ಹೊರೆಯಲು ಸರ್ವಸ್ವವನು ನುಂಗಿತು ಪ
ಚಿನ್ನ ಚಿಗುರು ಕಂಚು ತಾಮ್ರವನು ನುಂಗಿತು
ಮಣಿ ಮುರುಗಳ ನುಂಗಿತು
ಬಣ್ಣ ಬಂಗಾರವ ನುಂಗಿತು ಹೊಟ್ಟೆಗೆ
ಸಣ್ಣ ಹೆಣ್ಮಕ್ಕಳ ನೆರೆ ನುಂಗಿತು 1
ಮಡದಿ ಮಕ್ಕಳ ಮೇಲಣಾಸೆಯ ನುಂಗಿತು
ಜಡದಿ ಜನರ ಸತ್ವಗಳ ನುಂಗಿತು
ಬಡವ ಬಲ್ಲಿದರನು ಬಿಡದಪ್ಪಿ ನುಂಗಿತು
ಪೊಡವಿ ಯೊಳಗಿರುವಾಸೆಯನು ನುಂಗಿತು 2
ಎಡಬಲದವ ರೊಡವೆಯ ಕದ್ದು ನುಂಗಿತು
ಕಡಕಟ್ಟ ತಂದು ಕೊಡದೆ ನುಂಗಿತು
ಕೊಡುವ ಬಿಡುವ ಧನಿಯರ ಕೈಯ ನುಂಗಿತು
ಕಡಲೋಭಿ ವಿತ್ತವನೆಲ್ಲ ನುಂಗಿತು 3
ದುಡ್ಡಿಗೆ ಪಾವಕ್ಕಿಯ ತಂದು ರಾಗಿಯ
ದೊಡ್ಡಂಬಲಿ ಕಾಸಿದರೆ ನುಂಗಿತು
ಗುಡ್ಡದಂತವರೆಲ್ಲ ಮಣಿಗೆ ಮಂಡಿಸಿಕೊಂಡು
ದೊಡ್ಡಪ್ಪಗಳಿಗೆಲ್ಲ ಸುರಿದುಂಡಿತು4
ಮುನ್ನ ಮಾಡಿದ ಹೊಲ ಮನೆಯನ್ನು ನುಂಗಿತು
ಜನ್ನೆ ಆಕಳ ಮಹಿಷಿಯ ನುಂಗಿತು
ಅನ್ನವೆ ನುಂಗಿತು ಜನರನ್ನು ಲಕ್ಷ್ಮಿಯನಾಳ್ದ
ವನದಾಸರಿಂಗೊಲಿಯಿತು 5