ಜಯ ಜಯ ಭೀಮಸೇನ ಪ.
ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ.
ಅಂಬ ಪಾವಕ ದೀನೋದ್ಧಾರಿ1
ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2
ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3
ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4
ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5