ಕಂದ ಕೃಷ್ಣ ನೀನು ಪವಡಿಸಲೆಂದು ನಾ-
ನೊಂದು ಕಥೆಯ ಪೇಳ್ವೆನೋ
ನಂದನನೇ ಒಂದು ಕಥೆಯ ಪೇಳ್ವೆನು ಪ
ಹಿಂದಿನ ಯುಗದಲ್ಲಿ ಶ್ರೀರಾಮನೆಂಬೊರ್ವ
ಕಂದ ಕೌಸಲ್ಯಗಾದ
ಮುಂದೆ ಪೇಳು ಹುಂಕಾರದಿ ಕೇಳಿದೆ
ಚಂದವಾದೀ ಕಥೆಯ ಸುಧೇಯ 1
ಆತನ ಪತ್ನಿ ಸುಶೀಲೆ ಸೀತೆಯೆಂದು
ಖ್ಯಾತಳಾದಳು ಜಗದಿ
ಮೂಡಿದನೆಂದೆ ಹುಂ ಮಾತೆ ಮುಂದಕೆ ಪೇಳು
ಸೀತಾರಾಮರ ಕಥೆಯು ಸುಶ್ರಾವ್ಯ 2
ಪಂಚವಟಿಯಲಿ ಸಂಚರಿಸುತ್ತಿರೆ ಪಂಚದ್ವಯಾನನನು
ಕೊಂಚ ಮಾತ್ರ ಹುಂಕಾರವ ನುಡಿ ವಿ-
ರಿಂಚಿ ಪಿತನು ಮುನಿದಾ ಸದ್ದಾದ3
ಮಿಥ್ಯಾಯೋಗಿ ಯಾಗಿ ಸತ್ಯಮಹಿಮಳ ತಾ-
ನೆತ್ತಿ ಕೊಂಡೋದನಯ್ಯ
ಒತ್ತರಿಸಿತು ಕೋಪ ಮತ್ತೆ ನುಡಿದ ಹರಿ
ಎತ್ತ ಸೌಮಿತ್ರೆ ಧನುರ್‍ಧರರ ಧನುರೇತ್ತ ಸೌಮಿತ್ರಿ ಧನುರ್ 4
ಪುಟ್ಟ ಕೂಸÉ ಆರ್ಭಟವೆಷ್ಟು ಮಾಡುವೆ
ನಿಟ್ಟಿಪುದಸದಳವು
ಥsÀಟ್ಟನೆ ಮಲಗೈಯ್ಯಾ ದಿಟ್ಟಿ ನರಸಿಂಹವಿಠಲ
ಪಟ್ಟರಿಸುವೆನಯ್ಯ ರಂಗೈಯ್ಯಾ ಪಟ್ಟರಿಸುವೆನಯ್ಯಾ 5