂಡು ಬಂದನು ಕುಶಲವಿಕ್ರಮನಾ1 ಜನಕನ ವಚನಕ ಮನ್ನಿಸಿ|ಸತಿ| ಅನುಜನೊಡನೆ ವಿಹರಿಸಿ| ವನಚರ ಭೂಚರ ನೆರಹಿಸಿ|ದಾಟಿ| ವನಧಿಯೊಳಗ ಗಿರಿಬಂಧಿಸಿ|| ಮುನಿದು ಮರ್ದಿಸಿ ದಶಾನನ ಮುಖ್ಯ| ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ2 ಸುರರಿಗೆ ನೀಡಿದಾನಂದನು|ಸೀತೆ| ವರಿಸಿ ಅಯೋಧ್ಯಕ ಬಂದನು| ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು| ವರ ಮಹಿಪತಿ ನಂದನೊಡೆಯನು|| ಅರಿತು ಸದ್ಬಾವತಿ ಸರಿಸಲಿ ಸದ್ಗತಿ| ಶೆರೆವಿಡಿದೆಳೆತಹದರಿಯಲೋ ನಾಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ಈಗ ನವಮೋಹನ ರಘುರಾಮನೆ ನೀನು ಬಾ ಬೇಗ ಪ. ದಶರಥನುದರದಿ ಜನಿಸಿ ಅಸುರ ತಾಟಕಿಯನು ಸಂಹರಿಸಿ ಋಷಿಗಳ್ಯಾಗವ ಕಾಯ್ದದು ನೀನು ಋಷಿ ಪತ್ನಿಯರನು ಉದ್ಧರಿಸೀ ಪತಿವ್ರತೆಯೆನಿಸಿದ ಅತುಳ ಮಹಿಮ ಶ್ರೀರಾಮ ಬಾ ಬೇಗ ಅತುಳ ಮಹಿಮ ಶ್ರೀರಾಮ ಬಾ ಬೇಗ1 ಶಿವಧನುವೆತ್ತಿದ ಧೀರ ಸೀತಾದೇವಿಯ ಕರವನೆ ಪಿಡಿವಾ ತವಕದಿ ಮುರಿದಾಯೋಧ್ಯಯಾಳಿದ ಶ್ರೀ ಶ್ರೀನಿವಾಸನೆ ನೀನು ಬಾ ಬೇಗ ಸುಖಾಸನಕೆ 2
--------------
ಸರಸ್ವತಿ ಬಾಯಿ
ನೀಲಕಂಠನ ಸುತಗಭಿನಮಿಸಿ ಆದಿಬ್ರಹ್ಮನ ಸತಿಯಳ ಭಜಿಸಿ ನೀಲವರ್ಣನು ಲಕ್ಷ್ಮೀಲೋಲನ ದಯದಿಂದ ಪಾಲಿಸಿದರೆ ಪಾಡಿ ಪೊಗಳುವೆನು ಪ ಜಯ ಜಯ ಭೀಮ ಭಾರತಿಗೆ ಜಯ ಜಯ ಧರ್ಮ ಭೀಮಾರ್ಜುನರಿಗೆ ಜಯ ದ್ರೌಪದಿ ನಕುಲ ಸಾದೇವಗೆ .......... ........... ............ 1 ಉಕ್ಕುವೊಯೆಣ್ಣೆಯೊಳಗೆ ನೋಡಿ ಕೊಟ್ಟೇನೆನುತ ಪರಮುತ್ಸವದಿಂದಲಿ ಪೃಥಿವಿರಾಯರಿಗ್ವಾಲೆ ಬರೆದ ರಾಯ 2 ದಿಕ್ಕು ದಿಕ್ಕಿನ ರಾಜರು ಬರಲು ಕೃಷ್ಣ್ಣೆಸ್ವಯಂವರ ನೋಡಬೇಕೆನುತ ವಿಪ್ರವೇಷವÀ ಧರಿಸಿ ಹೆತ್ತಮ್ಮನ ಸಹಿತಾಗಿ ಸತ್ಯಪಾಂಡವರು ಬಂದರು ಬ್ಯಾಗ 3 ಬಲವಂತ ರಾಯರೆಲ್ಲರು ತಾವು ಬಲುಮೆಯಿಂದಲಿ ಧನುವೆತ್ತಿ ಬೀಳೆ ಹಲಧರನನುಜ ತಾ ಚೆಲುವ ಪಾರ್ಥನ ನೋಡಿ ಬಲವಕೊಟ್ಟನು ಭೀಮಾರ್ಜುನಗೆ 4 ಸಾದೇವನನುಜ ಸುಂದರ ಪಾರ್ಥ ಆದಿಮೂರುತಿಯ ಪಾದಕ್ಕೆ ನಮಿಸಿ ಕಾದಯೆಣ್ಣೆಯ ನೋಡಿ ಕಟ್ಟಿದ ಮೀನವ ತಾ ಧನುವೆತ್ತಿ ಹೊಡೆದನಾಗ 5 ಚೆಲ್ಲೆಗಂಗಳ ದ್ರೌಪದಿದೇವಿ ವಲ್ಲಭ ಪಾರ್ಥಗೊಲಿದು ಬ್ಯಾಗ ಮಲ್ಲಮರ್ದನಸಖನಲ್ಲಿ ನಡೆದು ಬಂದು ಮಲ್ಲಿಗೆ ಮಾಲೆ ಹಾಕಿದಳಾಗ 6 ವಿಪ್ರ ಕ್ಷತ್ರಿಯರೊ ದಾವಕುಲವೊ ನೆಲೆ ಕಾಣದಲೆ ಮಾಜದೆ ನಿಮ್ಮ ಮರ್ಮಗಳ್ಹೇಳಬೇಕೆಂದು ಕೇಳುತ್ತಿದ್ದನು ಕಂಗೆಡುತ ರಾಯ 7 ಮಚ್ಛಯೆಸೆಯಲು ಮಗಳ ನಾನು ಕೊಟ್ಟೇನೆನುತ ನಿಶ್ಚಯವ ಮಾಡಿ ಇಷ್ಟುವಿಚಾರದಿಂದೀಗೇನು ಫಲವೆಂದು ಸತ್ಯಧರ್ಮಜ ನುಡಿದನು ನಗುತ 8 ಕೇಳುತ ಕುಂತಿಸುತರುಯೆಂದು ಭಾಳ ಸಂಭ್ರಮದಿ ಪಾದವ ತೊಳೆಯೆ ಕಾಲ ನೀಡಲು ಕಂಡು ತಾ ಜಾರಿ ಹಿಂದಕ್ಕೆ ಸರಿದ ರಾಜ9 ಸತ್ಯವತಿಯ ಸುತರ್ಹೇಳುತಿರೆ ಮತ್ತಾಗೆರೆದನು ಮಗಳ ಧಾರೆ ಮುತ್ತು ಮಾಣಿಕ್ಯದ ಮಂಗಳಸೂತ್ರವ ಕಟ್ಟಿ ಕೊಟ್ಟನೈವರಿಗೆ ದ್ರೌಪದಿಯನಾಗ 10 ಲಾಜಾಹೋಮವು ಭೂಮಾನಂತರದಿ ಮೂರ್ಜಗದೊಡೆಯ ಕೃಷ್ಣನ ಸಹಿತ ರಾಜಾಧಿರಾಜರೈವರು ಕುಳಿತಿರೆ ಕೃಷ್ಣ ರಾಜ ಧರ್ಮರ ವಾಮಭಾಗದಲಿ 11 ರುಕ್ಮಿಣಿದೇವಿ ಪಾರ್ವತಿ ಗಂಗಾ ಸತ್ಯಭಾಮೇರ ಸಹಿತಾಗಿ ಬಂದು ಸತ್ಯ ಪಾಂಡವರಿಗೂಟಣಿ (ಉರುಟಣೆ?) ಮಾಡಬೇಕೆಂದು ಕೃಷ್ಣೆ ನೀಯೇಳೆಯೇಳೆನುತಿದ್ದರು 12 ಕಂಜನೈಯ್ಯನು ಕಡೆನೋಟದಲಿ ತಂಗಿ ಕೃಷ್ಣೆಯ ಮುಖವನು ನೋಡಿ ಅಂಜದಲ್ಹೇಳುತಲೈವರ ಗುಣಗಳ ಹಂಗೀಸೂಟಾಣಿ ಮಾಡಬೇಕೆಂದನು 13 ಕನ್ನೆ ದ್ರೌಪದಿ ಅರಿಷಿಣ ಪಿಡಿದು ತನ್ನ ಪತಿಗೆ ಎದುರಾಗಿ ನಿಂತು ಸುಮ್ಮನೆ ರಾಜ್ಯವ ಬಿಟ್ಟು ವನವನಾ ತಿರುಗೋ ಧsÀರ್ಮರೇ ನಿಮ್ಮ ಮುಖ ತೋರಿರೆಂದಳು 14 ಕಂಕಭಟ್ಟೆನಿಸುವೊ ದೊರೆಗಳಿಗೆ ಕುಂಕುಮ ಹಚ್ಚುವೆ ಕುಶಲದಿಂದ ಪಂಚಾಂಗ ಪಠಿಸುವ ಪಾಣಿಯ ಪಿಡಿದು ನಾ ಮುಂಚೆ ಗಂಧವ ಹಚ್ಚುವೆನೆಂದಳು 15 ಯಿಟ್ಟಸತಿಯ ಅನುಜರನೆಲ್ಲ ಗಟ್ಟಿ ಹೃದಯಕ್ಕೆ ಬುಕ್ಕಿ ್ಹಟ್ಟು ಪರಿಮಳ ಹಚ್ಚಿ ಅಚ್ಚ ಮಲ್ಲಿಗೆ ಹಾರ ಹಾಕುವೆನೆಂದಳು 16 ಶಾಂತಧರ್ಮರ ಚರಣಕ್ಕೆ ಎರಗಿ ಮಂತ್ರಿಭೀಮನ ಮುಂಭಾಗದಲಿ ಕಾಂತರ ಮುಖಕ್ಕೆ ಹಚ್ಚುವೆನೆಂದಳು 17 ಬಂದೇಕಚಕ್ರನಗರದಲ್ಲಿ ಬಂಡಿಲನ್ನವನುಂಡು ¨ಕಾಸುರನ ತುಂಡು ಮಾಡ್ಯವನ ತೋರಣ ಕಟ್ಟಿದ ತೋಳಿಗೆ ಗಂಧವ ಹಚ್ಚೇನೆಂದಳು ನಗುತ 18 ಇಟ್ಟ ವಿಷದ ಲಡ್ಡಿಗೆಯ ಮೆದ್ದು ಭಿಕ್ಷÀದನ್ನವು ಬರಿಯಾಗದಲೆ ಹುಟ್ಟುಹಿಡಿದು ಅಟ್ಟುಂಬೋ ಪುರುಷರಿಗೆ ಬು- ಕ್ಕಿ ್ಹಟ್ಟು ಪರಿಮಳ ಹಾಕುವೆನೆಂದಳು 19 ಕಪಿಗಳೊಳಗೆ ಶ್ರೇಷ್ಠರುಯೆನಿಸಿ ಅತಿ ಬ್ಯಾಗದಿಂದ ಕೌರವರ ಕುಲ ಹತವ ಮಾಡ್ಯತಿಯಾಗೋ ಪತಿಗೆ ಮಾಲೆಯ ಹಾಕಿ ಅತಿ ಭಕ್ತಿಲಿಂದೆರಗಿದಳಾಗ 20 ಸರಸಿಜಮುಖಿ ದ್ರೌಪದಿದೇವಿ ಅರಸು ಅರ್ಜುನಗೆದುರಾಗಿ ನಿಂತು ಅರಿಷಿಣ ಕುಂಕುಮ ಪಿಡಿದು ಸ್ತ್ರೀರೂಪವ ಧರಿಸುವ ನಿಮ್ಮ ಮುಖ ತೋ(ರಿ)ರೆಂದಳು 21 ತಂದು ಗಜವ ತೋ
--------------
ಹರಪನಹಳ್ಳಿಭೀಮವ್ವ
ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ಕೋಲ ಪ. ಧಿಟ್ಟೆ ನಾನೆಂಬೋದು ಸೃಷ್ಟಿಕರ್ತನೆ ಬಲ್ಲಗಟ್ಯಾಗಿ ನಿನ್ನ ಗುಣಗಳಗಟ್ಯಾಗಿ ನಿನ್ನ ಗುಣಗಳ ವರ್ಣಿಸಲು ಸಿಟ್ಟು ಬಂದಿತು ಸಭೆಯೊಳು1 ಗಂಡನ ಬಳಗವ ಕಂಡರೆ ನಿನಗಾಗದುಲೆಂಡರ ಮನೆಗೆ ನಡೆದ್ಹೋಗಿಲೆಂಡರ ಮನೆಗೆ ನಡೆದ್ಹೋಗಿ ಸೇರಿದ್ದುಪಂಡಿತರು ಕಂಡು ನಗುತಾರೆ 2 ಘಟ್ಯದೆಗಾರಳು ಪೆಟ್ಟಿಗಂಜುವಳಲ್ಲಎಷ್ಟು ಧೈರ್ಯವೆ ಎಲೆನಾರಿಎಷ್ಟು ಧೈರ್ಯವೆ ಎಲೆನಾರಿ ನಿನ್ನ ಕೂಡಕೃಷ್ಣ ಕಡಿ ಬೀಳೋ ತೆರನಂತೆ 3 ಮುದದಿಂದಲೆ ದ್ವಾರಕಾಸದನದೊಳಗ್ಹೋಗಿಕದನವ ಹೂಡಿ ಕೆಡಿಸುವೆಕದನವ ಹೂಡಿ ಕೆಡಿಸುವೆ ನಿನ್ನಗುಣಕೆಮದನನಯ್ಯನೆಂತು ಮನಸೋತ4 ಹಲವು ರಾಯರ ಗೆದ್ದ ಬಲುಧೀರರೆಲ್ಲನಿನ್ನ ಬಲೆಯೊಳು ಬಿದ್ದು ಬಳಲೋರುಬಲೆಯೊಳು ಬಿದ್ದು ಬಳಲೋರು ಇದ ಕಂಡುಬಲರಾಮ ತಾನು ನಗುತಾನ5 ಸುರರು ಜರಿದು ನಾರಿಹರಿಯು ಗುಣಪೂರ್ಣ ನೆನುತಲೆಹರಿಯು ಗುಣಪೂರ್ಣ ನೆನುತಲೆ ಮಲ್ಲಿಗೆಸರವ ಹಾಕಿದಿಯೆ ಕೊರಳಿಗೆ 6 ಕೇಳೆ ರುಕ್ಮಿಣಿ ನಿನ್ನ ಭಾಳ ಚಾಪಲ್ಯ ನೋಡಿಹೇಳ ಕೇಳದಲೆ ಹಿರಿಯರಹೇಳ ಕೇಳದಲೆ ಹಿರಿಯರ ಕೃಷ್ಣಯ್ಯಭೋಳೆ ತನದಿಂದ ಮದುವ್ಯಾದ 7 ಗಂಡನ ಎದುರಿಗೆ ಗಂಡುಗಚ್ಚಿಯ ಕಟ್ಟಿಗಂಡಸಿನಂತೆ ಧನುವೆತ್ತಿಗಂಡಸಿನಂತೆ ಧನುವೆತ್ತಿ ಕಾದಿದಬಂಡುಗಾರತಿಯೆನಿನ ತಂಗಿ8 ಅಕ್ಕ ತಂಗಿಯರ ಶೌರ್ಯ ಶಕ್ಯವೆ ವರ್ಣಿಸಲುನಕ್ಕು ನಾರಿ ಸರಿಯವರುನಕ್ಕು ನಾರಿ ಸರಿಯವರು ರಾಮೇಶಗೆತಕ್ಕವರೇನೆ ಮಡದಿಯರು ಕೋಲ9
--------------
ಗಲಗಲಿಅವ್ವನವರು